ETV Bharat / state

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ಆರೋಪ - ಜಕಾತಿ ಟೆಂಡರ್

ದಾವಣಗೆರೆಯ ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರದ ನಡೆದಿದೆ ಎಂಬ ಆರೋಪ ಕೇಳಿಬಂದಿದೆ. ಮೂರು ಲಕ್ಷ ರೂಪಾಯಿ ಲಂಚ ಪಡೆಯುವಾಗಲೇ, ಪಾಲಿಕೆಯ ವ್ಯವಸ್ಥಾಪಕ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ. ಪಡೆದ ಲಂಚದಲ್ಲಿ ಪಾಲಿಕೆ ಆಯುಕ್ತರಿಗೆ, ಸಚಿವರಿಗೆ ಪಾಲು ಇದೇ ಎಂಬ ಆಡಿಯೋ ಸಹ ವೈರಲ್ ಆಗಿದೆ.

ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿಕಂಠ
ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿಕಂಠ
author img

By

Published : Nov 9, 2022, 5:53 PM IST

Updated : Nov 14, 2022, 10:56 AM IST

ದಾವಣಗೆರೆ: ರಾಜ್ಯ ಸರ್ಕಾರದ ಮೇಲೆ ಶೇ 40ರಷ್ಟು ಕಮಿಷನ್ ಆರೋಪ ಕೇಳಿ ಬರುತ್ತಿದೆ‌. ಈ ಆರೋಪಕ್ಕೆಲ್ಲ ಕಾರಣ ದಾವಣಗೆರೆ ಮಹಾನಗರ ಪಾಲಿಕೆಯ ಮ್ಯಾನೇಜರ್ ಮೇಲೆ ನಡೆದ ಲೋಕಾಯುಕ್ತ ದಾಳಿ. ಹೌದು, ವೆಂಕಟೇಶ್ ದಾವಣಗೆರೆ ಮಹಾನಗರ ಪಾಲಿಕೆ ಕಚೇರಿಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದು, ಇಡೀ ಪಾಲಿಕೆ ಆಡಳಿತದ ಸೂತ್ರದಾರರಾಗಿದ್ದಾರೆ.

ಇಲ್ಲಿ ಜಕಾತಿ ಟೆಂಡರ್ ನೀಡಲು ಕೃಷ್ಣಪ್ಪ ಎಂಬುವರಿಂದ 7 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದ. ಇದರಲ್ಲಿ ಈಗಾಗಲೇ ಎರಡು ಲಕ್ಷ ರೂಪಾಯಿ ಅಡ್ವಾನ್ಸ್ ಪಡೆದಿದ್ದ. ಮೂರು ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಎಸ್ಪಿ ಎಂ ಎಸ್ ಕೌಲಾಪುರೆ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇದರಿಂದ ಇಡಿ ಮಹಾನಗರ ಪಾಲಿಕೆಯ ಕರ್ಮಕಾಂಡ ಬೆಳಕಿಗೆ ಬಂದಿದೆ.

ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿಕಂಠ

'ಪಾಲಿಕೆಯಲ್ಲಿ ಪ್ರತಿಯೊಂದಕ್ಕೂ ದುಡ್ಡು ಕೊಡಬೇಕು. ಯಾರದ್ದೇ ಕೆಲಸ ಆಗಬೇಕಿದ್ದರೆ ಹಣ ಕೊಡಲೇಬೇಕು. ಇಂತಹ ಕರ್ಮಕಾಂಡವನ್ನ ಲೋಕಾಯುಕ್ತರು ಬೆಳಕಿಗೆ ತಂದಿದ್ದಾರೆ' ಎಂದು ಶ್ರೀರಾಮ ಸೇನೆಯ ಜಿಲ್ಲಾಧ್ಯಕ್ಷ ಮಣಿಕಂಠ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಹಿಂದುಳಿದ ವರ್ಗದ ಸಚಿವರನ್ನು ಟಾರ್ಗೆಟ್ ಮಾಡಲಾಗುತ್ತಿದೆ: ಭೈರತಿ ಬಸವರಾಜ್

ಹೀಗೆ ಲೋಕಾಯುಕ್ತರ ಬಲೆಗೆ ಬಿದ್ದ ವೆಂಕಟೇಶ್ ಅವರು ಪಡೆಯುತ್ತಿರುವ ಲಂಚದಲ್ಲಿ ಪಾಲಿಕೆಯ ಆಯುಕ್ತ ವಿಶ್ವನಾಥ ಮುದಜ್ಜಿ ಅವರಿಗೆ ಪಾಲು ಇದೆಯಂತೆ. ಇದು ಲೋಕಾಯುಕ್ತರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ನಗರಾಭಿವೃದ್ಧಿ ಇಲಾಖೆ ಸಚಿವ ಭೈರತಿ ಬಸವರಾಜ್ ಅವರ ಕುರಿತಾಗಿದೆ ಎನ್ನಲಾದ ಆಡಿಯೋ ಸಹ ವೈರಲ್ ಆಗಿದೆ.

ತಮ್ಮ ಮೇಲಿನ ಆರೋಪ ತಳ್ಳಿ ಹಾಕಿರುವ ಸಚಿವ ಭೈರತಿ ಬಸವರಾಜ್, ಇದು ಸತ್ಯಕ್ಕೆ ದೂರವಾದದ್ದು, ನನಗೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ. ಲೋಕಾಯುಕ್ತ ತನಿಖೆಯಾಗ್ತಿದೆ. ಹಿಂದುಳಿದ ಸಚಿವರನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.

Last Updated : Nov 14, 2022, 10:56 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.