ದಾವಣಗೆರೆ: ಬೇಸಿಗೆ ರಜೆ ಬಂದರೆ ಮಕ್ಕಳು ಸಂಬಂಧಿಕರ ಊರುಗಳಿಗೆ ಪ್ರವಾಸಕ್ಕೆ ಹೋಗುತ್ತಾರೆ. ಇದೇ ಕಥಾ ಹಂದರ ಇಟ್ಟುಕೊಂಡು ಯುವ ನಿರ್ದೇಶಕ ಪುನೀತ್ ಶೆಟ್ಟಿ 'ವಿರೂಪಾ' ಎಂಬ ಸಿನಿಮಾ ಮಾಡಿದ್ದಾರೆ.
ವಿಶ್ವಪ್ರಸಿದ್ಧ ಹಂಪಿ ಹಾಗೂ ಸುತ್ತಮುತ್ತ ಈ ಸಿನಿಮಾವನ್ನು ಚಿತ್ರೀಕರಿಸಿದ್ದಾರೆ. ದಾವಣಗೆರೆಯಲ್ಲಿ ಈ ಕುರಿತು ಸುದ್ದಿಗೋಷ್ಠಿ ನಡೆಸಿದ ಚಿತ್ರತಂಡ, ತಮ್ಮ ಅನುಭವ ಹಂಚಿಕೊಂಡಿದೆ. ಈ ಚಿತ್ರದಲ್ಲಿ ಅಭಿನಯಿಸಲು ಮಕ್ಕಳಿಗೆ ತರಬೇತಿ ನೀಡಲಾಗಿದ್ದು, ದೃಷ್ಠಿಹೀನ ಮಕ್ಕಳ ಪಾತ್ರಗಳನ್ನು ವಿಭಿನ್ನವಾಗಿ ಚಿತ್ರೀಕರಿಸಲಾಗಿದೆ ಎಂದು ನಿರ್ದೇಶಕ ಪುನೀತ್ ಶೆಟ್ಟಿ ಹೇಳಿದ್ದಾರೆ.
ಸಿನಿಕ್ ಸೌಂಡ್ ಬಳಸಿಕೊಂಡೇ ಇಡೀ ಚಿತ್ರವನ್ನು ತಯಾರಿಸಲಾಗಿದೆ. ಮಕ್ಕಳು ರಜೆಯನ್ನು ಹೇಗೆ ಕಳೆಯುತ್ತಾರೆ ಹಾಗೂ ಇನ್ನಿತರ ಸಂಗತಿ ಇಟ್ಟುಕೊಂಡು ಅದ್ಭುತವಾಗಿ ಚಿತ್ರೀಕರಿಸಲಾಗಿದೆ. ಚಿತ್ರದಲ್ಲಿ ರಂಗಭೂಮಿ ಕಲಾವಿದರು ಕೂಡಾ ನಟಿಸಿದ್ದಾರೆ ಎಂದು ಚಿತ್ರತಂಡ ಹೇಳಿದೆ. ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ.