ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಕಾಣಿಸಿಕೊಂಡ ‘ತೌಕ್ತೆ’ ಚಂಡಮಾರುತದ ಪರಿಣಾಮದಿಂದ ಕರಾವಳಿಯಲ್ಲಿ ಬಿರುಸಿನ ಮಳೆ ಸುರಿಯುತ್ತಿದೆ. ಇದರಿಂದಾಗಿ ಕಡಲ ತೀರದಲ್ಲಿ ಭಾರಿ ಹಾನಿ ಸಂಭವಿಸಿದೆ.
ನಗರದ ಸೋಮೇಶ್ವರ ಕಡಲ ತೀರದ ಅಲೆಗೆ ಸ್ಮಶಾನ ಸಮುದ್ರಪಾಲಾಗಿದೆ. ಕಡಲಬ್ಬರಕ್ಕೆ ಸ್ಮಶಾನದ ಗೋಡೆ ಕುಸಿದು ಬಿದ್ದಿರುವ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ.
ಇದನ್ನೂ ಓದಿ:ತೌಕ್ತೆ ಸೈಕ್ಲೋನ್: ಅಗತ್ಯವಿರುವವರಿಗೆ ಸಹಾಯ ಮಾಡಲು ಪಕ್ಷದ ಕಾರ್ಯಕರ್ತರಿಗೆ ರಾಗಾ ಮನವಿ
ಸುರತ್ಕಲ್ ಹಳೆಯಂಗಡಿಯ ಸಸಿಹಿತ್ಲುವಿನಲ್ಲಿಯೂ ಕಡಲ ಅಬ್ಬರ ಜೋರಾಗಿದ್ದು ರಸ್ತೆ ತುಂಬೆಲ್ಲಾ ನೀರು ಹರಿಯುತ್ತಿದೆ. ಹಲವೆಡೆ ಕಡಲ್ಕೊರೆತ ಕಾಣಿಸಿಕೊಂಡಿದ್ದು ಜನರಲ್ಲಿ ಭೀತಿ ಸೃಷ್ಟಿಸಿದೆ.