ETV Bharat / state

ಪಿಯುಸಿ ವಿಜ್ಞಾನ ಫಲಿತಾಂಶ: ಪೆಟ್ರೋಲ್ ಬಂಕ್ ಮ್ಯಾನೇಜರ್‌ ಮಗಳಿಗೆ 6ನೇ ರ‍್ಯಾಂಕ್‌

author img

By

Published : Apr 21, 2023, 8:05 PM IST

ದ್ವಿತೀಯ ಪಿಯುಸಿ ಪರೀಕ್ಷೆಯ ವಿಜ್ಞಾನ ವಿಭಾಗದಲ್ಲಿ ಪೆಟ್ರೋಲ್ ಬಂಕ್ ಉದ್ಯೋಗಿ‌ಯ ಪುತ್ರಿ ಪೂಜಾ ಬಿ ರಾಜ್ಯಕ್ಕೆ ಆರನೇ ರ‍್ಯಾಂಕ್‌ ಗಳಿಸಿದ್ದಾರೆ.

Second PUC Exam
ಪಿಯುಸಿ ಟಾಪರ್ ಪೂಜಾ ಬಿ.
ಪಿಯುಸಿ ಟಾಪರ್ ಪೂಜಾ ಬಿ. ಪ್ರತಿಕ್ರಿಯೆ

ದಾವಣಗೆರೆ: ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದ್ದು ಪೆಟ್ರೋಲ್ ಬಂಕ್​​ನಲ್ಲಿ ಕೆಲಸ ಮಾಡುವ ಉದ್ಯೋಗಿಯ ಮಗಳು ಪೂಜಾ ಬಿ ರಾಜ್ಯಕ್ಕೆ ಆರನೇ ರ‍್ಯಾಂಕ್‌ ಪಡೆದಿದ್ದಾರೆ. ವಿಜ್ಞಾನ ವಿಭಾಗದಲ್ಲಿ 591 ಅಂಕ ಪಡೆದು ಜಿಲ್ಲೆಗೆ ಮೊದಲ ಸ್ಥಾನ ಗಳಿಸಿದ್ದಾರೆ. ನಗರದ ಮಾಗನೂರು ಬಸಪ್ಪ ಪಿಯು‌‌ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದಾರೆ.

ಇದನ್ನೂ ಓದಿ: ಪಿಯುಸಿ‌ ಫಲಿತಾಂಶ: ಹುಬ್ಬಳ್ಳಿ ವಿದ್ಯಾನಿಕೇತನ ಕಾಲೇಜಿನ‌ ಸಾಯೀಶ್‌ಗೆ ವಿಜ್ಞಾನ ವಿಭಾಗದಲ್ಲಿ 3ನೇ ರ‍್ಯಾಂಕ್‌

ಇವರು ದಾವಣಗೆರೆ ನಗರದ ಅನೆಕೊಂಡದ ನಿವಾಸಿ ಬಸವರಾಜ್ ಎಂಬವರ ಪುತ್ರಿ. ನಿತ್ಯ ಆರು ಗಂಟೆ ಓದಿ ಗರಿಷ್ಠ ಅಂಕ ಗಳಿಸಿದ್ದೇನೆ ಎಂದಿರುವ ಪೂಜಾ ವೈದ್ಯೆಯಾಗುವ ಬಯಕೆ ವ್ಯಕ್ತಪಡಿಸಿದ್ದಾರೆ. ಕನ್ನಡ- 97, ಇಂಗ್ಲಿಷ್- 96, ಭೌತಶಾಸ್ತ್ರ- 69, ರಸಾಯನಶಾಸ್ತ್ರ-70, ಗಣಿತ-100 ಅಂಕ ಪಡೆದಿರುವ ಪೂಜಾ ಅವರಿಗೆ ಪಾಲಕರು ಹಾಗೂ ಕಾಲೇಜು ಆಡಳಿತ ಮಂಡಳಿ ಸಿಹಿ ತಿನಿಸಿದರು.

