ETV Bharat / state

ಅರೆಹುಚ್ಚು ಬಿಜೆಪಿ ನಾಯಕರಿಗೆ ನಾವೇ ಖರ್ಚು ಮಾಡಿ ಚಿಕಿತ್ಸೆ ಕೊಡಿಸುತ್ತೇವೆ : ಬಿ ವಿ ಶ್ರೀನಿವಾಸ್ - ಸಿಟಿ ರವಿ ಕುರಿತು ಬಿವಿ ಶ್ರೀನಿವಾಸ ಹೇಳಿಕೆ

ಪ್ರಧಾನಿ ಹಿಂದೆ ಸೂರ್ಯಗ್ರಹಣ ನೋಡಲು ಜರ್ಮನಿಯ ಬರ್ಲಿನ್ ನಿಂದ 2 ಲಕ್ಷ ರೂ. ಕೊಟ್ಟು ಕನ್ನಡಕ ಖರೀದಿ ಮಾಡಿದ್ದರು. ನಾವು ಅವರಿಗೊಂದು ಕನ್ನಡಕ ಖರೀದಿ ಮಾಡಿ ಕೊಡುತ್ತೇವೆ. ಅದನ್ನು ಧರಿಸಿ ಅವರು ರೈತರ ಆತ್ಮಹತ್ಯೆ, ನಿರುದ್ಯೋಗದಿಂದ ಖಿನ್ನತೆಗೆ ಹೋಗುತ್ತಿರುವ ಯುವಜನತೆ, ಕೊರೊನಾ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡು ಪಾಡು ಪಡುತ್ತಿರುವುದನ್ನು ನೋಡಲಿ.‌ ನಿಜವಾಗಿ ಕೊರೊನಾ ಸೋಂಕಿನಿಂದ ಯಾರೂ ಸತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರ ಸರಿಯಾದ ನಿರ್ವಹಣೆಯಿಲ್ಲದೆ ಜನ ಸಾಯುತ್ತಿದ್ದಾರೆ..

bv-srinivas
ಬಿವಿ ಶ್ರೀನಿವಾಸ
author img

By

Published : Aug 23, 2021, 8:37 PM IST

ಮಂಗಳೂರು : ಇಲ್ಲಸಲ್ಲದ ಹೇಳಿಕೆ ಕೊಡುವ ಸಿ ಟಿ ರವಿಯವರಿಗೆ ಅರೆಹುಚ್ಚು ಹಿಡಿದಿದೆ. ಅದೆಷ್ಟು ಖರ್ಚಾದರೂ ಪರವಾಗಿಲ್ಲ, ಯೂತ್ ಕಾಂಗ್ರೆಸ್ ಇಂತಹ ಹೇಳಿಕೆ ನೀಡುವ ಬಿಜೆಪಿ ನಾಯಕರನ್ನು ಲಂಡನ್​ಗೆ ಕಳುಹಿಸಿ ಅವರ ತಲೆ ಸರಿಪಡಿಸುವ ಕಾರ್ಯ ಮಾಡುತ್ತದೆ ಎಂದು ಯೂತ್ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ ವಿ ಶ್ರೀನಿವಾಸ್ ಹೇಳಿದರು.

ನಗರದ ಸರ್ಕ್ಯೂಟ್ ಹೌಸ್​ನಲ್ಲಿ‌ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಿಟಿ ರವಿಯವರು ನೆಹರೂ, ರಾಜೀವ್ ಗಾಂಧಿ ಬಗ್ಗೆ ತಿಳಿದು ಮಾತನಾಡಲಿ. ಅವರಿಗೆ ಮಂತ್ರಿ, ಸಿಎಂ ಆಗುವ ಆಕಾಂಕ್ಷೆಯಿಂದ ಮೋದಿ, ಜೆ ಪಿ ನಡ್ಡಾ, ಅಮಿತ್ ಷಾ ಅವರನ್ನು ಖುಷಿಪಡಿಸಲು ಈ ರೀತಿ ಹೇಳಿಕೆ ಕೊಡುತ್ತಿದ್ದಾರೆ ಎಂದರು.

ಅರೆಹುಚ್ಚು ಹಿಡಿದ ಬಿಜೆಪಿ ನಾಯಕರಿಗೆ ನಾವೇ ಖರ್ಚು ಮಾಡಿ ಚಿಕಿತ್ಸೆ ಕೊಡಿಸುತ್ತೇವೆ.. ಬಿ ವಿ ಶ್ರೀನಿವಾಸ್

ಮೋದಿಗೆ ಒಂದು ಕನ್ನಡಕ ಕೊಡುತ್ತೇವೆ

ಪ್ರಧಾನಿ ಹಿಂದೆ ಸೂರ್ಯಗ್ರಹಣ ನೋಡಲು ಜರ್ಮನಿಯ ಬರ್ಲಿನ್ ನಿಂದ 2 ಲಕ್ಷ ರೂ. ಕೊಟ್ಟು ಕನ್ನಡಕ ಖರೀದಿ ಮಾಡಿದ್ದರು. ನಾವು ಅವರಿಗೊಂದು ಕನ್ನಡಕ ಖರೀದಿ ಮಾಡಿ ಕೊಡುತ್ತೇವೆ. ಅದನ್ನು ಧರಿಸಿ ಅವರು ರೈತರ ಆತ್ಮಹತ್ಯೆ, ನಿರುದ್ಯೋಗದಿಂದ ಖಿನ್ನತೆಗೆ ಹೋಗುತ್ತಿರುವ ಯುವಜನತೆ, ಕೊರೊನಾ ಸಂದರ್ಭದಲ್ಲಿ ಪೋಷಕರನ್ನು ಕಳೆದುಕೊಂಡು ಪಾಡು ಪಡುತ್ತಿರುವುದನ್ನು ನೋಡಲಿ.‌ ನಿಜವಾಗಿ ಕೊರೊನಾ ಸೋಂಕಿನಿಂದ ಯಾರೂ ಸತ್ತಿಲ್ಲ. ಕೇಂದ್ರ ಹಾಗೂ ರಾಜ್ಯ ಸರಕಾರ ಸರಿಯಾದ ನಿರ್ವಹಣೆಯಿಲ್ಲದೆ ಜನ ಸಾಯುತ್ತಿದ್ದಾರೆ ಎಂದು ಆರೋಪಿಸಿದರು.

