ETV Bharat / state

ತಾಂಜೇನಿಯಾ ದೇಶದ ಮೌಂಟ್ ಕಿಲಿಮಾಂಜರ್ ಏರಿದ ಹೊನ್ನಾಳಿಯ ಅರಣ್ಯ ರಕ್ಷಕ!

author img

By

Published : Apr 29, 2022, 6:44 PM IST

ಸಾಹಸ ತೋರಿದ ಅರಣ್ಯ ರಕ್ಷಕ ವಿಕ್ರಂ, ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ಗ್ರಾಮದವರಾಗಿದ್ದಾರೆ. ಈಗಾಗಲೇ ವಿಕ್ರಮ ಮೌಂಟ್ ಎವರೆಸ್ಟ್, ಮೌಂಟ್ ಸತೋಪಂತ್ ಪರ್ವತವನ್ನೂ ಸಹ ಏರಿ ಬಂದಿದ್ದಾರೆ..

ತಾಂಜೇನಿಯಾ ದೇಶದ ಮೌಂಟ್ ಕಿಲಿಮಾಂಜರ್ ಏರಿದ ಹೊನ್ನಾಳಿಯ ಅರಣ್ಯ ರಕ್ಷಕ !

ದಾವಣಗೆರೆ : ಜಿಲ್ಲೆಯ ಹೊನ್ನಾಳಿಯ ಅರಣ್ಯ ರಕ್ಷರೊಬ್ಬರು ತಾಂಜೇನಿಯಾ ದೇಶದಲ್ಲಿರುವ ಮೌಂಟ್ ಕಿಲಿಮಾಂಜರ್ ಪರ್ವತವನ್ನು ಏರಿ ಸಾಹಸ ಮೆರೆದಿದ್ದಾರೆ. ಸುಮಾರು 12 ದಿನಗಳ ಕಾಲ ಚಾರಣ ಮಾಡಿದ್ದ ವಿಕ್ರಮ್​, ಸುಮಾರು 5,895 ಮೀಟರ್ ಎತ್ತರದ ಮೌಂಟ್ ಕಿಲಿಮಾಂಜರ್ ಅ​​ನ್ನು ಏರುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕಳೆದ ಕೆಲ ದಿನಗಳ ಹಿಂದೆ ತಾಂಜೇನಿಯಾಗೆ ತೆರಳಿದ್ದ ವಿಕ್ರಮ್​ ಸಾಹಸಕ್ಕೆ ಹೊನ್ನಾಳಿ ಶಾಸಕ ಎಂ ಪಿ ರೇಣುಕಾಚಾರ್ಯ ಅಭಿನಂದನೆ ಸಲ್ಲಿಸಿದ್ದರು. ಇನ್ನು ಸಾಹಸ ತೋರಿದ ಅರಣ್ಯ ರಕ್ಷಕ ವಿಕ್ರಂ, ಹೊನ್ನಾಳಿ ತಾಲೂಕಿನ ಚಿಕ್ಕಬಾಸೂರು ಗ್ರಾಮದವರಾಗಿದ್ದಾರೆ. ಈಗಾಗಲೇ ವಿಕ್ರಮ ಮೌಂಟ್ ಎವರೆಸ್ಟ್, ಮೌಂಟ್ ಸತೋಪಂತ್ ಪರ್ವತವನ್ನೂ ಸಹ ಏರಿ ಬಂದಿದ್ದಾರೆ.

ತಾಂಜೇನಿಯಾ ದೇಶದ ಮೌಂಟ್ ಕಿಲಿಮಾಂಜರ್ ಏರಿದ ಹೊನ್ನಾಳಿಯ ಅರಣ್ಯ ರಕ್ಷಕ!

ಇದನ್ನೂ ಓದಿ: ಚಿಕಿತ್ಸೆಗೆ ಹೋಗುತ್ತಿದ್ದ ಹೆಂಡತಿಯ ತಲೆ ಕೆಡಿಸಿದ್ನಂತೆ ಬಾಬಾ : ಮನನೊಂದು ಪತಿ ಆತ್ಮಹತ್ಯೆ

ತಾಂಜೇನಿಯಾದ ಮೌಂಟ್ ಕಿಲಿಮಾಂಜರ್ ಪರ್ವತವನ್ನು ಏರಿದ ವಿಕ್ರಮ್ ಅವರು ನಮ್ಮ ತ್ರಿವರ್ಣ ಧ್ವಜವನ್ನು ಪ್ರದರ್ಶಿಸಿ, ಅರಣ್ಯ ನಾಶ ಮಾಡುವ ಬದಲು ರಕ್ಷಣೆ ಮಾಡಬೇಕು ಎಂದು ಕೂಗಿ ಹೇಳಿದ್ದಾರೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.