ಮಂಗಳೂರು: ಮಂಗಳೂರು ದಸರಾ ಹಿನ್ನೆಲೆಯಲ್ಲಿ ಕುದ್ರೋಳಿ ಗೋಕರ್ಣನಾಥ ದೇವಸ್ಥಾನದ ಬಳಿ ಇರುವ ಸ್ಟಾಲ್ನಲ್ಲಿ ಶುಚಿತ್ವವಿಲ್ಲದೆ ಮಟ್ಕಾ ಸೋಡಾ ಮಾರಾಟ ಮಾಡಲಾಗುತ್ತಿದೆ ಎಂಬ ವಿಡಿಯೋ ವೈರಲ್ ಆದ ಬೆನ್ನಲ್ಲೇ ಮ.ನ.ಪಾ ಆರೋಗ್ಯಾಧಿಕಾರಿಗಳು ದಾಳಿ ನಡೆಸಿ, ಮಟ್ಕಾ ಸ್ಟಾಲ್ ಸೀಜ್ ಮಾಡಿದ್ದಾರೆ.
ಮಂಗಳೂರು ದಸರಾ ಹಿನ್ನೆಲೆಯಲ್ಲಿ ಸ್ಟಾಲ್ನಲ್ಲಿ ಮಟ್ಕಾ ಸೋಡಾ ಮಾರಾಟ ಮಾಡಲಾಗುತ್ತಿತ್ತು. ಸ್ಟಾಲ್ನಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದೆ ಮಾರಾಟ ನಡೆಯುತ್ತಿತ್ತು. ಇದನ್ನು ಒಬ್ಬರು ವಿಡಿಯೋ ಮಾಡಿ ಸಾಮಾಜಿಕ ತಾಣಗಳಲ್ಲಿ ವೈರಲ್ ಮಾಡಿದ್ದರು. ಅದರಲ್ಲಿ ಕೊಳಕು ನೀರಿನಲ್ಲಿ ಮಟ್ಕಾ ಪಾಟ್ಗಳನ್ನು ತೊಳೆಯುವುದು, ಸ್ಟಾಲ್ ಸಿಬ್ಬಂದಿ ತಂಬಾಕು ಜಗಿದು ಉಗುಳಿದ ಬಳಿಕ ಅದೇ ನೀರಿನಲ್ಲಿ ಪಾಟ್ ತೊಳೆಯುವುದು ಹೀಗೆ ಶುಚಿತ್ವವೇ ಇಲ್ಲದ ರೀತಿಯ ದೃಶ್ಯಗಳು ವೈರಲ್ ಆದ ವಿಡಿಯೋದಲ್ಲಿ ಸೆರೆಯಾಗಿತ್ತು.
ಈ ಬೆನ್ನಲ್ಲೇ ಮಹಾನಗರ ಪಾಲಿಕೆ ಆರೋಗ್ಯಾಧಿಕಾರಿಗಳು ದಾಳಿ ಮಾಡಿ, ಮಟ್ಕಾ ಸೋಡಾ ಶಾಪ್ ಜಪ್ತಿ ಮಾಡಿದ್ದಾರೆ. ಮಟ್ಕಾ ಸೋಡಾ ಪಾಟ್ಗಳ ಸಹಿತ ಸೊತ್ತುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಆ ಬಳಿಕ ಕುದ್ರೋಳಿ ದೇವಸ್ಥಾನದ ದಸರಾ ಸಂತೆಯ ವಿವಿಧ ಉಳಿದ ಸ್ಟಾಲ್ಗಳಲ್ಲೂ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಶುಚಿತ್ವ ಕಾಪಾಡದಿದ್ದಲ್ಲಿ ಮಳಿಗೆ ಸೀಜ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ಕೃಷಿ ಉಪನಿರ್ದೇಶಕಿ: ಕೃಷಿ ಇಲಾಖೆಯ ಸಸಿ ನೆಡುವ ಕಾರ್ಯಕ್ರಮಕ್ಕೆ 50 ಲಕ್ಷ ರೂ. ಗಿಡಗಳನ್ನು ನೆಟ್ಟಿರುವ ಬಿಲ್ ಪಾವತಿ ಮಾಡಲು 1 ಲಕ್ಷ ರೂ ಲಂಚ ಸ್ವೀಕರಿಸುತ್ತಿದ್ದ ವೇಳೆ ಅಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಮಂಗಳೂರು ಉಪ ಕೃಷಿ ನಿರ್ದೇಶಕಿ ಭಾರತಮ್ಮ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದ ಅಧಿಕಾರಿ ಎಂದು ಲೋಕಾಯುಕ್ತ ಮೂಲಗಳು ಮಾಹಿತಿ ನೀಡಿವೆ. ನಿವೃತ್ತಿ ಅರಣ್ಯ ಅಧಿಕಾರಿ ದೂರಿನ ಮೇರೆಗೆ ಲೋಕಾಯುಕ್ತರು ದಾಳಿ ಮಾಡಿದ್ದರು.
