ETV Bharat / state

ದಾವಣಗೆರೆಯಲ್ಲಿ 12 ವಿದ್ಯಾರ್ಥಿಗಳಿಗೆ ಕೊರೊನಾ: ಸಂಪರ್ಕಕಕ್ಕೆ ಬಂದ 200 ಮಂದಿಗೆ ಸ್ವ್ಯಾಬ್​ ಟೆಸ್ಟ್

ಕೊರೊನಾ 2ನೇ ಅಲೆ ನಡುವೆ ದಾವಣಗೆರೆಯಲ್ಲಿ ಪ್ರೌಢಶಾಲೆಯ 12 ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದೆ. ಇವರ ಸಂಪರ್ಕಕ್ಕೆ ಬಂದ ಸುಮಾರು 200ಕ್ಕೂ ಹೆಚ್ಚು ಮಂದಿಯ ದ್ರವ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ
author img

By

Published : Apr 3, 2021, 10:16 PM IST

ದಾವಣಗೆರೆ: ರಾಜ್ಯದಲ್ಲಿ ಕೊರೊನಾ 2ನೇ ಅಲೆ ಭೀತಿ ದಿನೇ‌ ದಿನೆ ಹೆಚ್ಚಾಗುತ್ತಲೇ‌ ಇದೆ. ಇದರಿಂದ‌ ಸರ್ಕಾರ ಕೂಡ ಸಾಕಷ್ಟು ನಿಬಂಧನೆಗಳನ್ನು ವಿಧಿಸಿ ಆದೇಶ ಹೊರಡಿಸಿದೆ. ಇದೀಗ ಜಿಲ್ಲೆಯ 12 ವಿದ್ಯಾರ್ಥಿಗಳಿಗೆ ಕೊರೊನಾ ದೃಢವಾಗಿದೆ.

ಹರಿಹರ ತಾಲೂಕಿನಲ್ಲಿ 4, ದಾವಣಗೆರೆ ತಾಲೂಕಿನಲ್ಲಿ 3, ಚನ್ನಗಿರಿಯಲ್ಲಿ ಇಬ್ಬರು, ಹೊನ್ನಾಳಿಯಲ್ಲಿ ಇಬ್ಬರು ಸೇರಿದಂತೆ ಜಗಳೂರನಲ್ಲಿ ಓರ್ವ ವಿದ್ಯಾರ್ಥಿಯಲ್ಲಿ ಸೋಂಕು ಪತ್ತೆಯಾಗಿರುವುದು ಜಿಲ್ಲಾಡಳಿತ ಹಾಗೂ ಪೋಷಕರಲ್ಲಿ ಆತಂಕ ಸೃಷ್ಟಿಸಿದೆ.

ಈ ಮಕ್ಕಳ ಸಂಪರ್ಕಕ್ಕೆ ಬಂದಿದ್ದ 132 ಮಕ್ಕಳು, 36 ಶಿಕ್ಷಕರು, 24 ಬೋಧಕೇತರ ಸಿಬ್ಬಂದಿ ಹಾಗೂ 32 ಜನ ಕುಟುಂಬ ಸದಸ್ಯರ ಗಂಟಲು ದ್ರವವನ್ನು ಆರೋಗ್ಯ ಇಲಾಖೆಯ ಸಿಬ್ಬಂದಿ ಸಂಗ್ರಹಿಸಿದ್ದು, ವರದಿ ಬರುವ ತನಕ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ದ್ವಿತೀಯ ಸಂಪರ್ಕಿತರ ಪತ್ತೆಗೆ ಮುಂದಾಗಿದ್ದೇವೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಹಿಳೆಯ ಗರ್ಭಕೋಶದಲ್ಲಿ 18 ಕೆ.ಜಿ ತೂಕದ ಗಡ್ಡೆ!: ದಾವಣಗೆರೆ ವೈದ್ಯರಿಂದ ಯಶಸ್ವಿ ಶಸ್ತ್ರಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.