ಕಡಬ: ಸ್ನಾನಕ್ಕೆಂದು ನದಿಗೆ ಇಳಿದಿದ್ದ ಯುವಕರಿಬ್ಬರು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೋಮವಾರ ಸಂಜೆ ತಾಲೂಕಿನ ಇಚಿಲಂಪಾಡಿಯ ಗುಂಡ್ಯ ಹೊಳೆಯಲ್ಲಿ ನಡೆದಿದೆ.
ಮೃತ ಯುವಕರನ್ನು ನೆಲ್ಯಾಡಿ ಶಾಂತಿಬೆಟ್ಟು ನಿವಾಸಿ ಉಮ್ಮರ್ ಎಂಬವರ ಪುತ್ರ ಝಾಕಿರ್(20) ಹಾಗೂ ಉಪ್ಪಿನಂಗಡಿ ಸಮೀಪದ ಸರಳಿಕಟ್ಟೆ ನಿವಾಸಿಯಾದ (ಉಮ್ಮರ್ ಸಹೋದರಿಯ ಪುತ್ರ) ಸಿನಾನ್ ಎಂದು ಗುರುತಿಸಲಾಗಿದೆ.
ಮೃತ ಯುವಕರು ಸ್ನಾನಕ್ಕೆಂದು ಇಚಿಲಂಪಾಡಿ ಸೇತುವೆ ಸಮೀಪ ನದಿಗೆ ಇಳಿದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ವಿಷಯ ತಿಳಿದ ಸ್ಥಳೀಯರು ನೀರಿಗಿಳಿದು ಇಬ್ಬರ ಮೃತದೇಹವನ್ನು ಮೇಲಕ್ಕೆ ಎತ್ತಿದ್ದಾರೆ. ಸ್ಥಳಕ್ಕೆ ಕಡಬ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಓದಿ: ಹೊಸ ಮಾರ್ಗಸೂಚಿ ಹೊರಡಿಸಿಲ್ಲ, ಸಾಮಾಜಿಕ ಜಾಲತಾಣದಲ್ಲಿ ಬಂದಿರುವುದು ತಪ್ಪು ಮಾಹಿತಿ: ಸಿಎಂ ಕಚೇರಿ ಸ್ಪಷ್ಟನೆ!