ಸಾರ್ವಜನಿಕರಿಗೆ ₹50 ಲಕ್ಷ ಮೌಲ್ಯದ ಗಿಡ ವಿತರಣೆ: ಕರ್ನಾಟಕ ಅರಣ್ಯ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿ ಆಗಿದ್ದ ಪರಮೇಶ್.ಎನ್.ಪಿ ಅವರು ಕರ್ನಾಟಕ ಜಲಾನಯನ ಅಭಿವೃದ್ಧಿ ಇಲಾಖೆ, ಕೃಷಿ ಇಲಾಖೆಯಲ್ಲಿ ವಲಯ ಅರಣ್ಯ ಅಧಿಕಾರಿಯಾಗಿ ಆಗಸ್ಟ್ 31 ರಂದು ನಿವೃತ್ತಿಯಾಗಿದ್ದರು. ಅವರು ಕರ್ತವ್ಯದಲ್ಲಿದ್ದಾಗ 2022-23 ಮತ್ತು 2023-24ನೇ ಸಾಲಿನಲ್ಲಿ ಕೃಷಿ ಇಲಾಖೆಯ ಅಧೀನದಲ್ಲಿ ಬರುವ ಜಲಾನಯನ ಅಭಿವೃದ್ಧಿ ವಿಭಾಗದ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ WDC.2 0 ಯೋಜನೆಯಡಿ 50 ಲಕ್ಷ ಮೌಲ್ಯದ ಗಿಡಗಳನ್ನು ನೆಡಲಾಗಿತ್ತು.
ಬಂಟ್ವಾಳ ತಾಲೂಕು ಸಜೀಪ ಮುನ್ನೂರು, ಸಜೀಪ ಮೂಡ, ಸಜೀಪಪಡು, ಸಜೀಪನಡು, ಕುರ್ನಾಡು, ನರಿಂಗಾನ, ಬಾಳೆಪುಣಿ ಮತ್ತು ಮಂಜನಾಡಿ ಗ್ರಾಮದ ಜನರಿಗೆ ಸರ್ಕಾರದಿಂದ 50 ಲಕ್ಷ ಮೌಲ್ಯದ ವಿವಿಧ ಜಾತಿಯ ಅರಣ್ಯ ಮತ್ತು ತೋಟಗಾರಿಕಾ ಸಸಿಗಳನ್ನು ಉಚಿತವಾಗಿ ನೀಡಲಾಗಿತ್ತು . ಈ ತೋಟಗಾರಿಕಾ ಸಸಿಗಳನ್ನು ಕಣ್ಣನ್ ನರ್ಸರಿಯಿಂದ ಸಸಿಗಳನ್ನು ಪಡೆದು ಸಾರ್ವಜನಿಕರಿಗೆ ಪೂರೈಕೆ ಮಾಡಲಾಗಿತ್ತು.
ಇದನ್ನೂ ಓದಿ: ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ಕೃಷಿ ಉಪನಿರ್ದೇಶಕಿ.. ನಿವೃತ್ತ ಅಧಿಕಾರಿ ದೂರಿನ ಮೇರೆಗೆ ದಾಳಿ..