ದಾವಣಗೆರೆ: ಬ್ಯಾಂಕ್, ಏರ್ಪೋರ್ಟ್ ಯಾವುದನ್ನು ನಾವು ಮಾರಾಟ ಮಾಡುತ್ತಿಲ್ಲ, 2004 ರಲ್ಲಿ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಗುತ್ತಿಗೆ ಕೊಡಲಾಗಿತ್ತು ಎಂದು ಸಂಸದ ಜಿಎಂ ಸಿದ್ದೇಶ್ವರ್ ಕಾಂಗ್ರೆಸ್ ವಿರುದ್ಧ ಬೆರಳು ಮಾಡಿ ತೋರಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಮೇಕೆದಾಟು ನಮ್ಮ ಹಕ್ಕು, ತಮಿಳುನಾಡಿನವರು ಚುನಾವಣೆಗೆ ಗಿಮಿಕ್ ಮಾಡುತ್ತಿದ್ದಾರೆ. ನಮಗೆ ಆ ಅವಶ್ಯಕತೆ ಇಲ್ಲ. ಕುಡಿವ ನೀರು, ವಿದ್ಯುತ್ ಉತ್ಪಾದನೆ, ಮೆಟ್ರೋ ಡ್ಯಾಂಗೆ ನೀರು ಬೇಕು, ಈ ಯೋಜನೆಗೆ ಪರಿಸರ ಇಲಾಖೆ ಕ್ಲಿಯರೆನ್ಸ್ ಬೇಕಿದೆ, ಕ್ಲಿಯರೆನ್ಸ್ ಸಿಕ್ಕ ಬಳಿಕ ಯಾವುದೇ ಕಾರಣಕ್ಕೂ ಯೋಜನೆ ಕೈಬಿಡುವುದಿಲ್ಲ ಎಂದರು.
ಇನ್ನು ಮೇಕೆದಾಟು ಬಗ್ಗೆ ಸಂಸತ್ನಲ್ಲಿ ಪ್ರಜ್ವಲ್ ರೇವಣ್ಣ ಏನೂ ಮಾತನಾಡಿಲ್ಲ, ಈ ಬಗ್ಗೆ 25 ಸಂಸದರು ಹಾಗೂ ರಾಜ್ಯ ಸಭಾ ಸದಸ್ಯರು ಒತ್ತಾಯ ಮಾಡಿದ್ದೇವೆ. ಯೋಜನೆ ಕೈಬಿಡುವುದಿಲ್ಲ ಎಂದು ವಿಶ್ವಾಸ ವ್ಯಕ್ತಪಡಿಸಿದರು.