ದಾವಣಗೆರೆ: ನಮಗೆ ದೇಶ ಮುಖ್ಯ, ಜಾತಿ ಅಲ್ಲ. ನನ್ನ ಮಗ ಚಂದ್ರು ಹಿಂದುತ್ವವನ್ನು ಪ್ರತಿಪಾದಿಸುತ್ತಿದ್ದ, ಅವನ ಅಂತ್ಯಸಂಸ್ಕಾರವನ್ನು ಹಿಂದೂ ಸಂಪ್ರದಾಯದಂತೆ ನೆರವೇರಿಸುತ್ತೇವೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕುಂದೂರು ಗ್ರಾಮದಲ್ಲಿರುವ ತೋಟದಲ್ಲಿ ರೇಣುಕಾಚಾರ್ಯರವರ ತಂದೆ- ತಾಯಿ (ಚಂದ್ರುವಿನ ಅಜ್ಜ ಅಜ್ಜಿಯ) ಸಮಾಧಿ ಬಳಿ ಅಂತ್ಯಸಂಸ್ಕಾರ ಮಾಡಲಾಗುತ್ತದೆ. ಚಂದ್ರುವಿನ ಅಂತಿಮ ದರ್ಶನಕ್ಕೆ ಹೊನ್ನಾಳಿಯ ಹಿರೇಮಠದಲ್ಲಿರುವ ಶಾಸಕ ಎಂ ಪಿ ರೇಣುಕಾಚಾರ್ಯ ಅವರ ನಿವಾಸದಲ್ಲಿ ವ್ಯವಸ್ಥೆ ಮಾಡಲಾಗಿದೆ.
ಮಧ್ಯಾಹ್ನ 12 ಗಂಟೆಯ ನಂತರ ಮಠದ ವೃತ್ತದಿಂದ ಅಂತಿಮಯಾತ್ರೆ ಆರಂಭವಾಗಲಿದ್ದು, ಗೊಲ್ಲರಹಳ್ಳಿ ಮಾರ್ಗವಾಗಿ ಮಾಸಡಿ, ತರಗನಹಳ್ಳಿ, ಸಿಂಗಟಗೆರೆ, ಹನುಮನಹಳ್ಳಿ ಮಾರ್ಗವಾಗಿ ಹುಟ್ಟೂರು ಕುಂದೂರಿಗೆ ತಲುಪಲಿದೆ. ಮಧ್ಯಾಹ್ನ 3 ಗಂಟೆಗೆ ರೇಣುಕಾಚಾರ್ಯ ಅವರ ತಂದೆ, ತಾಯಿ ಸಮಾಧಿ ಪಕ್ಕದಲ್ಲೇ ವೀರಶೈವ ವಿಧಗಳ ಪ್ರಕಾರ ಅಂತ್ಯಕ್ರಿಯೆ ನಡೆಯಲಿದೆ.
ಇದನ್ನೂ ಓದಿ: ಸಹಜ ಸಾವಲ್ಲ, ಅಪಘಾತವೂ ಅಲ್ಲ; ಇದು ಕಾಣದ ಕೈಗಳ ಕೆಲಸ: ಎಂ ಪಿ ರೇಣುಕಾಚಾರ್ಯ