ಮಂಗಳೂರು: ನಗರದಲ್ಲಿ ಜನದಟ್ಟಣೆ, ವಾಹನದಟ್ಟಣೆ ಇಂದು ಬಹಳ ವಿರಳವಾಗಿದ್ದು, ವಾರಾಂತ್ಯ ಕರ್ಫ್ಯೂಗೆ ಮಂಗಳೂರಿನ ಜನತೆಯಿಂದ ಸಂಪೂರ್ಣ ಬೆಂಬಲ ದೊರಕಿದೆ.
ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನಿಯಮಾವಳಿ ಜೊತೆಗೆ ವಾರಾಂತ್ಯ ಕರ್ಫ್ಯೂ ಜಾರಿ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಅನಗತ್ಯ ಸಂಚಾರಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಬೆಳಗ್ಗೆ 6ರಿಂದ 9ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಸಡಿಲಿಕೆ ಇದ್ದು, ಈ ಸಂದರ್ಭ ಜನ ಸಂಚಾರವಿದ್ದರೂ, ಆ ಬಳಿಕ ರಸ್ತೆಯಲ್ಲಿ ಜನ ಸಂಚಾರ ಕಡಿಮೆಯಾಗಿದೆ.
ಪೊಲೀಸರು ಅಲ್ಲಲ್ಲಿ ಬ್ಯಾರಿಕೇಡ್ ಹಾಕಿಕೊಂಡು ಸಂಚಾರ ನಡೆಸುವವರನ್ನು ವಿಚಾರಣೆ ನಡೆಸಿ ಬಿಡುತ್ತಿದ್ದಾರೆ. ಇಂದು ಮಾತ್ರ ಎಂದಿಗಿಂತ ಜನ ಸಂಚಾರ ಡಿಮೆಯಾಗಿದೆ. ಬೆಳಗ್ಗೆ 9 ಗಂಟೆಯ ಬಳಿಕ ಎಲ್ಲವೂ ಬಂದ್ ಆಗಿದ್ದು, ಕಡಲನಗರಿ ಸಂಪೂರ್ಣ ಸ್ತಬ್ಧಗೊಂಡಿದೆ.