ETV Bharat / state

ಕೊರೊನಾ ನಿಯಂತ್ರಣಕ್ಕೆ ಮಾಜಿ ಸೈನಿಕರ ಬಳಕೆಗೆ ಜಿಲ್ಲಾಡಳಿತ ನಿರ್ಧಾರ - Davanagere District administration

ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಕೊರೊನಾ ಪ್ರಕರಣಗಳ ನಿಯಂತ್ರಣಕ್ಕೆ ಮಾಜಿ ಸೈನಿಕರನ್ನು ಬಳಸಿಕೊಳ್ಳಲು ದಾವಣಗೆರೆ ಜಿಲ್ಲಾಡಳಿತವು ನಿರ್ಧರಿಸಿದೆ.

davanagere-district-administration-decided-to-use-ex-servicemen-to-control-corona
ಕೊರೊನಾ ನಿಯಂತ್ರಣಕ್ಕೆ ಮಾಜಿ ಸೈನಿಕರ ಬಳಕೆಗೆ ಜಿಲ್ಲಾಡಳಿತ ನಿರ್ಧಾರ
author img

By

Published : Apr 2, 2021, 4:21 AM IST

ದಾವಣಗೆರೆ:‌ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಎರಡನೇ ಅಲೆ ಭೀತಿ ಹೆಚ್ಚಿದ್ದು, ರಾಜ್ಯ ಸರ್ಕಾರ‌ ಈಗಾಗಲೇ ನಿಯಮ ಜಾರಿಗೆ ತಂದಿದೆ. ಆದರೆ ಜನ ಯಾವುದಕ್ಕೂ ಕ್ಯಾರೆ ಎನ್ನದ ಕಾರಣ ಜಿಲ್ಲಾಡಳಿತವು ಕೊರೊನಾ ನಿಯಂತ್ರಣಕ್ಕೆ ಮಾಜಿ ಸೈನಿಕರ ಬಳಕೆಗೆ ನಿರ್ಧರಿಸಿದೆ.

45 ಜನ ಮಾಜಿ ಸೈನಿಕರನ್ನು ಕೋವಿಡ್ ನಿಯಂತ್ರಣಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ದಾವಣಗೆರೆ ನಗರದಲ್ಲಿರುವ ಕಲ್ಯಾಣ ಮಂಟಪ, ಶಾಪಿಂಗ್ ಮಾಲ್ ಹಾಗೂ ಶಾಲಾ ಕಾಲೇಜುಗಳಿಗೆ ಭೇಟಿ ನೀಡುವ ಮಾಜಿ‌ ಸೈನಿಕರು ಕೊರೊನಾ ನಿಯಮ ಉಲ್ಲಂಘನೆ ಆಗಿದ್ದರೆ ಜಿಲ್ಲಾಡಳಿತಕ್ಕೆ ಅವರು ವರದಿ ನೀಡಲಿದ್ದಾರೆ. ಜಿಲ್ಲಾಡಳಿತ ಆ ವರದಿ ಆಧರಿಸಿ ಸೂಕ್ತ ಕ್ರಮಕ್ಕೆ ಮುಂದಾಗಲಿದೆ ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದರು.

ಮಾರ್ಚ್ ತಿಂಗಳಲ್ಲಿ 157 ಜನಕ್ಕೆ ಕೋವಿಡ್ ಪಾಸಿಟಿವ್ ಬಂದಿದ್ದರಿಂದ ಜಿಲ್ಲಾಡಳಿತ‌ ಈ ನಿರ್ಧಾರ ಕೈಗೊಂಡಿದೆ.‌ ಜನರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಕೊರೊನಾ ಪರೀಕ್ಷೆ ಮಾಡುತ್ತಿದ್ದರಿಂದ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿವೆ. ಕಲ್ಯಾಣ ಮಂಟಪದಲ್ಲಿ ಕೊರೊನಾ ನಿಯಮವಳಿ ಉಲ್ಲಂಘನೆ ಮಾಡಿದರೆ ಮಾಲೀಕರು, ವಧು-ವರರ ಕಡೆಯವರ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.