ಮುಂದಿನ ದಿನಗಳಲ್ಲಿ ಬಿಜೆಪಿಗೆ ಜನ ಮತ ನೀಡಲ್ಲ

ಒಂದನೇ ಅಲೆಯ ಬಳಿಕ‌ 8 ತಿಂಗಳುಗಳ ಕಾಲ ಇವರಲ್ಲಿ ಸಮಯವಿತ್ತು. ಆ ಸಂದರ್ಭ ಸರ್ಕಾರ ಸರಿಯಾದ ವ್ಯವಸ್ಥೆಯನ್ನು ಮಾಡಿದ್ದಲ್ಲಿ, ಇಷ್ಟೊಂದು ಸಾವುಗಳು ಆಗುತ್ತಿರಲಿಲ್ಲ.‌ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿ ಅಧಿಕಾರವನ್ನು ಪಡೆದ ರಾಜ್ಯ ಸರ್ಕಾರ ಇನ್ನೂ ಎಚ್ಚೆತ್ತಿಲ್ಲ. ಇದರಿಂದ ಜನರು ರೋಸಿ ಹೋಗಿದ್ದು, ಮುಂದಿನ ದಿನಗಳಲ್ಲಿ ಜನತೆ ಅವರಿಗೆ ಮತ ನೀಡಲ್ಲ ಎಂದು ಬಿ ವಿ ಶ್ರೀನಿವಾಸ್ ಹೇಳಿದರು.

ಕಪ್ಪು ಹಣ ಬಂದಿಲ್ಲ, ಖಾತೆಗೆ 15 ಲಕ್ಷ ರೂ. ಹಾಕಿಲ್ಲ

ರಾಜ್ಯದಲ್ಲಿ ಹಾಗೂ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡುತ್ತಿದೆ. ಕೇಂದ್ರ ಸರಕಾರ 2014ರ ಚುನಾವಣಾ ಪೂರ್ವದಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವ ಭರವಸೆ ಇನ್ನೂ ಈಡೇರಿಲ್ಲ. ಅಚ್ಛೇ ದಿನ್ ಕೇವಲ ಅದಾನಿ, ಅಂಬಾನಿಗೆ ಬಿಟ್ಟು ಬೇರೆ ಯಾವ ವರ್ಗದವರಿಗೂ ಬಂದಿಲ್ಲ. ಕಪ್ಪು ಹಣವೂ ಬಂದಿಲ್ಲ. ಯಾರ ಖಾತೆಗೂ 15 ಲಕ್ಷ ರೂ. ಹಾಕಿಲ್ಲ. ಮೋದಿಯವರು 'ನಾ ತಿನ್ನೋದಿಲ್ಲ, ಬೇರೆಯವರಿಗೆ ತಿನ್ನೋಕೆ ಬಿಡೋದಿಲ್ಲ' ಅಂದಿದ್ದರು. ಆದರೆ, ಪಾರ್ಸೆಲ್ ಮಾಡಿ ಲಂಡನ್ ಮತ್ತಿತರೆಡೆ ಮೆಹುಲ್ ಚೋಕ್ಸಿ, ನೀರವ್ ಮೋದಿ, ವಿಜಯ್ ಮಲ್ಯ ಮುಂತಾದವರನ್ನು ಕಳುಹಿಸಲಾಯಿತು ಎಂದು ಕಿಡಿಕಾರಿದರು.

ಭೇಟಿ ಪಡಾವೋ, ಭೇಟಿ ಕೋ ಬಿಜೆಪಿ ನೇತಾರ್ ಸೇ ಬಚಾವೋ

'ಭೇಟಿ ಬಚಾವೋ, ಭೇಟಿ ಪಡಾವೋ' ಎಂದರು. ಆದರೆ, ದೇಶದಲ್ಲಿ ಭೇಟಿ ಯಾರಿಂದ ಬಚಾವ್ ಮಾಡಬೇಕೆನ್ನುವುದು ದೊಡ್ಡ ಪ್ರಶ್ನೆಯಾಗಿದೆ. ಬಿಜೆಪಿ ಸರಕಾರ ಇರುವ ರಾಜ್ಯಗಳಲ್ಲಿ ಅತೀ ಹೆಚ್ಚು ಅತ್ಯಾಚಾರಗಳು ನಡೆಯುತ್ತಿದ್ದು, ಬಿಜೆಪಿ, ಎಂಎಲ್ಎ, ಬಿಜೆಪಿ ಎಂಪಿ, ಬಿಜೆಪಿ ಕಾರ್ಯಕರ್ತರು, ಅವರ ಪರಿವಾರದವರೇ ಆರೋಪಿಗಳಾಗಿದ್ದಾರೆ. ಇದೀಗ 'ಭೇಟಿ ಪಡಾವೋ, ಭೇಟಿ ಕೋ ಬಿಜೆಪಿ ನೇತಾರ್ ಸೇ ಬಚಾವೋ' ಎಂದು ಹೆಸರು ಬದಲಾವಣೆ ಮಾಡಬೇಕು ಎಂದು ಬಿ ವಿ ಶ್ರೀನಿವಾಸ್ ವ್ಯಂಗ್ಯವಾಡಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.