ETV Bharat / state

ದೂಡಾ ಕಚೇರಿಯಲ್ಲಿ ಬ್ರೋಕರ್​​​ಗಳದ್ದೇ ಹಾವಳಿ: ನಾಲ್ಕೈದು ಸಾವಿರ ಕೊಟ್ಟರೆ ನಿಮ್ಮ ಅರ್ಜಿ ಪಾಸ್​​-ಆಡಿಯೋ ವೈರಲ್​

ದೂಡಾ ಕಚೇರಿಯಲ್ಲಿ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಲು ಜನ ಮುಗಿಬಿದ್ದಿದ್ದು, ಇದನ್ನೇ ಬಂಡವಾಳ ಮಾಡಿಕೊಂಡಿರುವ ಬ್ರೋಕರ್​​ಗಳು ಅಕ್ರಮವಾಗಿ ಹಣ ಮಾಡುವ ದಂಧೆಗಿಳಿದಿದ್ದಾರೆ. ಜನರಿಂದ ಸಾವಿರಾರು ರೂಪಾಯಿ ಹಣ ಪಡೆದು ಅರ್ಜಿ ಸಲ್ಲಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

http://10.10.50.85:6060/reg-lowres/05-September-2021/kn-dvg-01-05-duda-audio-viral-exclusive-av-7204336_05092021093545_0509f_1630814745_865.mp4

author img

By

Published : Sep 5, 2021, 12:34 PM IST

ದಾವಣಗೆರೆ: ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿವೇಶನನಗಳಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಸೂರಿಗಾಗಿ ಆಸೆ ಪಡುತ್ತಿರುವ ಬಡ ಜನರನ್ನು ಬಂಡವಾಳ ಮಾಡಿಕೊಂಡಿರುವ ಬ್ರೋಕರ್​​​ಗಳು ಒಂದು ಅರ್ಜಿ ಹಾಕಲು ನಾಲ್ಕೈದು ಸಾವಿರ ಕೀಳಲು ದಂಧೆಗಿಳಿದಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದೀಗ ಬ್ರೋಕರ್​ಗಳ ದಂಧೆಗಿಳಿದು ಅರ್ಜಿ ಹಾಕಲು ಜನರೊಂದಿಗೆ ದೂರವಾಣಿ ಮೂಲಕ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಈಗಾಗಲೇ ದೂಡಾ ನಿವೇಶನಗಳ ಬೇಡಿಕೆ‌ ಸಮಿಕ್ಷೇ ನಡೆಸುತ್ತಿದ್ದು, ನಿವೇಶನಕ್ಕಾಗಿ ಅರ್ಜಿ ಕರೆದಿದೆ. ಅರ್ಜಿ ಹಾಕಲು ಜನ ಮುಗಿ ಬಿದ್ದಿದ್ದಾರೆ. ಇನ್ನು ಸರದಿ ಸಾಲಲ್ಲಿ ನಿಲ್ಲದೆ ಅರ್ಜಿ ಹಾಕಲು ಜನರಿಂದ ಬ್ರೋಕರ್​​ಗಳು ದುಡ್ಡಿಗೆ ಡಿಮ್ಯಾಂಡ್ ಮಾಡುತ್ತಿದ್ದು, ಅರ್ಜಿ ಹಾಕಲು 4-5 ಸಾವಿರ ತನಕ ಹಣ ಕೀಳುತ್ತಿದ್ದಾರೆ.

ನಾಲ್ಕೈದು ಸಾವಿರ ಕೊಟ್ಟರೆ ನಿಮ್ಮ ಅರ್ಜಿ ಪಾಸ್​​...ಆಡಿಯೋ ವೈರಲ್​

ಅರ್ಜಿದಾರರು ಬಾರದಿದ್ದರೂ ದಾಖಲೆ‌ ನೀಡಿ ಹಣ ಕೊಟ್ಟರೆ ಸಾಕು, ಅವರ ಹೆಸರಿನಲ್ಲಿ ಬ್ರೋಕರ್​​​ಗಳು ಹಾಗೂ ಅಲ್ಲಿನ ಅಧಿಕಾರಿಗಳ ಮೂಲಕ ಸಲ್ಲಿಕೆಯಾಗಿರುತ್ತದೆಯಂತೆ.

ಜೈನ್ ಕಾಲೋನಿ ಬಳಿ ನಡೆಯುತ್ತೆ ಡೀಲಿಂಗ್..?

ನಗರದ ಕುಂದಾವಾಡ ರಸ್ತೆಯ ಬಳಿ ಇರುವ ಜೈನ್ ಕಾಲೋನಿ ಬಳಿ ಈ ಡೀಲಿಂಗ್ ನಡೆಯುತ್ತಿದೆ. ಅರ್ಜಿ ಹಾಕಲು ಬಯಸುವ ಜನ ಜೈನ್ ಕಾಲೋನಿ ಬಳಿ ಬಂದು ದುಡ್ಡು ಕೊಟ್ಟು ಸಂಜೆಯೊಳಗೆ ಸ್ವೀಕೃತಿ ಪತ್ರ ತೆಗೆದುಕೊಂಡು ಹೋಗಬಹುದಾಗಿದ್ದು, 20-30 ಅಳತೆಯ ನಿವೇಶನಕ್ಕೆ ಅರ್ಜಿ ಹಾಕಲು 3,000 ಸಾವಿರ, 30-40 ನಿವೇಶನಕ್ಕೆ 3,500, 30-50 ನಿವೇಶನಕ್ಕೆ 4,300, 40-50 ನಿವೇಶನಕ್ಕೆ 4,800, 50-80 ನಿವೇಶನಕ್ಕೆ ಅರ್ಜಿ ಹಾಕಲು 5,000 ಹಣವನ್ನು ನಿಗದಿ ಮಾಡಲಾಗಿದ್ದು, ಅಮಾಯಕರಿಂದ ಹಣ ಪೀಕುತ್ತಿದ್ದಾರೆ.

ಇದರಲ್ಲಿ ಬಹುಪಾಲು ದೂಡಾದ ಕೆಲ ಸಿಬ್ಬಂದಿಗೆ ಹೋಗುತ್ತದೆ ಎಂದು ಆಡಿಯೋದಲ್ಲಿ ಬ್ರೋಕರ್ ಹೇಳುತ್ತಿರುವುದು ಕೇಳಿಬಂದಿದೆ. ಹೀಗಾಗಿ ದೂಡಾ ಕಚೇರಿಯ ಸಿಬ್ಬಂದಿ ಸಹ ಹಣ ಪಡೆಯುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಇದನ್ನೂ ಓದಿ: ನೌಕರಿ ಕಳೆದುಕೊಂಡರೂ ಬುದ್ದಿ ಕಲಿಯದ ಪೊಲೀಸಪ್ಪ: ಉದ್ಯೋಗ ಕೊಡಿಸೋದಾಗಿ 12 ಮಂದಿಗೆ ವಂಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.