ETV Bharat / state

'ಪ್ಲಾಸ್ಮಾ ಫೆರೋಸಿಸ್ ಚಿಕಿತ್ಸೆ': ಸಾವು ಬದುಕಿನ ಮಧ್ಯೆ ಹೋರಾಟ‌ ನಡೆಸುತ್ತಿದ್ದ ಮಹಿಳೆಗೆ‌ ಜೀವದಾನ - ದಾವಣಗೆರೆ

ಪ್ರಾಣಾಪಾಯಕ್ಕೆ ಸಿಲುಕಿದ್ದ ಮಹಿಳೆಯನ್ನು ಪ್ಲಾಸ್ಮಾ ಫೆರೋಸಿಸ್ ಎಂಬ ಚಿಕಿತ್ಸೆಯ ಮೂಲಕ ದಾವಣಗೆರೆಯ ಬಾಪೂಜಿ ಆಸ್ಪತ್ರೆಯ ವೈದ್ಯ ಡಾ.ಮೋಹನ್ ಕುಮಾರ್ ಅವರ ತಂಡ ಬದುಕಿಸಿದೆ.

plasmapheresis treatment for awoman
ಮಹಿಳೆಗೆ‌ ಪ್ಲಾಸ್ಮಾ ಫೆರೋಸಿಸ್ ಚಿಕಿತ್ಸೆ..
author img

By

Published : Mar 3, 2021, 9:23 AM IST

Updated : Mar 3, 2021, 9:54 AM IST

ದಾವಣಗೆರೆ: ಜನ "ವೈದ್ಯೋ ನಾರಾಯಣೋ ಹರಿ" ಎಂಬ ಮಾತನ್ನು ಬೆಣ್ಣೆ ನಗರಿಯ ವೈದ್ಯರೊಬ್ಬರು ಸತ್ಯವಾಗಿಸಿದ್ದಾರೆ. ಕಡು ಬಡತನದಲ್ಲಿ ಜೀವನ ನಡೆಸುತ್ತಿರುವ ಕುಟುಂಬಕ್ಕೆ ಇಲ್ಲೊಬ್ಬ ವೈದ್ಯರು ಬೆಳಕಾಗಿದ್ದು, ವೈದ್ಯಕೀಯ ಲೋಕವೇ ತಿರುಗಿ ನೋಡುವಂತಹ ಕಾರ್ಯವನ್ನು ಮಾಡಿ ತಾಯಿ ಮಗುವಿಗೆ ಆಸರೆಯಾಗಿದ್ದಾರೆ.

ಮಹಿಳೆಗೆ‌ ಪ್ಲಾಸ್ಮಾ ಫೆರೋಸಿಸ್ ಚಿಕಿತ್ಸೆ..

ಹೌದು, ದಾವಣಗೆರೆಯ ಬಾಪೂಜಿ ಆಸ್ಪತ್ರೆಯ ವೈದ್ಯ ಡಾ.ಮೋಹನ್ ಕುಮಾರ್ ಅವರ ತಂಡ ಸಾವು ಬದುಕಿನ ಮಧ್ಯೆ ಹೋರಾಟ‌ ನಡೆಸುತ್ತಿದ್ದ ಮಹಿಳೆಗೆ‌ ಜೀವದಾನ ನೀಡಿದೆ. ಚಿತ್ರದುರ್ಗದಲ್ಲಿ ವೈದ್ಯರ ನಿರ್ಲಕ್ಷ್ಯದಿಂದ‌ ನರಕಯಾತನೆ ಅನುಭವಿಸುತ್ತಿದ್ದ ಸಿದ್ದಮ್ಮ ಎಂಬ ಮಹಿಳೆಗೆ ಪ್ಲಾಸ್ಮಾ ಫೆರೋಸಿಸ್ ಚಿಕಿತ್ಸೆಯ ಮೂಲಕ ಮರು ಜನ್ಮ ನೀಡಿದ್ದಾರೆ. ಅಲ್ಲದೇ ವೈದ್ಯರು ಹಣ ಪಡೆಯದೆ ಉಚಿತವಾಗಿ ಚಿಕಿತ್ಸೆ ನೀಡಿದ್ದಾರೆ.

ಆಗಿದ್ದೇನು?

ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲೂಕಿನ ಚಿಕ್ಕನಕಟ್ಟೆ ಗ್ರಾಮದ ಮಹಿಳೆ ಸಿದ್ದಮ್ಮ 18 ವರ್ಷಕ್ಕೆ ಮದುವೆಯಾಗಿದ್ದು, ಮೊದಲ ಹೆರಿಗೆ ಸಂದರ್ಭದಲ್ಲಿ ಹೊಳಲ್ಕೆರೆ ತಾಲೂಕಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ನಂತರ ಚಿತ್ರದುರ್ಗ ಜಿಲ್ಲಾಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿಸಿದ್ದಾರೆ‌.‌ ಆದರೆ, ಶಸ್ತ್ರಚಿಕಿತ್ಸೆ ಮಾಡುವಾಗ ಅಲ್ಲಿನ ವೈದ್ಯರು ಎಡವಟ್ಟು ಮಾಡಿದ್ದು, ಮಹಿಳೆಯ ಮೂತ್ರ ಕೋಶದ ನರವನ್ನು ಕತ್ತರಿಸಿದ್ದರು ಎನ್ನಲಾಗಿದೆ.

