ETV Bharat / state

ಒಟಿಪಿ ಸಂಖ್ಯೆ ಪಡೆದು ಬ್ಯಾಂಕ್ ಖಾತೆಗೆ ಕನ್ನ ಹಾಕಿದ ವಂಚಕ - OTP number

ಮೂಡಬಿದಿರೆಯಲ್ಲಿ ಯುವತಿಯೋರ್ವಳ ಮೊಬೈಲ್​ನಿಂದ ಒಟಿಪಿ ಸಂಖ್ಯೆ ಪಡೆದ ವಂಚಕರು, ಆಕೆಯ ಖಾತೆಯಿಂದ ಹಣ ಎಗರಿಸಿರುವ ಘಟನೆ ನಡೆದಿದೆ. ಬ್ಯಾಂಕ್​ಗೆ ಹೋಗಿ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ಸಹ ಅಸಹಾಯಕತೆ ವ್ಯಕ್ತಪಡಿಸಿರುವುದಾಗಿ ತಿಳಿದು ಬಂದಿದೆ.

Young man who stole Rs 6 thousand from bank account
ಬ್ಯಾಂಕ್ ಖಾತೆಗೆ ಕನ್ನ ಹಾಕಿದ ವಂಚಕ
author img

By

Published : Aug 25, 2020, 10:10 PM IST

ಮೂಡುಬಿದಿರೆ: ಯುವತಿಯೋರ್ವಳನ್ನು‌ ವಂಚಿಸಿ ಒಟಿಪಿ ಸಂಖ್ಯೆ ಪಡೆದು ಆಕೆಯ ಬ್ಯಾಂಕ್ ಖಾತೆಯಿಂದ 6 ಸಾವಿರ ರೂ. ಲಪಟಾಯಿಸಿದ ಪ್ರಕರಣ ಮೂಡಬಿದಿರೆಯಲ್ಲಿ ನಡೆದಿದೆ.

ಮೂಡುಬಿದಿರೆ ತಾಲೂಕಿನ ಅಲಂಗಾರು ಎಂಬಲ್ಲಿನ ಯುವತಿಯ ಮೊಬೈಲ್​ಗೆ ಸೋಮವಾರ ಬೆಳಗ್ಗೆ ತನ್ನನ್ನು ಬ್ಯಾಂಕ್ ಅಧಿಕಾರಿಯೆಂದು ಪರಿಚಯಿಸಿಕೊಂಡು ವ್ಯಕ್ತಿಯೋರ್ವನು ಕರೆ ಮಾಡಿದ್ದಾನೆ. ಈತ ನಿಮ್ಮ ಬ್ಯಾಂಕ್ ಅಕೌಂಟ್ ಕ್ಲೋಸ್ ಆಗುತ್ತೆ, ರಿನೀವಲ್ ಮಾಡಬೇಕಾದ್ರೆ ನಿಮ್ಮ ಮೊಬೈಲ್​ಗೆ ಒಟಿಪಿ ಬರುತ್ತೆ, ಅದನ್ನು ತಿಳಿಸಿ ಎಂದಿದ್ದಾನೆ. ಆತ ಹೇಳಿದಂತೆ ತನ್ನ ಮೊಬೈಲ್​ಗೆ ಬಂದ ಒಟಿಪಿ ಸಂಖ್ಯೆಯನ್ನು ತಿಳಿಸಿದ್ದಾರೆ.

ಇದಾದ ಸ್ವಲ್ಪ ಹೊತ್ತಿನಲ್ಲಿ ಬ್ಯಾಂಕ್ ಖಾತೆಯಿಂದ 6 ಸಾವಿರ ರೂ. ವಿತ್​ ಡ್ರಾ ಆಗಿರುವ ಮೆಸೇಜ್ ಬಂದಾಗಲೇ ಯುವತಿಗೆ ತಾನು ಮೋಸ ಹೋಗಿರುವ ಬಗ್ಗೆ ತಿಳಿದು ಬಂದಿದೆ. ತಕ್ಷಣ ಆಕೆ ಬ್ಯಾಂಕ್​ಗೆ ಹೋಗಿ ವಿಚಾರಿಸಿದಾಗ ಅಲ್ಲಿನ ಸಿಬ್ಬಂದಿ ಸಹ ಅಸಹಾಯಕತೆ ವಕ್ತಪಡಿಸಿದ್ದಾರೆ.

ವಿಜಯಾ ಬ್ಯಾಂಕ್ ಇದೀಗ ಬ್ಯಾಂಕ್ ಆಫ್ ಬರೋಡಾದ ಜೊತೆ ವಿಲೀನಗೊಂಡ ಹಿನ್ನೆಲೆ ಬ್ಯಾಂಕ್ ಖಾತೆ ಸಂಖ್ಯೆಯಲ್ಲಿ ಬದಲಾವಣೆಯಾಗಿರುವ ಬಗ್ಗೆ ಗ್ರಾಹಕರ ಮೊಬೈಲ್​ಗೆ ಮಾಹಿತಿ ಬರುತ್ತಿವೆ. ಅದಕ್ಕೆ ಸಂಬಂಧಿಸಿ ತನಗೆ ಬ್ಯಾಂಕ್ ಅಧಿಕಾರಿ ಕರೆ ಮಾಡಿರಬಹುದೆಂದು ತಿಳಿದು ಯುವತಿ ಒಟಿಪಿ ಸಂಖ್ಯೆ ಕೊಟ್ಟಿರುವುದಾಗಿ ತಿಳಿದು ಬಂದಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.