ಮಂಗಳೂರು: ನಗರದ ಮಿನಿ ವಿಧಾನಸೌಧದ ಬಳಿ ಇದ್ದ ಅಪರಿಚಿತ ಮೃತದೇಹವನ್ನು ವೈದ್ಯಕೀಯ ಸಿಬ್ಬಂದಿಗೆ ಕಾಯದೆ ಆಸ್ಪತ್ರೆಗೆ ಸಾಗಿಸಿದ ಟ್ರಾಫಿಕ್ ಪೊಲೀಸ್ಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಅವರು ಅಭಿನಂದಿಸಿದ್ದಾರೆ.
ನಗರದ ಸಂಚಾರ ಪಶ್ಚಿಮ ಪೊಲೀಸ್ ಠಾಣೆಯ ಸಿಎಚ್ ಸಿ ಸಂಪತ್ ಬಂಗೇರ ಅವರು ಈ ಶ್ಲಾಘನೀಯ ಕೆಲಸ ಮಾಡಿದ್ದಾರೆ. ಸಂಪತ್ ಅವರು ನವೆಂಬರ್ 9 ರಂದು ನಗರದ ಪುರಭವನ ಸಮೀಪದ ಮಿನಿ ವಿಧಾನಸೌಧ ಬಳಿ ಕರ್ತವ್ಯದಲ್ಲಿದ್ದಾಗ ಅಪರಿಚಿತ ಮೃತದೇಹ ಕಂಡುಬಂದಿದೆ.
![Letter of Appreciation from Commissioner](https://etvbharatimages.akamaized.net/etvbharat/prod-images/16889821_bin.jpg)
ಇವರು ಯಾವುದೇ ರೀತಿಯಲ್ಲೂ ವೈದ್ಯಕೀಯ ಸಿಬ್ಬಂದಿಗೆ ಕಾಯದೆ ಸಹೋದ್ಯೋಗಿಗಳ ನೆರವಿನೊಂದಿಗೆ ತಾವೇ ಮುಂದೆ ನಿಂತು ಮೃತದೇಹವನ್ನು ಸರ್ಕಾರಿ ವೆನ್ಲಾಕ್ ಆಸ್ಪತ್ರೆಗೆ ಸಾಗಿಸಿದ್ದಾರೆ. ಕರ್ತವ್ಯದ ವೇಳೆ ಮಾನವೀಯ ಕೆಲಸ ಮಾಡಿದ ಸಂಪತ್ ಬಂಗೇರ ಅವರಿಗೆ ಮಂಗಳೂರು ನಗರ ಪೊಲೀಸ್ ಕಮಿಷನರ್ ಶಶಿಕುಮಾರ್ ಪ್ರಶಂಸನಾ ಪತ್ರ ನೀಡಿ ಅಭಿನಂದಿಸಿದ್ದಾರೆ.
ಇದನ್ನೂ ಓದಿ: ಉಳ್ಳಾಲ: ಉಚ್ಚಿಲ ಸಮುದ್ರದ ಬಂಡೆಗಳ ನಡುವೆ ಅಪರಿಚಿತ ಶವ ಪತ್ತೆ