ದಾವಣಗೆರೆ: ಮೂರು ಸಾವಿರ ರೂಪಾಯಿ ಲಂಚ ಪಡೆಯುತ್ತಿದ್ದ ವೇಳೆ ಪಂಚಾಯಿತಿ ಬಿಲ್ ಕಲೆಕ್ಟರ್ ಭ್ರಷ್ಟಾಚಾರ ನಿಗ್ರಹ ದಳದ (ಎಸಿಬಿ) ಬಲೆಗೆ ಬಿದ್ದ ಘಟನೆ ನಡೆದಿದೆ.
ಹೊನ್ನಾಳಿ ತಾಲೂಕಿನ ದಾಣಿಹಳ್ಳಿ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಸಾಗರ್ ಎಸಿಬಿ ಬಲೆಗೆ ಬಿದ್ದ ಅಧಿಕಾರಿ. ದಾಣಿಹಳ್ಳಿಯ ಸಚಿನ್ ಎಂಬುವರಿಗೆ ಜಾಗ ಅಳತೆ, ಇ-ಸ್ವತ್ತು ದಾಖಲೆ ನೀಡಲು ಸಾಗರ್ ಲಂಚ ಕೇಳಿದ್ದರು. ನಂತರ ಸಚಿನ್ರಿಂದ ಹೊನ್ನಾಳಿ ಬಸ್ ನಿಲ್ದಾಣದ ಬಳಿ ಲಂಚದ ಹಣ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಸಾಗರ್ನನ್ನು ಬಂಧಿಸಿದ್ದು, ಮೂರು ಸಾವಿರ ರೂಪಾಯಿ ನಗದು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್ಪಿ ಪರಮೇಶ್ವರಪ್ಪ, ಸಿಪಿಐ ಮಧುಸೂದನ್, ನಾಗಪ್ಪ ಹಾಗೂ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.