ಮಂಗಳೂರು: ಕ್ರಿಕೆಟ್ ಬಾಲ್ ತೆಗೆಯಲು ಹೋಗಿ ನಾಲ್ಕನೇ ಮಹಡಿಯಿಂದ ಪಿಯುಸಿ ವಿದ್ಯಾರ್ಥಿಯೊಬ್ಬ ಬಿದ್ದು ಚಿಕಿತ್ಸೆ ಫಲಿಸದೇ ಸಾವಿಗೀಡಾದ ಘಟನೆ ನಗರದ ಕೊಟ್ಟಾರ ಚೌಕಿಯಲ್ಲಿ ನಡೆದಿದೆ. ಪಿಯುಸಿ ವಿದ್ಯಾರ್ಥಿ ಪ್ರಣವ್ ಎಸ್.ಮುಂಡಾಸ (18) ಮೃತಪಟ್ಟ ವಿದ್ಯಾರ್ಥಿ. ಈತ ಬಿಜಾಪುರ ಮೂಲದವನಾಗಿದ್ದು, ನಗರದ ಚೈತನ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಯಾಗಿದ್ದಾನೆ.
ಈತ ಕೊಟ್ಟಾರಚೌಕಿಯಲ್ಲಿರುವ ಹಾಸ್ಟೆಲ್ನ ನಾಲ್ಕನೇ ಮಹಡಿಯಿಂದ ಬಿದ್ದು ಮೃತಪಟ್ಟಿದ್ದಾನೆ. ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ವೇಳೆ ಕ್ರಿಕೆಟ್ ಬಾಲ್ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದಿದೆ. ಕ್ರಿಕೆಟ್ ಬಾಲ್ ತೆಗೆದುಕೊಳ್ಳಲು ಹಾಸ್ಟೆಲ್ ಕಟ್ಟಡದ ತಗಡು ಶೀಟ್ ಮೇಲೆ ಪ್ರಣವ್ ಹತ್ತಿದ್ದು, ಈ ಸಂದರ್ಭ ಜಾರಿ ಬಿದ್ದ ಆತ ಗಂಭೀರವಾಗಿ ಗಾಯಗೊಂಡಿದ್ದನು.
ಆತನನ್ನು ತಕ್ಷಣವೇ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಈ ಬಗ್ಗೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಪಿಎಸ್ಐ ಪರೀಕ್ಷಾ ಹಗರಣದಲ್ಲಿ ಕಾಂಗ್ರೆಸ್ನಿಂದ ಅಶ್ವತ್ಥ್ ನಾರಾಯಣ ಟಾರ್ಗೆಟ್: ಪ್ರತಾಪ್ ಸಿಂಹ