ETV Bharat / state

ಕೋವಿಡ್​​​​ನಂತೆ ಸರ್ಕಾರವೂ ಸ್ವಭಾವವನ್ನು ಬದಲಿಸುತ್ತಿದೆ: ಖಾದರ್ ಲೇವಡಿ - mangalore corona case

ರಾಜ್ಯ ಸರ್ಕಾರ ಇವತ್ತು ಒಂದು ಆದೇಶ ಮಾಡಿ ನಾಳೆ ಮತ್ತೊಂದು ಆದೇಶ ಮಾಡುತ್ತದೆ. ಅದಕ್ಕೆ ಜನರು ಹೊಂದಿಕೊಳ್ಳುತ್ತಾರೆ ಅಂದುಕೊಂಡಾಗ ನಾಡಿದ್ದು ಮತ್ತೊಂದು ಆದೇಶ ಮಾಡುತ್ತದೆ. 2ನೇ ಹಂತದ ಕೊರೊನಾ ಬರಲಿದೆ ಎಂದು ಆರಂಭದಿಂದಲೂ ಹೇಳುತ್ತಾ ಬರಲಾಗಿದೆ. ಅದಕ್ಕಾಗಿ ಸರ್ಕಾರ ಏನು ತಯಾರಿ ಮಾಡಿಕೊಂಡಿದೆ. ಈ ಬಗ್ಗೆ ತಾಂತ್ರಿಕ ಸಮಿತಿಯ ಸಲಹೆ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

Former Minister UT Khader
ಮಾಜಿ ಸಚಿವ ಯು.ಟಿ ಖಾದರ್
author img

By

Published : Dec 30, 2020, 10:17 PM IST

ಮಂಗಳೂರು (ದ.ಕ): ಕೋವಿಡ್ ತನ್ನ ಸ್ವಭಾವವನ್ನು ಬದಲಿಸುತ್ತಿರುವಂತೆ ಸರ್ಕಾರವೂ ತನ್ನ ಸ್ವಭಾವವನ್ನು ದಿನೇ ದಿನೆ ಬದಲಿಸುತ್ತಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಲೇವಡಿ ಮಾಡಿದ್ದಾರೆ.

ಮಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಪದೇ ಪದೆ ತನ್ನ ಆದೇಶದಲ್ಲಿ ಬದಲಾವಣೆ ಮಾಡುತ್ತಿರುವುದರಿಂದ ಕೊರೊನಾವನ್ನಾದರೂ ನಿಭಾಯಿಸಬಹುದು, ಸರ್ಕಾರವನ್ನು ನಿಭಾಯಿಸಲು ಕಷ್ಟ ಎಂಬಂತಾಗಿದೆ ಎಂದರು.

ಕೋವಿಡ್​​​​ನಂತೆ ಸರ್ಕಾರವೂ ಸ್ವಭಾವವನ್ನು ಬದಲಿಸುತ್ತಿದೆ-ಖಾದರ್

ರಾಜ್ಯ ಸರ್ಕಾರ ಇವತ್ತು ಒಂದು ಆದೇಶ ಮಾಡಿ ನಾಳೆ ಮತ್ತೊಂದು ಆದೇಶ ಮಾಡುತ್ತದೆ. ಅದಕ್ಕೆ ಜನರು ಹೊಂದಿಕೊಳ್ಳುತ್ತಾರೆ ಅಂದುಕೊಂಡಾಗ ನಾಡಿದ್ದು ಮತ್ತೊಂದು ಆದೇಶ ಮಾಡುತ್ತೆ ಎಂದರು.

2ನೇ ಹಂತದ ಕೊರೊನಾ ಬರಲಿದೆ ಎಂದು ಆರಂಭದಿಂದಲೂ ಹೇಳುತ್ತಾ ಬರಲಾಗಿದೆ. ಅದಕ್ಕಾಗಿ ಸರ್ಕಾರ ಏನು ತಯಾರಿ ಮಾಡಿಕೊಂಡಿದೆ. ಈ ಬಗ್ಗೆ ತಾಂತ್ರಿಕ ಸಮಿತಿಯ ಸಲಹೆ ತೆಗೆದುಕೊಂಡಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ಲಸಿಕೆ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಯಾವ ಕಂಪನಿಯ ಲಸಿಕೆ ನೀಡಲಾಗುವುದು, ಅದರ ಕಾರ್ಯಕ್ಷಮತೆ ಏನು? ಅದರ ಬೆಲೆ ಎಷ್ಟು, ಸಾರ್ವಜನಿಕರಿಗೆ ಉಚಿತವಾಗಿ ಕೊಡಲಾಗುತ್ತದೆಯೇ? ಕೆಲವರಿಗೆ ಮಾತ್ರ ಉಚಿತವಾ? ಎಷ್ಟು ಸಮಯದಲ್ಲಿ ಲಸಿಕೆ ಬರಲಿದೆ ಎಂಬುದರ ಬಗ್ಗೆ ಸರ್ಕಾರ ಮಾಹಿತಿ ನೀಡಲಿ ಎಂದರು.

ಇದನ್ನೂ ಓದಿ: ಪಾಕ್ ಪರ ಘೋಷಣೆ ರಾಷ್ಟ್ರ ವಿರೋಧಿ ಕೃತ್ಯ: ಕ್ರಮ ಕೈಗೊಳ್ಳುವಂತೆ ಕಟೀಲ್ ಒತ್ತಾಯ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.