ETV Bharat / state

ಸರ್ಕಾರದ ಹಂಗಿಲ್ಲದೆ ಸ್ವಂತ ಹಣದಲ್ಲಿ ಸೇತುವೆ ನಿರ್ಮಾಣ: ಶಾಲಾ ಮಕ್ಕಳಿಂದ ಉದ್ಘಾಟನೆ

author img

By

Published : Jul 2, 2021, 3:42 PM IST

Updated : Jul 2, 2021, 8:37 PM IST

ಗ್ರಾಮಸ್ಥರೇ ಹಣ ಸಂಗ್ರಹಿಸಿ ನಿರ್ಮಿಸಿರುವ ಸುಳ್ಯ ತಾಲೂಕಿನ ಗುತ್ತಿಗಾರು-ಮೊಗ್ರಾ ಗ್ರಾಮದ ನಡುವಿನ ಕಬ್ಬಿಣದ ಕಿರು ಸೇತುವೆ ನಿನ್ನೆ ಉದ್ಘಾಟನೆಯಾಗಿದೆ. ನೂರಾರು ಮಂದಿ ಗೂಗಲ್ ಮೀಟ್ ಮೂಲಕ ಸೇತುವೆ ವೀಕ್ಷಿಸಿ ಊರಿನ ಜನರ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

Villagers constructed bridge in Sulya
ಸರ್ಕಾರಿ ಅನುದಾನದ ಹಂಗಿಲ್ಲದೇ ಸ್ವಂತ ಹಣದಲ್ಲಿ ಸೇತುವೆ ನಿರ್ಮಿಸಿದ ಗ್ರಾಮಸ್ಥರು

ಸುಳ್ಯ: ರಾಜ್ಯ ಹಾಗೂ ದೇಶೀಯ ಮಟ್ಟದಲ್ಲಿ ಸುದ್ದಿಯಾಗಿದ್ದ, ಜನರೇ ಸೇರಿ ಹಣ ಸಂಗ್ರಹಿಸಿ ನಿರ್ಮಿಸಿರುವ ಸುಳ್ಯ ತಾಲೂಕಿನ ಗುತ್ತಿಗಾರು-ಮೊಗ್ರಾ ಗ್ರಾಮದ ನಡುವಿನ ಕಬ್ಬಿಣದ ಕಿರು ಸೇತುವೆಯನ್ನು ನಿನ್ನೆ ಶಾಲಾ ಮಕ್ಕಳು ಉದ್ಘಾಟಿಸಿದ್ದಾರೆ.

ಊರಿನ ಜನರೇ ಸೇರಿ ನಿರ್ಮಿಸಿದ ಈ ಗ್ರಾಮ ಸೇತುವೆ ನೋಡಬೇಕು ಎಂಬ ಆಶಯವನ್ನು ಹಲವು ಮಂದಿ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಸೇತುವೆ ನಿರ್ಮಾಣದ ನೇತೃತ್ವವಹಿಸಿದ ಗ್ರಾಮ ಭಾರತ ತಂಡದ ಯುವಕರು ಗೂಗಲ್ ಮೀಟ್ ಮೂಲಕ ಸಾರ್ವಜನಿಕರಿಗೆ ನೋಡಲು ಅವಕಾಶ ಮಾಡಿಕೊಟ್ಟರು. ನೂರಾರು ಮಂದಿ ಗೂಗಲ್ ಮೀಟ್ ಮೂಲಕ ಸೇತುವೆ ವೀಕ್ಷಿಸಿ ಊರಿನ ಜನರ ಶ್ರಮವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.

ಆರಂಭದಲ್ಲಿ ಸೇತುವೆಯ ನಿರ್ಮಾಣಕ್ಕೂ ಮೊದಲು ಇದ್ದ ಸ್ಥಿತಿ, ಸೇತುವೆಯ ಆರಂಭ, ಕಾಮಗಾರಿ ನಡೆದ ಬಗ್ಗೆ ಮತ್ತು ಸೇತುವೆ ಪೂರ್ತಿಗೊಂಡ ಬಗ್ಗೆ ಸಂಪೂರ್ಣ ಮಾಹಿತಿ ನೀಡುವ ಒಂದು ವಿಡಿಯೋ ಕ್ಲಿಪ್ ಅನ್ನು ಪ್ರದರ್ಶಿಸಲಾಯಿತು. ಬಳಿಕ ಹಲವು ಮಂದಿ ಗೂಗಲ್ ಮೀಟ್​ನಲ್ಲಿ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ನಂತರದಲ್ಲಿ ಈ ಸೇತುವೆಯನ್ನು ಶಾಲಾ ಮಕ್ಕಳು ರಿಬ್ಬನ್ ಕಟ್ ಮಾಡುವ ಮೂಲಕ ಲೋಕಾರ್ಪಣೆಗೊಳಿಸಿದರು.

ಹಲವಾರು ದ್ವಿಚಕ್ರ ವಾಹನಗಳು, ಸಾರ್ವಜನಿಕರು ಈ ಗ್ರಾಮ ಸೇತುವೆಯ ಮೂಲಕ ಸಂಚರಿಸಿ ಖುಷಿ ಪಟ್ಟರು. ಹಲವು ದಿನಗಳಿಂದ ಗ್ರಾಮಸ್ಥರು ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಸೇತುವೆ ನಿರ್ಮಾನ ಮಾಡುವಂತೆ ಮನವಿ ಮಾಡಿದ್ದರು. ಆದರೆ ಸರ್ಕಾರದಿಂದ ಯಾವುದೇ ಅನುದಾನ ಸಿಗದ ಹಿನ್ನೆಲೆಯಲ್ಲಿ ಗ್ರಾಮಸ್ಥರೇ ಸೇರಿ ಈ "ಗ್ರಾಮ ಸೇತು" ನಿರ್ಮಿಸಿ ಗಮನಸೆಳೆದಿದ್ದಾರೆ.

Last Updated : Jul 2, 2021, 8:37 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.