ಇದರಿಂದ ಅಧಿಕ ರಕ್ತದೊತ್ತಡ ಹಾಗೂ ಮೂತ್ರಕೋಶದ ವೈಫಲ್ಯವಾಗಿದ್ದು, ಚಿತ್ರದುರ್ಗದ ಖಾಸಗಿ ಆಸ್ಪತ್ರೆಯಲ್ಲಿ ಈ‌ಕೆ ಉಳಿಯುವುದು ಕಷ್ಟ ಇನ್ನು 24 ಗಂಟೆಗಳು ಮಾತ್ರ ಕಾಲಾವಕಾಶವಿದೆ ಎಂದು ಹೇಳಿದ್ದಾರೆ. ಕಡು ಬಡವರಾದ ಸಿದ್ದಮ್ಮನ ಕುಟುಂಬಸ್ಥರು ದಿಕ್ಕು ತೋಚದೇ ಸ್ಥಿತಿಯಲ್ಲಿ ‌ದಾವಣಗೆರೆಯ ಮೂತ್ರ ಪಿಂಡ ತಜ್ಞ ವೈದ್ಯ ಮೋಹನ್ ಬಳಿ ಚಿಕಿತ್ಸೆಗೆ ಕರೆ ತಂದಿದ್ದರು.

ಇನ್ನು ವೈದ್ಯರಾದ ಮೋಹನ್​ ಹಾಗೂ ಅವರ ತಂಡಕ್ಕೆ ಈ ಕೇಸ್ ಒಂದು ಸವಾಲಾಗಿ ಪರಿಣಮಿಸಿತ್ತು. ಗರ್ಭಾವಸ್ಥೆಯಲ್ಲಿ ರಕ್ತನಾಳಗಳ ತೊಂದರೆಯಿಂದಾಗಿ ಪ್ರಾಣಾಪಾಯಕ್ಕೆ ಸಿಲುಕಿದ್ದ ಮಹಿಳೆಯನ್ನು ಪ್ಲಾಸ್ಮಾ ಫೆರೋಸಿಸ್ ಎಂಬ ಅಪರೂಪದ ಚಿಕಿತ್ಸೆ ಮಾಡುವ ಮೂಲಕ ಜೀವ ಉಳಿಸಿದ್ದಾರೆ.

ವಿಪರೀತ ರಕ್ತದೊತ್ತಡ ಸಹಿತ ಹಲವು ಬದಲಾವಣೆಗಳು ಹೆರಿಗೆ ಸಂದರ್ಭದಲ್ಲಿ ಉಂಟಾಗಿತ್ತು. ಇದನ್ನು ಪೋಸ್ಟ್ ಪಾರ್ಟಮ್ ಟಿಎಂಎ ಎಂದು ಕರೆಯಲಾಗುತ್ತದೆ. ಇದರಿಂದ ಮೂತ್ರಪಿಂಡದ ವೈಫಲ್ಯ, ಪಾರ್ಶ್ವವಾಯು, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗಿದ್ದರಿಂದ ಸಿದ್ದಮ್ಮ ಪ್ರಾಣಾಪಾಯಕ್ಕೆ ಸಿಲುಕಿದ್ದರು.

ಇದನ್ನು ಸವಾಲಾಗಿ ಸ್ವೀಕರಿಸಿದ ವೈದ್ಯರು ರಕ್ತದಲ್ಲಿರುವ ಪ್ಲಾಸ್ಮಾವನ್ನೇ ತೆಗೆದು ಬೇರೆ ಪ್ಲಾಸ್ಮಾ ನೀಡುವ ಪ್ಲಾಸ್ಮಾ ಫೇರೋಸಿಸ್ ಚಿಕಿತ್ಸೆಯನ್ನು ನೀಡಿದ್ದಾರೆ. ಐದು ಬಾರಿ ಮಹಿಳೆಗೆ ಈ ‌ಚಿಕಿತ್ಸೆಯನ್ನು ಮಾಡಿಸಿದ್ದರಿಂದ ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ನಿಜಕ್ಕೂ ಇದೊಂದು ಸಂತೋಷದ ಸಂಗತಿ ಎನ್ನುತ್ತಾರೆ ವೈದ್ಯ ಮೋಹನ್ ಕುಮಾರ್.

ಬದುಕುಳಿಯುವ ಆಸೆಯನ್ನು ಬಿಟ್ಟಿದ್ದ ಮಹಿಳೆಗೆ ವೈದ್ಯರು ಮರು ಜೀವ ನೀಡಿದ್ದಾರೆ. ಕೆಲ ವೈದ್ಯರು ಮಾಡುವ ಯಡವಟ್ಟಿನಿಂದ ಬೇರೆ ಎಲ್ಲ ವೈದ್ಯರಿಗೂ ಕೂಡ ಕೆಟ್ಟ ಹೆಸರು ಬರುತ್ತಿದೆ. ತಾಯಿಯನ್ನು ಉಳಿಸಿ ಈಗ ಮಗುವಿಗೆ ತಾಯಿಯ‌ ಮಡಿಲು ಸಿಗುವಂತೆ ಮಾಡಿದ ವೈದ್ಯರ ತಂಡ ಪ್ರಶಂಸೆಗೆ ಪಾತ್ರವಾಗಿದ್ದಾರೆ.

Last Updated : Mar 3, 2021, 9:54 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.