ETV Bharat / state

ಹೃದ್ರೋಗ ಇರುವ ನವಜಾತ ಶಿಶು ಝೀರೋ ಟ್ರಾಫಿಕ್​ನಲ್ಲಿ ಬೆಂಗಳೂರಿಗೆ ರವಾನೆ

author img

By

Published : Feb 6, 2020, 3:04 PM IST

Updated : Feb 6, 2020, 3:57 PM IST

ನವಜಾತ ಶಿಶುವೊಂದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅದನ್ನು ತುರ್ತು ಶಸ್ತ್ರ ಚಿಕಿತ್ಸೆಗಾಗಿ ಐಸಿಯು ಆ್ಯಂಬುಲೆನ್ಸ್​​ ಮೂಲಕ ಇಂದು ಮಧ್ಯಾಹ್ನ 12ಕ್ಕೆ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಝೀರೋ ಟ್ರಾಫಿಕ್​ನಲ್ಲಿ ಕರೆದೊಯ್ಯಲಾಗಿದೆ.

Zero traffic ..... 40 day heart disease baby to Bangalore!
ಝೀರೋ ಟ್ರಾಫಿಕ್..... 40 ದಿನದ ಹೃದ್ರೋಗ ಮಗು ಬೆಂಗಳೂರಿಗೆ!

ನೆಲ್ಯಾಡಿ(ದಕ್ಷಿಣ ಕನ್ನಡ): 40 ದಿನದ ನವಜಾತ ಶಿಶುವೊಂದು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಅದನ್ನು ತುರ್ತು ಶಸ್ತ್ರ ಚಿಕಿತ್ಸೆಗಾಗಿ ಐಸಿಯು ಆ್ಯಂಬುಲೆನ್ಸ್​​ನಲ್ಲಿ ಇಂದು ಮಧ್ಯಾಹ್ನ 12ಕ್ಕೆ ಫಾದರ್ ಮುಲ್ಲರ್ ಆಸ್ಪತ್ರೆಯಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಗೆ ಝೀರೋ ಟ್ರಾಫಿಕ್​ನಲ್ಲಿ ಕರೆದೊಯ್ಯಲಾಗಿದೆ.

ಝೀರೋ ಟ್ರಾಫಿಕ್​ನಲ್ಲಿ ಹೃದಯ ಕಾಯಿಲೆ ಇರುವ ನವಜಾತ ಶಿಶು ಬೆಂಗಳೂರಿಗೆ ರವಾನೆ

ಈವರೆಗೆ ಶಿಶು ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿತ್ತು. ಮಂಗಳೂರಿಂದ ಹೊರಟ ವಾಹನ ಉಪ್ಪಿನಂಗಡಿಯಿಂದ ರಾಷ್ಟ್ರೀಯ ಹೆದ್ದಾರಿ 75ರ ಮೂಲಕ ಹಾಸನ ಕಡೆ ತೆರಳಿತು. ಈ ವೇಳೆ ಉಪ್ಪಿನಂಗಡಿ, ನೆಲ್ಯಾಡಿ, ಗುಂಡ್ಯ ಕಡೆಗಳಲ್ಲಿ ಪೊಲೀಸರು, ಸಾಮಾಜಿಕ ಸಂಘಟನೆಗಳ ಕಾರ್ಯಕರ್ತರ ನೆರವಿನೊಂದಿಗೆ ಸಂಚಾರ ಸುಗಮಗೊಳಿಸಿ ಆ್ಯಂಬುಲೆನ್ಸ್ ತೆರಳಲು ಅನುವು ಮಾಡಿಕೊಡಲಾಗಿದೆ. ಇದಕ್ಕೆ ಸಾರ್ವಜನಿಕರೂ ಸಹ ಸಹಕಾರ ನೀಡಿದ್ದಾರೆ.

Last Updated : Feb 6, 2020, 3:57 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.