ETV Bharat / state

ಸರ್​ ಇದೊಂದು ಸರಿ ಅಧಿಕಾರಕ್ಕೆ ಬಂದ್ರೆ ಬಹಳ ಅನುಕೂಲ.. ಬಿಎಸ್​ವೈಗೆ ಕೈಮುಗಿದು ಬೇಡಿಕೊಂಡ ಅಭಿಮಾನಿಗಳು - Yadiyurappa on congress

ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದೇ ಬಿಡುತ್ತೇವೆ ಅನ್ನೋ ರೀತಿ ವರ್ತಿಸುತ್ತಿದ್ದಾರೆ- ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್​ನವರು 75 ಸೀಟ್​ ಸಹ ಗೆಲ್ಲುವುದಿಲ್ಲ- ಮಾಜಿ ಸಿಎಂ ಯಡಿಯೂರಪ್ಪ ಭವಿಷ್ಯ

BS Yadiyurappa criticize on congress
ಕಾಂಗ್ರೆಸ್​ ಟೀಕಿಸಿದ ಬಿಎಸ್​ವೈ
author img

By

Published : Jul 23, 2022, 1:31 PM IST

ದಾವಣಗೆರೆ: ಕಾಂಗ್ರೆಸ್ ನಾಯಕರು ಕೂಸು ಹುಟ್ಟುವ ಮುಂಚೆ ಕುಲಾವಿ ಹೊಲಿಸಿದ್ರು ಎಂಬಂತೆ ಆಡುತ್ತಿದ್ದಾರೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನಡುವೆ ನಡೆಯುತ್ತಿದೆ ಎನ್ನಲಾದ ಸಿಎಂ ಗಾದಿಗಾಗಿನ ಶೀತಲ ಸಮರ ಕುರಿತು ಮಾಜಿ ಸಿಎಂ ಬಿ.ಎಸ್​​ ಯಡಿಯೂರಪ್ಪ ವ್ಯಂಗ್ಯವಾಡಿದರು.

ರೇಣುಕಾಚಾರ್ಯರ ಮನೆಗೆ ಯಡಿಯೂರಪ್ಪರ ಭೇಟಿ

ಹೊನ್ನಾಳಿಯ ಶಾಸಕ ಎಂ.ಪಿ ರೇಣುಕಾಚಾರ್ಯ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಅಧಿಕಾರಕ್ಕೆ ಬಂದೇ ಬಿಡುತ್ತೇವೆ ಅನ್ನೋ ರೀತಿ ವರ್ತಿಸುತ್ತಿದ್ದಾರೆ. 2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ನವರು 75 ಸೀಟ್​ಗಳನ್ನು ಸಹ ಗೆಲ್ಲುವುದಿಲ್ಲವೆಂದು ಭವಿಷ್ಯ ನುಡಿದರು.

ಇದನ್ನೂ ಓದಿ: ಚುನಾವಣೆಗೂ ಮುನ್ನವೇ ನಾನು ಸಿಎಂ ಎಂದು ಹೇಳುವುದು ಸರಿಯಲ್ಲ: ಮಲ್ಲಿಕಾರ್ಜುನ ಖರ್ಗೆ

ಮತ್ತೊಮ್ಮೆ ಶಿಕಾರಿಪುರದಲ್ಲಿ ಸ್ಪರ್ಧಿಸಿ: ಯಡಿಯೂರಪ್ಪ ಅವರ ಬಳಿ ಅಭಿಮಾನಿಗಳು ನೀವು ಮತ್ತೊಮ್ಮೆ ಶಿಕಾರಿಪುರ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ಕೈ ಮುಗಿದು ಮನವಿ ಮಾಡಿಕೊಂಡರು. ಇದೊಂದು ಬಾರಿ ಬಿಜೆಪಿ ಅಧಿಕಾರಕ್ಕೆ ಬಂದರೆ ಅನುಕೂಲ ಆಗುತ್ತೆ, ಸ್ವಾಮಿ ನೀವು ಚುನಾವಣೆಯಲ್ಲಿ ಸ್ಪರ್ಧೆ ಮಾಡಬೇಕು ಎಂದು ಕೈ ಮುಗಿದು ಇಂಗಿತ‌ ವ್ಯಕ್ತಪಡಿಸಿದರು. ಯಡಿಯೂರಪ್ಪನವರು ಪ್ರತಿಕ್ರಿಯಿಸಿ ನೋಡೋಣ ಎಂದು ಕಿರುನಗೆ ಬೀರಿದ್ರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.