ETV Bharat / state

ಚನ್ನಗಿರಿಯಲ್ಲಿ ಭಾರಿ ಮಳೆ: ರಸ್ತೆಗಳು ಜಲಾವೃತ, ನೀರಿನಲ್ಲಿ ತೇಲಿದ ದ್ವಿಚಕ್ರ ವಾಹನಗಳು - davanagere rain news

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಾದಂತ್ಯ ನಿನ್ನೆ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿತ್ತು. ರಸ್ತೆಗಳ ಮೇಲೆ ನೀರು ನಿಂತ ಪರಿಣಾಮ ಬೈಕ್​ಗಳು ತೇಲಾಡುತ್ತಿದ್ದ ದೃಶ್ಯ ಕಂಡುಬಂತು.

heavy rain in channagiri taluk
ಚನ್ನಗಿರಿಯಲ್ಲಿ ಭಾರಿ ಮಳೆ
author img

By

Published : Jun 21, 2023, 7:15 AM IST

Updated : Jun 21, 2023, 1:26 PM IST

ಚನ್ನಗಿರಿಯಲ್ಲಿ ಭಾರಿ ಮಳೆ

ದಾವಣಗೆರೆ : ಕಳೆದ ಹಲವು ದಿನಗಳಿಂದ ಮುನಿಸಿಕೊಂಡಿದ್ದ ಮಳೆರಾಯ ಕೊನೆಗೂ ಕೃಪೆ ತೋರಿದ್ದಾನೆ. ನಿನ್ನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನಾದಂತ್ಯ ಧಾರಾಕಾರ ಮಳೆ ಸುರಿದಿದ್ದು, ಇಡೀ ಪಟ್ಟಣ ಅಸ್ತವ್ಯಸ್ತವಾಗಿತ್ತು. ಚನ್ನಗಿರಿ ಪಟ್ಟಣದಲ್ಲಿ ಸತತ ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದ ಕೆಲ ರಸ್ತೆಗಳು ದ್ವೀಪದಂತಾಗಿದ್ದವು.

ಮಳೆ ಅವಾಂತರ : ನಿನ್ನೆ ಸುರಿದ ಮಳೆ ಚನ್ನಗಿರಿಯಲ್ಲಿ ಸಾಕಷ್ಟು ಅವಾಂತರ ಸೃಷ್ಟಿಸಿದೆ. ಉದ್ಯೋಗಿಗಳು, ಶಾಲಾ ಕಾಲೇಜಿನ ಮಕ್ಕಳು ಮನೆ ಸೇರಲು ಪರದಾಡಿದರು. ರಸ್ತೆಗಳ ಮೇಲೆ ಭಾರಿ ಪ್ರಮಾಣದ ನೀರು ಹರಿಯುತ್ತಿದ್ದರಿಂದ ರಸ್ತೆ ಮೇಲೆ ನಿಲ್ಲಿಸಿದ ಬೈಕ್​ಗಳು ತೇಲಾಡುತ್ತಿದ್ದ ದೃಶ್ಯವನ್ನು ಸ್ಥಳೀಯರು ಮೊಬೈಲ್​ನಲ್ಲಿ‌ ಸೆರೆ ಹಿಡಿದಿದ್ದಾರೆ.

ಇದನ್ನೂ ಓದಿ : ಮಲೆನಾಡಿನಲ್ಲಿ ಮಳೆಗಾಗಿ ಪೂಜೆ ಸಲ್ಲಿಸುತ್ತಿದ್ದ ವೇಳೆಯೇ ಸುರಿದ ಧಾರಾಕಾರ ಮಳೆ - ವಿಡಿಯೋ

ಇನ್ನು ಜೂನ್ ತಿಂಗಳ ಆರಂಭದಲ್ಲೇ ಮಳೆಯಾಗಬೇಕಿತ್ತು. ಮಳೆ ಇಲ್ಲದೇ ಇಲ್ಲಿನ ರೈತರು ಹಾಗೂ ಜನ ಬಸವಳಿದಿದ್ದರು. ತಾಲೂಕಿನ ಅಡಕೆ ಬೆಳೆಗಾರರ ಪರಿಸ್ಥಿತಿಯಂತೂ ಹೇಳತೀರಾದಾಗಿತ್ತು. ಆದರೆ ನಿನ್ನೆ ಒಂದು ಗಂಟೆಗಳ ಕಾಲ ಸುರಿದ ಮಳೆಯಿಂದ ಅಡಕೆ ಬೆಳೆಗಾರರು ಹಾಗೂ ರೈತರ ಮೊಗದಲ್ಲಿ ಸಂತಸ ಮೂಡಿಸಿದೆ.‌