ಇದನ್ನೂ ಓದಿ: ಬಡತನದಲ್ಲಿ ಅರಳಿದ ಪ್ರತಿಭೆ: ಕಲಾ ವಿಭಾಗದಲ್ಲಿ ರಾಹುಲ್ ರಾಠೋಡ್​ ವಿಜಯಪುರ ಜಿಲ್ಲೆಗೆ ಟಾಪರ್​..

ವಿದ್ಯಾರ್ಥಿನಿ ಪೂಜಾ ಮಾತನಾಡಿ, ''ಈ ಫಲಿತಾಂಶ ನಿರೀಕ್ಷೆ ಮಾಡರಲಿಲ್ಲ. ಆದ್ರೂ ಟಾಪರ್ ಬಂದಿದ್ದೇನೆ. ನನ್ನ ವಿದ್ಯಾಭ್ಯಾಸಕ್ಕೆ ಪೋಷಕರು ಹಾಗೂ ಕಾಲೇಜಿನ ಸಿಬ್ಬಂದಿಯ ಸ್ಪಂದನೆ ಚೆನ್ನಾಗಿತ್ತು. ಎಸ್ಎಸ್ಎಲ್​ಸಿಯಲ್ಲಿ ಕೂಡಾ ಒಳ್ಳೆಯ ಅಂಕ ಪಡೆದಿದ್ದೆ. ಮಾಗನೂರು ಬಸಪ್ಪ ಕಾಲೇಜಿನ ಸಿಬ್ಬಂದಿ ಸಹಕಾರದಿಂದ ಒಳ್ಳೆಯ ಅಂಕ ಗಳಿಸಲಾು ಸಾಧ್ಯವಾಗಿದೆ. ವೈದ್ಯಳಾಗುವ ಕನಸಿದೆ" ಎಂದು ಹೇಳಿದರು.

ಇದನ್ನೂ ಓದಿ: 2nd PUC ಮರು ಮೌಲ್ಯಮಾಪನಕ್ಕೆ ಅರ್ಜಿ ಸಲ್ಲಿಸುವವರು ಒಮ್ಮೆ ಯೋಚಿಸಿ: ಈ ಬಾರಿ 1 ಮಾರ್ಕ್ಸ್ ವ್ಯತ್ಯಾಸವಾದರೂ ಅಂಕಪಟ್ಟಿಗೆ ಸೇರ್ಪಡೆ

ತಂದೆ ಬಸವರಾಜ್ ಮಾತನಾಡಿ, ಕಾಲೇಜಿನ ಸಿಬ್ಬಂದಿ ಹಾಗೂ ಶಿಕ್ಷಕರು ಸಹಕಾರದಿಂದ ಪೂಜಾ ಉತ್ತಮ ಅಂಕಗಳನ್ನು ಪಡೆದಿದ್ದಾಳೆ. ಮಗಳ ಆಸೆಯಂತೆ ಡಾಕ್ಟರ್ ​ಓದಿಸುತ್ತೇವೆ ಎಂದರು. "ನಾನು ಪೆಟ್ರೋಲ್ ಬಂಕ್​​ನಲ್ಲಿ ಮ್ಯಾನೇಜರ್ ಆಗಿ ಕೆಲಸ ಮಾಡ್ತಿದ್ದು, ಪುತ್ರಿಗೆ ಒಳ್ಳೆಯ ಶಿಕ್ಷಣ ಕೊಡಿಸಿದ್ದರಿಂದ ಸಾಧನೆ ಮಾಡಿದ್ದಾಳೆ" ಎಂದು ಸಂತಸ ವ್ಯಕ್ತಿಪಡಿಸಿದರು.

ಇದನ್ನೂ ಓದಿ: ದ್ವಿತೀಯ ಪಿಯು ಫಲಿತಾಂಶ: ದಕ್ಷಿಣ ಕನ್ನಡಕ್ಕೆ ಪ್ರಥಮ ಸ್ಥಾನ, ಜಿಲ್ಲೆಯಲ್ಲಿ 9 ವಿದ್ಯಾರ್ಥಿಗಳು ಟಾಪರ್​

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ವಿದ್ಯಾರ್ಥಿನಿಯರೇ ಟಾಪರ್ಸ್​!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.