ETV Bharat / state

ಧಾರಾಕಾರ ಮಳೆಗೆ ದಾವಣಗೆರೆ ಜಿಲ್ಲೆ ತತ್ತರ: ನದಿ ಪಾತ್ರದಲ್ಲಿ ಪೊಲೀಸರ ಕಟ್ಟೆಚ್ಚರ

author img

By

Published : Jul 25, 2021, 9:11 AM IST

Updated : Jul 25, 2021, 11:53 AM IST

ದಾವಣಗೆರೆಯಲ್ಲಿ ಸುರಿಯುತ್ತಿರುವ ಭಾರಿ ಮಳೆಯು ಜನಸಾಮಾನ್ಯರ ಬದುಕನ್ನು ಬೀದಿಗೆ ತಂದು ನಿಲ್ಲಿಸಿದೆ. ಪ್ರವಾಹ ಭೀತಿ ಎದುರಾಗಿರುವ ಪ್ರದೇಶಗಳ ಜನರನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.

ಧಾರಾಕಾರ ಮಳೆಗೆ ಬೆಣ್ಣೆನಗರಿ ತತ್ತರ
ಧಾರಾಕಾರ ಮಳೆಗೆ ಬೆಣ್ಣೆನಗರಿ ತತ್ತರ

ದಾವಣಗೆರೆ: ಪಶ್ಚಿಮ ಘಟ್ಟಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿದೆ. ಈ ಮಳೆ ನೀರು ಸಂಗ್ರಹದಿಂದ ಬೆಳೆ ಬೆಳೆಯಲು ಅನುಕೂಲವಾಗತ್ತೆ ಅಂತಾ ರೈತರು ಖುಷಿ ಪಡ್ತಿದ್ದಾರೆ. ಆದ್ರೆ, ಜನ ಸಾಮಾನ್ಯರ ಬದುಕು ಬೀದಿಗೆ ಬಿದ್ದಿದೆ.

ಧಾರಾಕಾರ ಮಳೆಗೆ ದಾವಣಗೆರೆ ಜಿಲ್ಲೆ ತತ್ತರ

ಜಿಲ್ಲೆಯ ಹೊನ್ನಾಳಿ, ಹರಿಹರ ಹಾಗೂ ನ್ಯಾಮತಿ ತಾಲೂಕಿನ ನದಿ ಪಾತ್ರದ ಹಳ್ಳಿಗಳು ಸಂಪೂರ್ಣವಾಗಿ ಜಲಾವೃತವಾಗಿವೆ. ಹೊನ್ನಾಳಿ ಪಟ್ಟಣದ ಬಾಲ್ ರಾಜ್ ಘಾಟ್​ನಲ್ಲಿ 22 ಮನೆಗಳು, ಹರಿಹರ ತಾಲೂಕಿನ ಗಂಗಾನಗರದಲ್ಲಿ ಹಲವು ಮನೆಗಳು ಜಲಾವೃತವಾಗಿದ್ದರಿಂದ ಅಂದಾಜು 240 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಈ ಹಿನ್ನೆಲೆ ಡಿಸಿ ಮಹಾಂತೇಶ್​ ಬೀಳಗಿ, ಶಾಸಕ ಎಂ.ಪಿ. ರೇಣುಕಾಚಾರ್ಯ ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿದ್ದಾರೆ.

ಇದನ್ನೂ ಓದಿ: ಮಳೆಯಾರ್ಭಟಕ್ಕೆ ಕರುನಾಡಲ್ಲಿ ಈವರೆಗೆ 9 ಮಂದಿ ಬಲಿ, 283 ಗ್ರಾಮಗಳು ನೆರೆಪೀಡಿತ

ತುಂಗಭದ್ರಾ ನದಿ ತುಂಬಿ ಹರಿಯುತ್ತಿರುವುದರಿಂದ ನದಿ ಪಾತ್ರದಲ್ಲಿ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ನೀರಿನ ಮಟ್ಟ ಪರಿಶೀಲಿಸಲು ಇಬ್ಬರು ಅಧಿಕಾರಿಗಳನ್ನು ನೇಮಿಸಲಾಗಿದೆ. ನೆರೆಯಿಂದ ಈಗಾಗಲೇ ಮನೆ ಕಳೆದುಕೊಂಡಿರುವವರ ನೆರವಿಗೆ ಸರ್ಕಾರ ಧಾವಿಸಬೇಕಿದೆ.

Last Updated : Jul 25, 2021, 11:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.