ದಾವಣಗೆರೆ : ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿ ನಿಮಜ್ಜನ ಮೆರವಣಿಗೆ ವೇಳೆ ಟ್ರ್ಯಾಕ್ಟರ್ ಟ್ರ್ಯಾಲಿಯಲ್ಲಿದ್ದ ಗಣೇಶ ಮೂರ್ತಿ ಕೆಳಗಡೆ ಬಿದ್ದ ಘಟನೆ ನಡೆದಿದೆ.
ಜಿಲ್ಲೆಯ ಚನ್ನಗಿರಿ ಪಟ್ಟಣದಲ್ಲಿ ಹಿಂದೂ ಏಕತಾ ಗಣಪತಿಯ ಮೂರ್ತಿ ನಿಮಜ್ಜನ ವೇಳೆ ಡಿಜೆ ಬಳಸಲಾಗಿತ್ತು. ಈ ಸಂದರ್ಭದಲ್ಲಿ ಪೊಲೀಸರು ಮತ್ತು ಗಣಪತಿ ಸಂಘಟನಾ ಸಮಿತಿ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದಿದೆ. 6 ಸ್ಪೀಕರ್ ಬಾಕ್ಸ್ ಗೆ ಸಂಘಟನೆ ಅನುಮತಿ ಕೇಳಿತ್ತು, ಆದ್ರೆ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದರು.
ಈ ಹಿನ್ನೆಲೆಯಲ್ಲಿ ಡಿಜೆ ಬಳಸಿದ್ದಕ್ಕೆ ಪೊಲೀಸರು ಮೆರವಣಿಗೆ ತಡೆದು ಸ್ವತಃ ತಾವೇ ಮೂರ್ತಿ ವಿಸರ್ಜನೆಗೆ ಮುಂದಾಗಿದ್ದಾರೆ. ಈ ವೇಳೆ ಟ್ರಾಕ್ಟರ್ ಟ್ರಾಲಿಯಲ್ಲಿದ್ದ ಗಣೇಶನ ಮೂರ್ತಿ ಕೆಳಗೆ ಬಿದ್ದಿದೆ. ಈ ವೇಳೆ ಸಾರ್ವಜನಿಕರು ಮತ್ತು ಪೊಲೀಸರ ನಡುವೆ ವಾಗ್ವಾದ ನಡೆದು ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.
ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಪರಿಸ್ಥಿತಿ ತಿಳಿಗೊಳಿಸಿದರು. ಬಳಿಕ ಸಮೀಪದಲ್ಲಿಯೇ ಇದ್ದ ನೀರಿನ ಹೊಂಡದಲ್ಲಿ ಗಣಪನ ಮೂರ್ತಿ ಪೊಲೀಸರು ವಿಸರ್ಜಿಸಿದರು.