ದಾವಣಗೆರೆ: ಸಿಎಂ ಅವರ ಮನೆಯಲ್ಲಿ ನಾಯಿ ಸತ್ತಾಗ ಮರುಗುವ ರೀತಿ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ಆದಾಗ ಮರಗುತ್ತಿಲ್ಲ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಅರುಣ್ ಕುಮಾರ್, ಸಿಎಂ ಬಸವರಾಜ್ ಬೊಮ್ಮಾಯಿ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ನಗರದಲ್ಲಿ ಇಂದು ವರದಿಗಾರರು ಕೂಟದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಹಿಂದೂಪರ ಕಾರ್ಯಕರ್ತರಿಗೆ ರಕ್ಷಣೆ ನೀಡುವಲ್ಲಿ ಎಡವಿದೆ. ಹಿಂದೂ ಕಾರ್ಯಕರ್ತರ ಸಮಾಧಿ ಮೇಲೆ ಬಿಜೆಪಿ ಸರ್ಕಾರವನ್ನು ಕಟ್ಟಲಾಗಿದೆ. ಕೇಸರಿ ಶಾಲು ಹಾಕಿದರೆ ಕಾರ್ಯಕರ್ತರ ಮನೆಯಲ್ಲಿ ಹೆದರುವಂತಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಈ ದೇಶದಲ್ಲಿ ಅಲ್ಪಸಂಖ್ಯಾತರು ಅನ್ಯಧರ್ಮದವರಲ್ಲ ಬದಲಿಗೆ ನಾವು ಹಿಂದೂಗಳು ಈ ದೇಶದಲ್ಲಿ ಅಲ್ಪಸಂಖ್ಯಾತರಾಗಿ ಬಾಳುತ್ತಿದ್ದೇವೆ. ಬೆಳಗಾವಿ, ಶಿವಮೊಗ್ಗ, ಮಂಗಳೂರು, ಮಡಿಕೇರಿ, ಅನೇಕ ಕಡೆ ಪದೇ ಪದೆ ಹಿಂದೂ ಕಾರ್ಯಕರ್ತರ ಹಲ್ಲೆ ದಾಳಿ ನಡೆಯುತ್ತಿವೆ. ಇನ್ನು ಕಳೆದ ದಿನ ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ನಡೆದ ಬಜರಂಗದಳ ಕಾರ್ಯಕರ್ತನ ಮೇಲೆ ದಾಳಿ ಖಂಡನೀಯ, ಯೂಪಿ ರಾಜ್ಯ ಸರ್ಕಾರದ ರೀತಿಯಲ್ಲಿ ನಮ್ಮ ರಾಜ್ಯದಲ್ಲೂ ಕಾನೂನುಗಳು ಜಾರಿಯಾಗಲಿ ಎಂದರು.
ಇನ್ನೂ ಬೆಳಗಾವಿಯಲ್ಲಿ ಶ್ರೀರಾಮ ಸೇನೆ, ಹಾಗೂ ಹಿಂದೂರಾಷ್ಟ್ರ ಸೇನೆ ಜಿಲ್ಲಾಧ್ಯಕ್ಷ ರವಿ ಕೋಕಿತ್ಕರ್ ಮೇಲೆ ಗುಂಡಿನ ದಾಳಿ ನಡೆದ ಬಳಿಕ ಸಿಎಂ ಬಸವರಾಜ್ ಬೊಮ್ಮಾಯಿ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆದರೆ, ಅವರ ಇಡೀ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದರೂ ಕೂಡ ಪದೇ ಪದೆ ಹಿಂದೂ ಕಾರ್ಯಕರ್ತರ ಮೇಲೆ ದಾಳಿ ನಡೆಯುತ್ತಿರುವುದು ದುರಂತ ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಅರುಣ್ ಕುಮಾರ್ ಸರ್ಕಾರದ ವಿರುದ್ಧ ಕಿಡಿಕಾಡಿದರು.
