ಮಂಗಳೂರು: ಕಳೆದ ಎರಡು ವರ್ಷಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 42 ಶಾಲೆಗಳಲ್ಲಿ ಶೂನ್ಯ ದಾಖಲಾತಿಯಾಗಿದೆ. ಇದರಿಂದ ಆ ಶಾಲೆಗಳನ್ನು ಮುಚ್ಚುವ ಭೀತಿ ಎದುರಾಗಿದೆ. 2021-22 ಮತ್ತು 2022-23 ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಸೇರಿ ಒಟ್ಟು 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ.
ಎಲ್ಲಿ ಮತ್ತು ಎಷ್ಟು ಶಾಲೆಗಳಲ್ಲಿ ಶೂನ್ಯ ದಾಖಲಾತಿ?: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ವಿಭಾಗದ 8 ಶಾಲೆಗಳು, ಬೆಳ್ತಂಗಡಿ ವಿಭಾಗದ 2, ಮಂಗಳೂರು ನಾರ್ಥ ವಿಭಾಗದ 12, ಮಂಗಳೂರು ಸೌತ್ ವಿಭಾಗದ 9, ಮೂಡಬಿದ್ರೆ ವಿಭಾಗದ 6, ಪುತ್ತೂರು ವಿಭಾಗದ 4 ಮತ್ತು ಸುಳ್ಯ ವಿಭಾಗದ 1 ಶಾಲೆಯಲ್ಲಿ ಯಾರೂ ದಾಖಲಾಗಿಲ್ಲ.
ಇದರಲ್ಲಿ 5 ಸರ್ಕಾರಿ ಶಾಲೆಗಳು, 17 ಅನುದಾನಿತ ಮತ್ತು 20 ಅನುದಾನರಹಿತ ಖಾಸಗಿ ಶಾಲೆಗಳಾಗಿದೆ. ಇದರಲ್ಲಿ 2021-22 ರಲ್ಲಿ 20 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿತ್ತು. 2022-23 ರಲ್ಲಿ ಇವುಗಳ ಜೊತೆಗೆ ಮತ್ತೆ 22 ಶಾಲೆಗಳು ಶೂನ್ಯ ದಾಖಲಾತಿ ಆಗಿ ಎರಡು ಸಾಲಿನಲ್ಲಿ ಒಟ್ಟು 42 ಶಾಲೆಗಳಲ್ಲಿ ಶೂನ್ಯ ದಾಖಲಾತಿ ಆಗಿದೆ. ಇದರಿಂದಾಗಿ ಈ ಶಾಲೆಗಳು ಮುಚ್ಚುವ ಭೀತಿ ಎದುರಾಗಿದೆ.
ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆ, ಖಾಸಗಿ ಆಂಗ್ಲ ಶಿಕ್ಷಣ ಸಂಸ್ಥೆಗಳತ್ತ ಆಕರ್ಷಣೆಯಿಂದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಿಗೆ ವಿದ್ಯಾರ್ಥಿಗಳ ಕೊರತೆ ಎದುರಾಗಿದೆ. ವಿದ್ಯಾರ್ಥಿಗಳಿಗೆ ಸರಿಯಾದ ಸೌಕರ್ಯಗಳನ್ನು ನೀಡಿ, ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರನ್ನು ಶಾಲೆಗಳಿಗೆ ಕರೆತರಲು ಸಾಧ್ಯವಾಗದೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳ ಕೊರತೆ ಎದುರಿಸುವಂತಾಗಿದೆ.
ಇದನ್ನೂ ಓದಿ: ಬಂಟ್ವಾಳ: ತೋಟದ ಅಡಿಕೆ ಆದಾಯದಿಂದಲೇ ಬಸ್ ಖರೀದಿಸಿದ ಸರ್ಕಾರಿ ಶಾಲೆ