ದಾವಣಗೆರೆ ಜಿಲ್ಲಾ ಪಂಚಾಯತ್ನಿಂದ ವಿವಿಧ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅನುಷ್ಠಾನದಲ್ಲಿ ಖಾಲಿ ಇರುವ ಸಿಬ್ಬಂದಿಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. ಹೊರ ಗುತ್ತಿಗೆ ಆಧಾರದ ಮೇಲೆ ಈ ನೇಮಕಾತಿ ನಡೆಯಲಿದೆ. ಒಟ್ಟು 20 ಹುದ್ದೆಗಳು ಖಾಲಿ ಇದ್ದು, ಈ ಹುದ್ದೆ ಆಯ್ಕೆ, ನೇಮಕಾತಿ ಸೇರಿದಂತೆ ಇನ್ನಿತರ ಮಾಹಿತಿ ಇಲ್ಲಿದೆ.
ಹುದ್ದೆ ವಿವರ: ತಾಂತ್ರಿಕ ಸಹಾಯಕ (ಸಿವಿಲ್)- 4, ತಾಂತ್ರಿಕ ಸಹಾಯಕ (ಕೃಷಿ)- 1, ತಾಂತ್ರಿಕ ಸಹಾಯಕ (ತೋಟಗಾರಿಕೆ)- 6, ತಾಂತ್ರಿಕ ಸಹಾಯಕ (ಅರಣ್ಯ)- 2, ತಾಂತ್ರಿಕ ಸಹಾಯಕ (ರೇಷ್ಮೆ)-1, ಆಡಳಿತ ಸಹಾಯಕರು -6
ವಿದ್ಯಾರ್ಹತೆ
ತಾಂತ್ರಿಕ ಸಹಾಯಕರು: ಸಿವಿಲ್ನಲ್ಲಿ ಬಿಇ ಪದವಿ
ತಾಂತ್ರಿಕ ಸಹಾಯಕರು (ಕೃಷಿ): ಅಭ್ಯರ್ಥಿಗಳು ಕೃಷಿ ವಿಷಯದಲ್ಲಿ ಬಿಎಸ್ಸಿ ಪದವಿ
ತಾಂತ್ರಿಕ ಸಹಾಯಕರು (ತೋಟಗಾರಿಕೆ): ತೋಟಗಾರರಿಕೆಯಲ್ಲಿ ಬಿಎಸ್ಸಿ ಪದವಿ
ತಾಂತ್ರಿಕ ಸಹಾಯಕರು (ಅರಣ್ಯ): ಅರಣ್ಯಶಾಸ್ತ್ರದಲ್ಲಿ ಬಿಎಸ್ಸಿ ಪದವಿ
ತಾಂತ್ರಿಕ ಸಹಾಯಕ (ರೇಷ್ಮೆ): ರೇಷ್ಮೆಯಲ್ಲಿ ಬಿಎಸ್ಸಿ ಪದವಿ
ಆಡಳಿತ ಸಹಾಯಕರು: ಬಿಕಾಂ ಪದವಿ ಜೊತೆಗೆ ಕಂಪ್ಯೂಟರ್ ಜ್ಞಾನ
ವಯೋಮಿತಿ: ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕನಿಷ್ಠ 21ರಿಂದ ಗರಿಷ್ಠ 40 ವರ್ಷ ವಯೋಮಿತಿಯನ್ನು ಹೊಂದಿರಬೇಕು.
ವೇತನ: ಆಡಳಿತ ಸಹಾಯಕರ ಹುದ್ದೆಗೆ 22 ಸಾವಿರ ಹುದ್ದೆ ನಿಗದಿ ಪಡಿಸಲಾಗಿದೆ. ಉಳಿದ ಹುದ್ದೆಗಳಿಗೆ 28 ಸಾವಿರ ವೇತನ ಜೊತೆಗೆ ಪ್ರತ್ಯೇಕ ಭತ್ಯೆ 2000 ರೂ. ಇರಲಿದೆ.
ಆಯ್ಕೆ ವಿಧಾನ: ಈ ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ ಆಯ್ಕೆ ಮಾಡಲಾಗುವುದು. ಆಡಳಿತ ಸಹಾಯಕ ಹುದ್ದೆಗೆ ಶಾರ್ಟ್ ಲಿಸ್ಟ್ ಮಾಡಿರುವ ಅಭ್ಯರ್ಥಿಗಳ ಕನ್ನಡ ಮತ್ತು ಇಂಗ್ಲಿಷ್ ಟೈಪಿಂಗ್ ಮತ್ತು ಕಂಪ್ಯೂಟರ್ ಜ್ಞಾನ ಸಂಬಂಧ ಪ್ರಾಯೋಗಿಕ ಪರೀಕ್ಷೆ ನಡೆಸಲಾಗುವುದು.
ವಿಶೇಷ ಸೂಚನೆ: ಮೇಲಿನ ಹುದ್ದೆಗಳಲ್ಲಿ ಅಭ್ಯರ್ಥಿಗಳು 1 ರಿಂದ 2 ವರ್ಷ ಹುದ್ದೆ ಕಾರ್ಯ ನಿರ್ವಹಿಸಿದ ಅನುಭವವನ್ನು ಹೊಂದಿರಬೇಕು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆ ದಿನಾಂಕ ಆಗಸ್ಟ್ 10 ರಿಂದ ಆಗಸ್ಟ್ 24 ಆಗಿದೆ. ಅಭ್ಯರ್ಥಿಗಳು ದಾವಣಗೆರೆ ಜಿಲ್ಲೆ ಅಧಿಕೃತ ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸಬೇಕು.
ಈ ಹುದ್ದೆ ಕುರಿತು ಸಂಪೂರ್ಣ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಹಾಗೂ ಅರ್ಜಿ ಸಲ್ಲಿಕೆಗೆ davanagere.nic.in ಈ ಜಾಲತಾಣಕ್ಕೆ ಭೇಟಿ ನೀಡಬಹುದು.
ಇದನ್ನೂ ಓದಿ: Jobs in Koppal: ಕೊಪ್ಪಳ ಜಿಲ್ಲಾ ಪಂಚಾಯತ್ನಲ್ಲಿ ಉದ್ಯೋಗಾವಕಾಶ.. 13 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