ETV Bharat / state

ದಾವಣಗೆರೆ: ಫ್ಲಿಪ್‌ಕಾರ್ಟ್ ಪೇ ಲೇಟರ್ ಖಾತೆ ಹ್ಯಾಕ್; ಸೈಬರ್ ವಂಚಕನ ಬಂಧನ - Flipkart Pay Later Account

ಸೈಬರ್ ವಂಚನೆ ಪ್ರಕರಣ ಸಂಬಂಧ ದಾವಣಗೆರೆ ಸಿಇಎನ್ ಪೊಲೀಸರು ವಂಚಕನ ಹೆಡೆಮುರಿ ಕಟ್ಟಿದ್ದಾರೆ.

Davanagere cyber fraud case
ದಾವಣಗೆರೆ ಸೈಬರ್ ವಂಚನೆ ಪ್ರಕರಣ
author img

By

Published : Aug 5, 2022, 5:35 PM IST

Updated : Aug 5, 2022, 5:52 PM IST

ದಾವಣಗೆರೆ: ಸೈಬರ್ ವಂಚನೆ ಪ್ರಕರಣದಲ್ಲಿ ಇಲ್ಲಿನ ಸಿಇಎನ್ ಪೊಲೀಸರು ರಾಜಸ್ಥಾನ ಮೂಲದ ಅಮನ್ ತಿವಾರಿ ಎಂಬಾತನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ದಾವಣಗೆರೆ ನಿವಾಸಿ ರಕ್ಷಿತ ಎಂಬುವವರ ಫ್ಲಿಪ್ ಕಾರ್ಟ್ ಖಾತೆ ಹ್ಯಾಕ್ ಮಾಡಿದ್ದ ಈತನನ್ನು ರಾಜಸ್ಥಾನದ ಅಲ್ವಾರ್ ನಗರದಲ್ಲಿ ಬಂಧಿಸಲಾಗಿದೆ. ಅಲ್ಲಿನ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ ಬಳಿಕ ದಾವಣಗೆರೆಗೆ ಕರೆತಂದು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಏನಿದು ಪ್ರಕರಣ?: ರಕ್ಷಿತ್ ಎಂಬುವವರು ಫ್ಲಿಪ್ ಕಾರ್ಟ್ ಪೇ ಲೇಟರ್ ಖಾತೆ ಹೊಂದಿದ್ದರು. ಜನವರಿ 21ರಂದು ಯಾರೋ ಅಪರಿಚಿತರು ಇವರ ಖಾತೆಯನ್ನು ಹ್ಯಾಕ್ ಮಾಡುವ ಮೂಲಕ ಪಾಸ್ವರ್ಡ್ ಬದಲಾಯಿಸಿ, ಅದೇ ಖಾತೆಯಿಂದ ಫ್ಲಿಪ್ ಕಾರ್ಟ್ ಡಿಜಿಟಲ್ ವೋಚರ್​ಗಳನ್ನು ಪಡೆದುಕೊಂಡು 45,000 ರೂ.ಗಳ ವಂಚನೆ ಎಸಗಿದ್ದರು.

ಸೈಬರ್ ವಂಚನೆ ಪ್ರಕರಣ - ಎಸ್ಪಿ ಮಾಹಿತಿ ನೀಡಿರುವುದು

ಈ ಸಂಬಂಧ ಸಿ.ಇ.ಎನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರೋಪಿಯಿಂದ ಕೃತ್ಯಕ್ಕೆ ಬಳಸಿದ್ದ ಮೊಬೈಲ್ ಹಾಗೂ ದೂರುದಾರರಿಗೆ ಮತ್ತು ಇತರೆ ಸಾರ್ವಜನಿಕರಿಗೆ ವಂಚಿಸಿ ಖರೀದಿಸಿದ್ದ 3 ಮೊಬೈಲ್​​ಗಳನ್ನು (ಅಂದಾಜು ಮೌಲ್ಯ ಒಟ್ಟು 1.50 ಲಕ್ಷ ) ವಶಕ್ಕೆ ಪಡೆದುಕೊಳ್ಳಲಾಗಿದೆ.

ಇದನ್ನೂ ಓದಿ: ಕಟ್ಟಡದಿಂದ ತಾಯಿ ಎಸೆದರೂ ಬದುಕಿದ್ದ ಮಗು ಆಸ್ಪತ್ರೆಗೆ ಸಾಗಿಸುವಾಗ ಉಸಿರು ನಿಲ್ಲಿಸಿತು!

Last Updated : Aug 5, 2022, 5:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.