ETV Bharat / state

ದೇಶದ ಯಾವುದೇ ಪ್ರದೇಶವನ್ನು ಪಾಕಿಸ್ತಾನ ಎಂದರೆ ಅವರು ದೇಶದ್ರೋಹಿಗಳು: ಪ್ರಭಾಕರ್ ಭಟ್​​​ಗೆ ಖಾದರ್ ತಿರುಗೇಟು - ಕಲ್ಲಡ್ಕ ಪ್ರಭಾಕರ್ ಭಟ್

ಕಲ್ಲಡ್ಕ ಪ್ರಭಾಕರ್ ಭಟ್ ಅವರು ಯಾವ ಉದ್ದೇಶದಿಂದ ಹೇಳಿದ್ದು ಎಂಬುದು ಗೊತ್ತಿಲ್ಲ. ಆದರೆ, ಭಾರತ ದೇಶದ ಯಾವುದೇ ಪ್ರದೇಶವನ್ನು ಪಾಕಿಸ್ತಾನ ಎಂದು ಯಾರೆ ಕರೆದರೂ ಅವರು ದೇಶದ್ರೋಹಿಗಳು. ದೇಶದ ಯಾವುದೇ ಭಾಗವನ್ನು ಆ ರೀತಿ ಬಿಂಬಿಸುವುದು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂದಿದ್ದಾರೆ.

MLA UT Khadar
ಶಾಸಕ ಯುಟಿ ಖಾದರ್
author img

By

Published : Jan 30, 2021, 3:20 PM IST

ಮಂಗಳೂರು (ದ.ಕ): ದೇಶದ ಯಾವುದೇ ಪ್ರದೇಶವನ್ನು ಪಾಕಿಸ್ತಾನ ಎಂದು ಕರೆದರೆ ಅವರು ದೇಶದ್ರೋಹಿಗಳು ಎಂದು ಮಾಜಿ ಸಚಿವ ಯು.ಟಿ ಖಾದರ್ ಆರ್​​​ಎಸ್​​​​ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್​​ಗೆ ತಿರುಗೇಟು ನೀಡಿದ್ದಾರೆ.

ಉಳ್ಳಾಲ ಪಾಕಿಸ್ತಾನದಂತಿದೆ ಎಂಬ ತಮ್ಮ ಹಿಂದಿನ ಹೇಳಿಕೆಯನ್ನು ಸಮರ್ಥಿಸಿಕೊಂಡು ಉಳ್ಳಾಲದವರಿಗೆ ಮುಸ್ಲಿಮೇತರರನ್ನು ಶಾಸಕರನ್ನಾಗಿ ಮಾಡುವ ತಾಕತ್ತಿದೆಯೇ ಎಂದು ಪ್ರಶ್ನಿಸಿದ ಕಲ್ಲಡ್ಕ ಪ್ರಭಾಕರ್ ಭಟ್ ಹೇಳಿಕೆಗೆ ಖಾದರ್​​​ ತಿರುಗೇಟು ನೀಡಿದ್ದಾರೆ.

ಕಲ್ಲಡ್ಕ ಪ್ರಭಾಕರ್ ಭಟ್ ಅವರು ಯಾವ ಉದ್ದೇಶದಿಂದ ಹೇಳಿದ್ದು ಎಂಬುದು ಗೊತ್ತಿಲ್ಲ. ಆದರೆ, ಭಾರತ ದೇಶದ ಯಾವುದೇ ಪ್ರದೇಶವನ್ನು ಪಾಕಿಸ್ತಾನ ಎಂದು ಯಾರೆ ಕರೆದರೂ ಅವರು ದೇಶದ್ರೋಹಿಗಳು. ದೇಶದ ಯಾವುದೇ ಭಾಗವನ್ನು ಆ ರೀತಿ ಬಿಂಬಿಸುವುದು ಸಂವಿಧಾನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇದು ದೇಶಕ್ಕೆ ಪೂರಕ ವಿಚಾರವಲ್ಲ. ಮಾತನಾಡುವ ಮುಂಚೆ ಆಲೋಚಿಸಲಿ ಎಂದರು.

ಕಲ್ಲಡ್ಕ ಪ್ರಭಾಕರ್ ಭಟ್ ಹಿಂದಿನಿಂದಲೂ ಹೀಗೆಯೆ ಮಾತಾಡುತ್ತಿದ್ದಾರೆ. ಅವರು ಕೆಲಸ ಮಾಡಿ, ಬಡವರಿಗೆ ಸಹಾಯ ಮಾಡಿ ಅವರು ಚುನಾವಣೆ ಎದುರಿಸುವುದಿಲ್ಲ. ಅವರಿಗೆ ಇದು ಮಾತ್ರ ಚುನಾವಣೆ ಅಜೆಂಡವಾಗಿದೆ. ಅವರಿಗೆ ಅಷ್ಟು ಆಸಕ್ತಿ ಇದ್ದರೆ ಕೊರೊನಾ ಸಂದರ್ಭದಲ್ಲಿ ಯಾಕೆ ಹೊರಬಂದಿಲ್ಲ. ಎಲ್ಲ ಸಮುದಾಯದವರು ಕೊರೊನಾ ಸಂದರ್ಭದಲ್ಲಿ ಸಂಕಷ್ಟದಲ್ಲಿದ್ದರು. ಪ್ರತಿ ಆಸ್ಪತ್ರೆಯಲ್ಲಿ ಸಂಕಷ್ಟಪಡುತ್ತಿದ್ದಾಗ ಇವರು ಯಾವ ಆಸ್ಪತ್ರೆಗೆ ಹೋಗಿದ್ದಾರೆ ಎಂದು ಪ್ರಶ್ನಿಸಿದರು.

ಕೊರೊನಾದಿಂದ ಬಲಿಯಾದವರ ಎಲ್ಲಾ ಧರ್ಮದವರ ಅಂತ್ಯಸಂಸ್ಕಾರ ಗೌರವಯುತವಾಗಿ ನಡೆಯದೆ ಇದ್ದ ಸಂದರ್ಭ ತಮ್ಮ ಧರ್ಮದವರಿಗೆ ಗೌರವಯುತ ಅಂತ್ಯಸಂಸ್ಕಾರ ಆಗಬೇಕೆಂದು ಅವರು ಧ್ವನಿಯೆತ್ತಲಿಲ್ಲ. ನಾನು ಎಲ್ಲರಿಗೂ ಜಾತಿಧರ್ಮ ನೋಡದೆ ಸಹಾಯ ಮಾಡಿದ್ದೇವೆ. ಇವರು ಯಾರಿಗೆ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: ಉಳ್ಳಾಲದವ್ರಿಗೆ ಮುಸಲ್ಮಾನೇತರನನ್ನು ಶಾಸಕನಾಗಿ ಮಾಡುವ ತಾಕತ್ತಿದೆಯೇ?: ಕಲ್ಲಡ್ಕ‌ ಪ್ರಭಾಕರ್ ಭಟ್‌

ETV Bharat Logo

Copyright © 2025 Ushodaya Enterprises Pvt. Ltd., All Rights Reserved.