ETV Bharat / state

ಫೇಸ್​​ಬುಕ್​​ನಲ್ಲಿ ಪ್ರವಾದಿ ಮೊಹಮ್ಮದರ ನಿಂದನೆ: 'ಮಧುಗಿರಿ ಮೋದಿ' ವಿರುದ್ಧ ದೂರು - ಮಧುಗಿರಿ ಮೋದಿ ಯಾನೆ ಅತುಲ್ ಕುಮಾರ್

ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮೊಹಮ್ಮದರನ್ನು ನಿಂದಿಸಿ ವಿಡಿಯೋ ವೈರಲ್ ಮಾಡಿರುವ 'ಮಧುಗಿರಿ ಮೋದಿ' ಎನ್ನುವ ಖಾತೆಯ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಮುಸ್ಲಿಂ ಜಸ್ಟೀಸ್ ಫೋರಮ್ ದ.ಕ. ಸಮಿತಿಯು ದೂರು ಸಲ್ಲಿಸಿದೆ.

Muslim Justice Forum Complaint of the Committee
ಮುಸ್ಲಿಂ ಜಸ್ಟೀಸ್ ಫೋರಮ್ ದ.ಕ. ಸಮಿತಿಯ ದೂರು
author img

By

Published : Feb 18, 2020, 7:42 AM IST

ಮಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಪ್ರವಾದಿ ಮೊಹಮ್ಮದರನ್ನು ನಿಂದಿಸಿ ವಿಡಿಯೋ ವೈರಲ್ ಮಾಡಿರುವ 'ಮಧುಗಿರಿ ಮೋದಿ' ಎನ್ನುವ ಖಾತೆಯ ವಿರುದ್ಧ ಪಾಂಡೇಶ್ವರ ಠಾಣೆಯಲ್ಲಿ ಮುಸ್ಲಿಂ ಜಸ್ಟೀಸ್ ಫೋರಮ್ ದ.ಕ. ಸಮಿತಿಯು ದೂರು ಸಲ್ಲಿಸಿದೆ.

Muslim Justice Forum Complaint of the Committee
ಮುಸ್ಲಿಂ ಜಸ್ಟೀಸ್ ಫೋರಮ್ ದ.ಕ. ಸಮಿತಿಯ ದೂರು

ಯಾನೆ ಅತುಲ್ ಕುಮಾರ್ ಎಂಬಾತ ಮಧುಗಿರಿ ಮೋದಿ ಎನ್ನುವ ಖಾತೆಯ ಮಾಲೀಕನಾಗಿದ್ದು, ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ಕೀಳುಮಟ್ಟದ ಶಬ್ದ ಪ್ರಯೋಗಿಸಿ, ಅವಾಚ್ಯವಾಗಿ ನಿಂದಿಸಿದ್ದಾನೆ. ಈ ಮೂಲಕ ಕೋಮುದ್ವೇಷ ಹರಡಲು ಯತ್ನಿಸಿದ್ದಾನೆ ಎಂದು ಸಮಿತಿಯು ದೂರಿನಲ್ಲಿ ತಿಳಿಸಿದೆ.

ಈತ ದೇಶದ ಸಂವಿಧಾನ, ಕಾನೂನು ಮತ್ತು ಸಾಮರಸ್ಯ ಕೆಡಿಸುವಂತಹ ಉದ್ದೇಶ ಹೊಂದಿದ್ದು, ಸಮಾಜಕ್ಕೆ ಕಂಕಟವಾಗಿ ಪರಿಣಮಿಸಿದ್ದಾನೆ. ಈತನ ವಿರುದ್ಧ ಕಠಿಣ ಕ್ರಮ ಕೈಗೊಂಡು ಕೂಡಲೇ ಬಂಧಿಸಬೇಕು ಎಂದು ಮುಸ್ಲಿಂ ಜಸ್ಟೀಸ್ ಫೋರಮ್ ದ.ಕ. ಸಮಿತಿಯ ಅಧ್ಯಕ್ಷ ಡಾ.ಕೆ.ಎಸ್.ಅಮೀರ್ ಅಹ್ಮದ್ ತುಂಬೆ ದೂರು ನೀಡಿದ್ದಾರೆ.

ನಿಯೋಗದಲ್ಲಿ ಮುಸ್ಲಿಂ ಜಸ್ಟೀಸ್ ಫೋರಮ್‌ನ ಸಂಸ್ಥಾಪಕ ರಫೀವುದ್ದೀನ್ ಕುದ್ರೋಳಿ, ಸಂಘಟನಾ ಕಾರ್ಯದರ್ಶಿ ವಹಾಬ್ ಕುದ್ರೋಳಿ, ಕಾರ್ಯಕಾರಿಣಿ ಸಮಿತಿ ಸದಸ್ಯರಾದ ಇದ್ದೀನ್ ಕುಂಞಿ, ಇಕ್ಬಾಲ್ ಸಾಮಣಿಗೆ, ಯುಸುಫ್ ಉಚ್ಚಿಲ್, ಇಮ್ರಾನ್ ಕುದ್ರೋಳಿ ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.