ETV Bharat / state

ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ ತುಳುವಿನ ಡ್ಯಾನ್ಸ್ ಡ್ಯಾನ್ಸ್: ಅಮೆರಿಕಾದ ರೇಡಿಯೋದಲ್ಲೂ ಪ್ರಸಾರ

ಮಂಗಳೂರಿನ ತಂಡವೊಂದು "ಡ್ಯಾನ್ಸ್ ಡ್ಯಾನ್ಸ್" ಹಾಡು ನಿರ್ಮಿಸಿದೆ. ವೃತ್ತಿಪರವಾಗಿ ತಯಾರಿಸಿದ ಆಕರ್ಷಕ ನೃತ್ಯ ಸಂಯೋಜನೆ ಹೊಂದಿರುವ ಈ ಹಾಡು ಇತ್ತೀಚೆಗೆ N&N (ಡಾ.ನಿತಿನ್ ಎಸ್ & ನಿಶಾನ್ ಎಸ್) ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರಿ ವೀಕ್ಷಣೆ ಪಡೆದಿದೆ.

Dance Dance
ಡ್ಯಾನ್ಸ್ ಡ್ಯಾನ್ಸ್
author img

By

Published : Oct 25, 2021, 11:33 AM IST

ಮಂಗಳೂರು: ಮಂಗಳೂರು ಮೂಲದ ಕಲಾವಿದರ ತಂಡ ನಿರ್ಮಿಸಿರುವ ಪಾರ್ಟಿ ಸಾಂಗ್ ‘ಡ್ಯಾನ್ಸ್ ಡ್ಯಾನ್ಸ್’ ವಿಶ್ವದೆಲ್ಲೆಡೆ ಭಾರಿ ಸದ್ದು ಮಾಡುತ್ತಿದೆ. ಎರಡು ವಾರಗಳ ಹಿಂದಷ್ಟೇ ಬಿಡುಗಡೆಯಾಗಿರುವ ಈ ತುಳು ಪಾರ್ಟಿ ಸಾಂಗ್​ ಅನ್ನು ಯೂಟ್ಯೂಬ್​​ನಲ್ಲಿ ಒಂದೂವರೆ ಲಕ್ಷ ಜನರು ವೀಕ್ಷಿಸಿದ್ದಾರೆ.

ವಿಶ್ವದೆಲ್ಲೆಡೆ ಸದ್ದು ಮಾಡುತ್ತಿದೆ ತುಳುವಿನ ಡ್ಯಾನ್ಸ್ ಡ್ಯಾನ್ಸ್.

ಮಂಗಳೂರಿನ ತಂಡವೊಂದು "ಡ್ಯಾನ್ಸ್ ಡ್ಯಾನ್ಸ್" ಹಾಡನ್ನು ನಿರ್ಮಿಸಿದೆ. ವೃತ್ತಿಪರವಾಗಿ ತಯಾರಿಸಿದ ಆಕರ್ಷಕ ನೃತ್ಯ ಸಂಯೋಜನೆ ಹೊಂದಿರುವ ಈ ಹಾಡು ಇತ್ತೀಚೆಗೆ N&N (ಡಾ.ನಿತಿನ್ ಎಸ್ & ನಿಶಾನ್ ಎಸ್) ಕ್ರಿಯೇಷನ್ಸ್ ಯೂಟ್ಯೂಬ್ ಚಾನೆಲ್‌ನಲ್ಲಿ ಭಾರಿ ವೀಕ್ಷಣೆ ಪಡೆದಿದೆ.

  • " class="align-text-top noRightClick twitterSection" data="">

ಅಮೆರಿಕದ ಬಿಎಂಎಸ್ ರೇಡಿಯೋ ನೆಟ್ವರ್ಕ್ ಚಿಕಾಗೋದಲ್ಲಿ ಪ್ರಸಾರ ಆಗುತ್ತಿರುವ ಮೊದಲ ತುಳು ಹಾಡು ಇದಾಗಿದೆ. ಈ ಹಾಡು ವಿಶ್ವಾದ್ಯಂತ 25 ಕ್ಕಿಂತ ಹೆಚ್ಚು ರೇಡಿಯೋ ಸ್ಟೇಷನ್​ಗಳಲ್ಲಿ ಪ್ರಸಾರವಾಗುತ್ತಿರುವ ಮೊದಲ ತುಳು ಹಾಡು ಆಗಿದೆ. ಭಾರತದ ಶಾರ್ಟ್ ವಿಡಿಯೋ ಆಪ್ "ಚಿಂಗಾರಿ" ಯಲ್ಲಿಯೂ ಈ ಹಾಡು ಮಿಂಚುತ್ತಿದೆ. ರೆಡ್ ಎಪಿಕ್ ಕ್ಯಾಮೆರಾದಲ್ಲಿ ಚಿತ್ರೀಕರಣಗೊಂಡ ಮೊದಲ ತುಳು ಆಲ್ಬಂ ಹಾಡಾಗಿದ್ದು ಪ್ರಪಂಚದಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಮೋಹನ್​ ರಾಜ್​ ಮತ್ತು ನಿರ್ದೇಶಕರಾದ ನಿತಿನ್​ ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಎಸ್.ನಿಶಾನ್​ ಹಾಗೂ ತಮಿಳಿನ ಗಾಯಕಿ ಲವಿತಾ ಲೋಬೋ ಗಾಯನಕ್ಕೆ ಪ್ಯಾಟ್ಸನ್ ಪೆರೇರಾ ಸಂಗೀತ ನಿರ್ದೇಶಿಸಿದ್ದಾರೆ. ವಿಜೇತ್​.ಆರ್.ನಾಯಕ್​​ ಹಾಡಿನ ನೃತ್ಯ ಸಂಯೋಜನೆ ಮಾಡಿದ್ದು, ನಟ ಸಿದ್ಧಾರ್ಥ್ ಶೆಟ್ಟಿ, ನಟಿಯಾಗಿ ವಿಜೇತಾ ಪೂಜಾರಿ ನಟಿಸಿದ್ದಾರೆ. ವಿನೀತ್​, ವಿಕಾಸ್ ಪುತ್ರನ್ ಕೂಡ ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ: ಕನಕಗಿರಿಯ ಚಿದಾನಂದವಧೂತರ ಸಮಾಧಿ ಸ್ಥಳಕ್ಕೆ ಬಾಬಾ ರಾಮದೇವ್ ಭೇಟಿ

InstaMusic, Spotify, Gaana, Jio, savan, wynk ಮುಂತಾದ ಎಲ್ಲ ಪ್ರಮುಖ ಆ್ಯಪ್​​ಗಳಲ್ಲಿ ಹಾಡು ಲಭ್ಯವಾಗುತ್ತದೆ. ಇನ್ನು"ಡ್ಯಾನ್ಸ್ ಡ್ಯಾನ್ಸ್" ತಂಡವು ಈ ಹಾಡನ್ನು ಡ್ಯಾನ್ಸ್ ಮಲ್ಪುಗ ಎಂಬ ಹೆಸರನ್ನು ಉಳಿಸಿಕೊಂಡು ಕನ್ನಡ ಮತ್ತು ಹಿಂದಿಯಲ್ಲೂ ಹಾಡನ್ನು ಸಿದ್ಧಪಡಿಸಲು ಮುಂದಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.