ETV Bharat / state

ಮಂಗಳೂರು ಏರ್​ಪೋರ್ಟ್ ರನ್‌ವೇ​ ಕಾಮಗಾರಿ: ವಿಮಾನ ಹಾರಾಟ ಸಮಯದಲ್ಲಿ ಬದಲಾವಣೆ - ಈಟಿವಿ ಭಾರತ ಕನ್ನಡ

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾಮಗಾರಿ ನಡೆಯಲಿದ್ದು, ವಿಮಾನ ಹಾರಾಟದ ವೇಳಾಪಟ್ಟಿಯಲ್ಲಿ ಬದಲಾವಣೆಯಾಗಲಿದೆ.

Mangaluru International Airport
ವಿಮಾನ ನಿಲ್ದಾಣ
author img

By

Published : Jan 2, 2023, 11:37 AM IST

ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇ ಕಾಮಗಾರಿ ನಡೆಯಲಿದ್ದು ಜನವರಿ 27ರಿಂದ ವಿಮಾನ ಹಾರಾಟದಲ್ಲಿ ವ್ಯತ್ಯಯವಾಗಲಿದೆ. ಏರ್​ಪೋರ್ಟ್​ನಲ್ಲಿ ರನ್ ವೇ 06/24ರ ಮರು ರಚನಾ (ರಿಕಾರ್ಪೆಟಿಂಗ್) ಕಾಮಗಾರಿ ಕೈಗೊಳ್ಳಲಿರುವ ಕಾರಣ ಈ ಬದಲಾವಣೆಯಾಗಲಿದೆ.

ಕಾಮಗಾರಿಯನ್ನು ಜನವರಿ 27ರಿಂದ 31 ರವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಹೀಗಾಗಿ ಭಾನುವಾರ ಮತ್ತು ರಾಷ್ಟ್ರೀಯ ರಜಾ ದಿನಗಳನ್ನು ಹೊರತುಪಡಿಸಿ ಮುಂದಿನ 4 ತಿಂಗಳು ಬೆಳಗ್ಗೆ 9.30ರಿಂದ ಸಂಜೆ 6ರವರೆಗೆ ಕಾಮಗಾರಿ ನಡೆಯಲಿದೆ. ಈ ಅವಧಿಗನುಸಾರವಾಗಿ ವಿಮಾನಯಾನ ಸಂಸ್ಥೆಗಳು ತಮ್ಮ ವೇಳಾಪಟ್ಟಿಯನ್ನು ಬೆಳಗ್ಗೆ 9.30ರ ಮೊದಲು ಮತ್ತು ಸಂಜೆ 6 ಗಂಟೆಯ ನಂತರಕ್ಕೆ ಬದಲಾಯಿಸಿ ಕಾರ್ಯನಿರ್ವಹಿಸಲಿವೆ ಎಂದು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

ಇದನ್ನೂ ಓದಿ: ವರ್ಷದ ಆರಂಭದಲ್ಲೇ ದುರಂತ: ಹಳಿ ತಪ್ಪಿ ನೆಲಕ್ಕುರುಳಿದ 12 ರೈಲು ಬೋಗಿಗಳು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.