ಏನಿದು ಘಟನೆ, ಪ್ರತಿಭಟನೆ ಯಾಕೆ - ಮಚ್ಚಿನಿಂದ ಯುವಕನ ಮೇಲೆ ಕೊಲೆಗೆ ಯತ್ನ : ಶಿವಮೊಗ್ಗ ಜಿಲ್ಲೆಯ ಸಾಗರದ ಹೊಸ ಬಸ್ ನಿಲ್ದಾಣದ ಬಳಿಯಲ್ಲಿರುವ ಕಚೇರಿಗೆ ಸುನೀಲ್ ಎಂಬ ಯುವಕ ಬೈಕ್ ಮೂಲಕ ತೆರುಳುತ್ತಿದ್ದ. ಈ ವೇಳೆ ಅಲ್ಲಿಯೇ ಇದ್ದ ಯುವಕನೊಬ್ಬ ತನ್ನ ಬಳಿಗೆ ಸುನೀಲ್ನನ್ನು ಕರೆದಿದ್ದ ಎನ್ನಲಾಗಿದೆ. ಆತನ ಸಮೀಪ ಹೋಗುತ್ತಿದ್ದಂತೆ ತನ್ನ ಬೈಕ್ನಲ್ಲಿದ್ದ ಮಚ್ಚು ತೆಗೆದು ಬೀಸಿದ್ದಾನೆ. ಸುನೀಲ್ ಸದ್ಯ ಆತನಿಂದ ತಪ್ಪಿಸಿಕೊಂಡು ಬಂದಿದ್ದಾನೆ ಎಂದು ಹೇಳಲಾಗಿದೆ. ಈ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿತ್ತು. ಇದು ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು.
ಶ್ರೀರಾಮಸೇನೆ ಮುಂಖಡನ ಮೇಲೆ ಫೈರಿಂಗ್ : ಮತ್ತೊಂದೆಡೆ, ಬೆಳಗಾವಿ ನಗರದಿಂದ ಹಿಂಡಲಗಾ ಗ್ರಾಮಕ್ಕೆ ಜನವರಿ 7ರಂದು ಸಂಜೆ ವೇಳೆ ಸಂಘಟನೆಯೊಂದರ ಜಿಲ್ಲಾಧ್ಯಕ್ಷ ರವಿ ಕೋಕಿತಕರ್ ಅವರು ಕಾರಿನಲ್ಲಿ ತೆರುಳುವಾಗ ಬೈಕ್ನಲ್ಲಿ ಬಂದ ದುಷ್ಕಮಿಗಳು ಫೈರಿಂಗ್ ಮಾಡಿದ್ದರು. ಕಾರಿನಲ್ಲಿ ರವಿ ಸೇರಿ ನಾಲ್ವರು ಇದ್ದರು. ದಾಳಿಯಲ್ಲಿ ರವಿ ಮತ್ತು ಕಾರು ಡ್ರೈವ್ ಮಾಡುತ್ತಿದ್ದ ವ್ಯಕ್ತಿಗೆ ಗುಂಡು ತಗುಲಿ ಗಾಯಗೊಂಡಿದ್ದರು. ಈ ಪರಿಣಾಮ ರವಿ ಗದ್ದಕ್ಕೆ ಮತ್ತು ಮನೀಜ್ ದೇಸೂರಕರ ಕೈಗೆ ಗುಂಡು ತಗುಲಿತ್ತು. ಸದ್ಯ ಗಾಯಗೊಂಡಿದ್ದ ರವಿ ಕೋಕತ್ಕರ್ ಮತ್ತು ಡ್ರೈವರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಈ ಬಗ್ಗೆ ತನಿಖೆ ನಡೆಸಲು ಬೆಳಗಾವಿ ಜಿಲ್ಲೆ ಪೊಲೀಸ್ ಕಮಿಷನರ್ ಬೋರಲಿಂಗಯ್ಯ ನೇತೃತ್ವದಲ್ಲಿ ನಾಲ್ಕು ವಿಶೇಷ ತಂಡಗಳನ್ನು ರಚಿಸಿಲಾಗಿತ್ತು. ಇನ್ನು ಘಟನೆ ನಡೆದ 18 ಗಂಟೆಯಲ್ಲೇ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಬೆಳಗಾವಿ ನಿವಾಸಿ ಅಭಿಜಿತ್ ಭಾತ್ಕಾಂಡೆ, ಬಸ್ತವಾಡ ಗ್ರಾಮದ ನಿವಾಸಿ ರಾಹುಲ್ ಕೊಡಚವಾಡ ಹಾಗೂ ಜ್ಯೋತಿಬಾ ಗಂಗಾರ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ :ಬೆಳಗಾವಿ - ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷನ ಮೇಲೆ ಫೈರಿಂಗ್: ಬೈಕಿನಲ್ಲಿ ಬಂದ ದುಷ್ಕರ್ಮಿಗಳಿಂದ ಕೃತ್ಯ