ಇದನ್ನೂ ಓದಿ : ಶಿವಮೊಗ್ಗದಲ್ಲಿ ಭಾರಿ ಮಳೆ : ರೈಲು ನಿಲ್ದಾಣದಲ್ಲಿ ನೀರು ಸೋರಿಕೆ .. ರಸ್ತೆಗಳು ಜಲಾವೃತ

ಶಿವಮೊಗ್ಗದಲ್ಲೂ ಭಾರಿ ಮಳೆ : ಬಿಸಿಲ ಧಗೆಯಿಂದ ಕಂಗೆಟ್ಟಿದ್ದ ಮಲೆನಾಡಿಗೆ ನಿನ್ನೆ ಮಧ್ಯಾಹ್ನ ವರುಣ ತಂಪೆರೆದಿದ್ದ. ಜಿಲ್ಲಾದ್ಯಂತ ಸುರಿದ ಧಾರಾಕಾರ ಮಳೆಗೆ ಕೆಲಕಾಲ ಜನಜೀವನ ಅಸ್ತವ್ಯಸ್ತಗೊಂಡಿತ್ತು. ಈ ಬಾರಿಯ ಮುಂಗಾರು 10 ದಿನಗಳ ಬಳಿಕ ರಾಜ್ಯಕ್ಕೆ ಆಗಮಿಸಿದ್ದು, ಮುಂಗಾರು ಬಿತ್ತನೆ ಕೂಡ ವಿಳಂಬವಾಗಿದೆ. ಇದೀಗ, ಮಳೆಯಾಗಿರುವುದು ಜಿಲ್ಲೆಯ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.

ಇದನ್ನೂ ಓದಿ : Karnataka Rain : ರಾಜ್ಯದಲ್ಲಿ ಮುಂಗಾರು ಚುರುಕು.. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಮಳೆಯಾರ್ಭಟ

ಶಿವಮೊಗ್ಗ ರೈಲ್ವೆ ನಿಲ್ದಾಣ ಸೋರಿಕೆ : ಭಾರಿ ಮಳೆಗೆ ಶಿವಮೊಗ್ಗ ನಗರದ ಸಿಟಿ ರೈಲ್ವೆ ನಿಲ್ದಾಣ ಸೋರುತ್ತಿದೆ. ಪರಿಣಾಮ ನಿನ್ನೆ ರೈಲ್ವೆ ಪ್ರಯಾಣಿಕರು ಕಿರಿಕಿರಿ ಅನುಭವಿಸಿದರು. ನಗರದ ರಸ್ತೆ ತುಂಬೆಲ್ಲಾ ನೀರು ತುಂಬಿಕೊಂಡಿದ್ದು, ಸ್ಮಾರ್ಟ್ ಸಿಟಿ ಅವೈಜ್ಞಾನಿಕ ಕಾಮಗಾರಿಯಿಂದ ನಗರದ ಕೆ.ಆರ್ ಪುರಂನಲ್ಲಿ ಅಂಗಡಿಗಳಿಗೆ ನೀರು ನುಗ್ಗಿದೆ ಎಂದು ಸಾರ್ವಜನಿಕರು ಆರೋಪಿಸಿದರು. ಹಾಗೆಯೇ, ಮಳೆರಾಯನ ಆರ್ಭಟಕ್ಕೆ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಎದುರಿನ ರಸ್ತೆ ಜಲಾವೃತವಾಗಿತ್ತು. ಈ ವೇಳೆ ಚಾಲಕನೋರ್ವ ಕಾರು ಚಲಾಯಿಸಿದ್ದರಿಂದ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಹತ್ತಾರು ಬೈಕ್​ಗಳು ಉರುಳಿ ಬಿದ್ದಿದ್ದವು. ಈ ಕುರಿತಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ : ಮಳೆಯಿಲ್ಲದೇ ಬತ್ತಿದ ಕೆರೆಗೆ ಕೊಳವೆ ಬಾವಿಯಿಂದ ನೀರು ಹರಿಸಿ ಪ್ರಾಣಿಪಕ್ಷಿಗಳ ನೀರಿನ ದಾಹ ತೀರಿಸುತ್ತಿರುವ ರೈತ

Last Updated : Jun 21, 2023, 1:26 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.