ETV Bharat / state

ಕ್ರಿಕೆಟ್​ ಆಡ್ಬೇಡಿ ಅಂದಿದ್ದೇ ತಪ್ಪಾಯ್ತು.. ಕಂದಾಯ ನಿರೀಕ್ಷಕರ ಮೇಲೆ ಕಿಡಿಗೇಡಿಗಳಿಬ್ಬರಿಂದ ಹಲ್ಲೆ.. - Davanagere

ನಾಡ ಕಚೇರಿಯ ಆವರಣದಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬಸಣ್ಣ ಮಕ್ಕಳಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದರು. ಬಳಿಕ ಕ್ರಿಕೆಟ್ ವಿಕೆಟ್​ಗಳನ್ನು ತೆಗೆದುಕೊಂಡು ಹೋಗಿ ಕಚೇರಿಯಲ್ಲಿ ಇಟ್ಟುಕೊಂಡಿದ್ದರು.

police stataion
ಪೊಲೀಸ್​ ಠಾಣೆ
author img

By

Published : May 8, 2020, 1:32 PM IST

ದಾವಣಗೆರೆ: ಗುಂಪು ಕಟ್ಟಿಕೊಂಡು ಕ್ರಿಕೆಟ್ ಆಡ್ತಿದ್ದ ಮಕ್ಕಳಿಗೆ ಮನೆಗೆ ಹೋಗುವಂತೆ ಹೇಳಿದ ಕಂದಾಯ ನಿರೀಕ್ಷಕರ ಮೇಲೆ ಕಿಡಿಗೇಡಿಗಳಿಬ್ಬರು ಹಲ್ಲೆ ನಡೆಸಿದ ಘಟನೆ ಚನ್ನಗಿರಿ ತಾಲೂಕಿನ ತ್ಯಾವಣಿಗೆ ಗ್ರಾಮದ ನಾಡಕಚೇರಿಯಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಆರ್ ಐ ಬಸಣ್ಣ ಹಲ್ಲೆಗೊಳಗಾದವರು. ನಾಡ ಕಚೇರಿಯ ಆವರಣದಲ್ಲಿ ಮಕ್ಕಳು ಕ್ರಿಕೆಟ್ ಆಡುತ್ತಿದ್ದರು. ಈ ವೇಳೆ ಬಸಣ್ಣ ಮಕ್ಕಳಿಗೆ ಬುದ್ಧಿ ಹೇಳಿ ಮನೆಗೆ ಕಳುಹಿಸಿದ್ದರು. ಬಳಿಕ ಕ್ರಿಕೆಟ್ ವಿಕೆಟ್​ಗಳನ್ನು ತೆಗೆದುಕೊಂಡು ಹೋಗಿ ಕಚೇರಿಯಲ್ಲಿ ಇಟ್ಟುಕೊಂಡಿದ್ದರು.

ಈ ವೇಳೆ ಇಲ್ಲಿಗೆ ಬಂದ ಗ್ರಾಮದ ರಂಜಿತ್ ಅಲಿಯಾಸ್ ಬಂಟಿ ಹಾಗೂ ಆಂಜನೇಯ ಎಂಬ ಯುವಕರಿಬ್ಬರು ಬಸಣ್ಣ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದರಲ್ಲದೇ, ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.