ದಾವಣಗೆರೆ : ಕಳಂಕ ರಹಿತ ರಾಜಕೀಯ ವ್ಯಕ್ತಿ ಸಿದ್ದರಾಮಯ್ಯ ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಹೇಳಿದ್ದಾರೆ. ಇಂದು ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮದ ಸಿದ್ದತೆಗಳೆಲ್ಲ ನಡೆದಿದೆ. ಇದು ಸಿದ್ದರಾಮೋತ್ಸವ ಅಲ್ಲ ಸಿದ್ದರಾಮಯ್ಯ ಅಮೃತ ಮಹೋತ್ಸವ ಎಂದು ಹೇಳಿದರು.
ಇನ್ನು ಸಿದ್ದರಾಮೋತ್ಸವ ಎಂಬ ಪದ ಯಾರಿಂದ ಹುಟ್ಟಿಕೊಂಡಿತೋ ಗೊತ್ತಿಲ್ಲ, ಜನರಿಂದ ಜನರಿಗೆ ಪದ ಹುಟ್ಟಿಕೊಂಡಿದೆ ಎಂದು ಹೇಳಿದರು. ಹುಟ್ಟು ಹಬ್ಬ ಮತ್ತು ಚುನಾವಣೆ ಎರಡು ಒಂದೇ ಬಾರಿ ಬಂದಿದ್ದು ಕಾಕತಾಳೀಯ. ಇದಕ್ಕೂ ಚುನಾವಣೆಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟಪಡಿಸಿದರು.
ಎಲ್ಲರೂ ಸೋನಿಯಾ ಗಾಂಧಿ ಆಗೋದಕ್ಕೆ ಆಗೋದಿಲ್ಲ. ಪ್ರಧಾನಿ ಹುದ್ದೆ ಮನೆ ಬಾಗಿಲಿಗೆ ಬಂದರು ಬೇಡಾ ಎಂದವರು ನಮ್ಮ ನಾಯಕಿ. ಅಧಿಕಾರ ಬೇಡ ಎನ್ನುವರು ಯಾರು ಇದ್ದಾರೆ ಹೇಳಿ. ನಮ್ಮ ಪಕ್ಷದಲ್ಲಿ ಹಲವು ನಾಯಕರು ಇದ್ದಾರೆ. ಅವರಿಗೆ ಆಸೆ ಇದ್ದೇ ಇರುತ್ತದೆ. ಆ ಸಮಯದಲ್ಲಿ ಗೆದ್ದಂತಹ ಮಂತ್ರಿಗಳು, ಪಕ್ಷವು ಸಿಎಂ ಅನ್ನು ನಿರ್ಧಾರ ಮಾಡುತ್ತಾರೆ ಎಂದು ಹೇಳಿದರು.
ಕಾಂಗ್ರೆಸ್ ನಿಂದ ಬಿಜೆಪಿಗೆ ಹಲವು ನಾಯಕರು ಹೋಗುತ್ತಾರೆ ಎನ್ನುವ ಸತೀಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ರಾಜಕೀಯ ಧ್ರುವೀಕರಣ ಆಗುತ್ತಾ ಇರುತ್ತದೆ. ಆ ಪಕ್ಷದಿಂದ ಈ ಪಕ್ಷಕ್ಕೆ ಬರೋದು ಇಲ್ಲಿಂದ ಅಲ್ಲಿಗೆ ಹೋಗೋದು ಆಗುತ್ತಿರುತ್ತದೆ. ಸತೀಶ್ ಜಾರಕಿ ಹೊಳಿಯವರು ಯಾವ ಉದ್ದೇಶದಿಂದ ಹೇಳಿದ್ದಾರೋ ಗೊತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ಓದಿ : ಹಿಂದೂಗಳಿಗೆ ಖುಷಿ ಸುದ್ದಿ: ರಾಜ್ಯ ಸರ್ಕಾರದಿಂದ ಕಾಶಿ ಯಾತ್ರೆ ಯೋಜನೆ ಆರಂಭ - ಇಲ್ಲಿದೆ ಫುಲ್ ಡಿಟೇಲ್ಸ್