ದಾವಣಗೆರೆ: "ನಾನು ಮಾಜಿ ಸಿಎಂ ಸಿದ್ದರಾಮಯ್ಯರ ಆಪ್ತ' ಎಂದು ರೈತರೊಬ್ಬರು ಹೇಳುತ್ತಿದ್ದಂತೆ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಕಾರಿನ ಗ್ಲಾಸ್ ಏರಿಸಿ ಹೊರಟ ಘಟನೆ ಹೊನ್ನಾಳಿಯಲ್ಲಿ ನಡೆದಿದೆ.
ಹೊನ್ನಾಳಿ ಪಟ್ಟಣದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ಕೊರೊನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಸಭೆ ಹಾಗೂ ಬಡವರು, ನಿರ್ಗತಿಕರಿಗೆ ಆಹಾರ ಧಾನ್ಯಗಳ ಕಿಟ್ ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಿಟ್ ವಿತರಿಸಿದ ಬಳಿಕ ಭೈರತಿ ಬಸವರಾಜ್ ಕಾರು ಹತ್ತಿದರು.
ಆಗ ಇಲ್ಲಿಗೆ ರೈತರೊಬ್ಬರು ಬಂದು ಸಿದ್ದರಾಮಯ್ಯರ ಹೆಸರು ಪ್ರಸ್ತಾಪಿಸುತ್ತಿದ್ದಂತೆ ಹೆಚ್ಚು ಮಾತನಾಡದೇ ಸಚಿವರು ಮುಜುಗರವಾಗಿ ಹೊರಟರು. ಇಲ್ಲಿ ಸಭೆ ನಡೆಸಲಾಗಿದೆ. ರೈತ ಮುಖಂಡರನ್ನು ಕರೆದಿಲ್ಲ. ಸಮಸ್ಯೆಗಳ ಬಗ್ಗೆ ಸ್ಪಷ್ಟವಾಗಿ ಮಾತನಾಡುವವರು ಇರಲಿಲ್ಲ. ಕೇವಲ ಜನಪ್ರತಿನಿಧಿಗಳನ್ನು ಆಹ್ವಾನಿಸಿದ್ದಾರೆ. ಹಾಗಾಗಿ ನಮಗೂ ಮಾತನಾಡಲು ಅವಕಾಶ ಕೊಡಬೇಕಿತ್ತು ಅಂತಾ ರೈತ ಮನವಿ ಮಾಡಿದರು.
ಬಳಿಕ ನಮ್ಮಂಥವರನ್ನೆಲ್ಲಾ ಆಹ್ವಾನಿಸುವುದಿಲ್ಲ ಎಂದು ಗೊಣಗುತ್ತಲೇ ಸ್ಥಳದಿಂದ ನಿರ್ಗಮಿಸಿದರು. ಈ ಹಿಂದೆ ಭೈರತಿ ಬಸವರಾಜ್, ಮಾಜಿ ಸಿಎಂ ಸಿದ್ದರಾಮಯ್ಯರ ಪರಮಾಪ್ತರಾಗಿದ್ದರು. ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಈಗ ಸಚಿವರೂ ಆಗಿದ್ದಾರೆ. ಆದ್ರೆ ಸಿದ್ದರಾಮಯ್ಯರ ಹೆಸರು ಹೇಳುತ್ತಿದ್ದಂತೆ ಮತ್ತೇನೂ ಹೆಚ್ಚು ಮಾತನಾಡದೇ ತೆರಳಿದ್ದು ವಿಶೇಷ.