ಮಂಗಳೂರು (ದಕ್ಷಿಣ ಕನ್ನಡ): ಮಂಗಳೂರಿನ ಪುರಾಣ ಪ್ರಸಿದ್ದ ಕದ್ರಿ ದೇವಾಲಯದ ಬಳಿ ಶಂಕಾಸ್ಪದವಾಗಿ ತಿರುಗಾಟ ನಡೆಸುತ್ತಿದ್ದ ಮೂವರನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಶ್ರೀ ಮಂಜುನಾಥ ದೇವಾಲಯದ ಆವರಣಕ್ಕೆ ಬೈಕ್ನಲ್ಲಿ ಅಪರಿಚಿತರು ಪ್ರವೇಶಿಸಿದ್ದರು. ಬಳಿಕ ದೇವಸ್ಥಾನದ ಬಳಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದರು. ಹೀಗೆ ಬಂದವರನ್ನು ಹಿಡಿದು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಸೈಗೋಳಿ ನಿವಾಸಿ ಹಸನ್ ಶಾಹಿನ್, ಜಾಫರ್, ಫಾರೂಕ್ ಎಂಬವರು ದೇವಸ್ಥಾನದ ಬಳಿ ತಿರುಗಾಡುತ್ತಿದ್ದರು. ಮಾಹಿತಿ ಪಡೆದ ಬಳಿಕ ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಆಗಮಿಸಿ ಮೂವರನ್ನು ವಶಕ್ಕೆ ಪಡೆದು ಕದ್ರಿ ಠಾಣೆಯಲ್ಲಿ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.
ಈಟಿವಿ ಭಾರತ ಜೊತೆಗೆ ಮಾತನಾಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಕುಲದೀಪ್ ಕುಮಾರ್ ಜೈನ್, "ಘಟನೆಯಲ್ಲಿ ಮೂವರನ್ನು ವಿಚಾರಣೆ ನಡೆಸಲಾಗುತ್ತಿದೆ. ಗೂಗಲ್ ಮ್ಯಾಪ್ ಹಾಕಿ ದಾರಿ ತಪ್ಪಿ ಬಂದಿರುವುದಾಗಿ ಯುವಕರು ತಿಳಿಸಿದ್ದಾರೆ. ವಿಚಾರಣೆ ಮುಂದುವರಿಸಲಾಗಿದೆ" ಎಂದು ಹೇಳಿದರು.
ಇದನ್ನೂ ಓದಿ: ಚಿನ್ನ, ನಗದು ಅಲ್ಲ .. 2 ಲಕ್ಷ ಮೌಲ್ಯದ 40 ಕೆಜಿ ಕೂದಲು ಕಳ್ಳತನ: ಆರೋಪಿಗಳ ಬಂಧನ