ETV Bharat / state

ವಿವಾಹವಾದ ಮೂರೇ ದಿನಕ್ಕೆ ಚಿನ್ನಾಭರಣದೊಂದಿಗೆ ಪ್ರಿಯಕರನ ಬೈಕ್​ ಹತ್ತಿ ವಧು ಪರಾರಿ! - Dakshina kannada news

ವಿವಾಹವಾದ ಮೂರೇ ದಿನದಲ್ಲಿ ಯುವತಿ ಪ್ರಿಯಕರನೊಂದಿಗೆ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ. ಪ್ರಿಯಕರ ಮನೆಯ ಗೇಟಿನ ಬಳಿಗೆ ಬೈಕ್​​ನಲ್ಲಿ ಬಂದಿದ್ದು, ಆತನೊಂದಿಗೆ ಪರಾರಿಯಾಗಿದ್ದಾಳೆ. ಘಟನೆ ಸಂಬಂಧ ಮೂಲ್ಕಿ ಠಾಣೆಯಲ್ಲಿ ಯುವತಿಯ ತಂದೆ ನಾಪತ್ತೆ ದೂರು ದಾಖಲಿಸಿದ್ದಾರೆ.

the-bride-escapes-with-her-lover-for-the-same-day-of-marriage
ವಿವಾಹವಾದ ಒಂದೇ ದಿನಕ್ಕೆ ಪ್ರಿಯಕರನ ಜೊತೆ ಚಿನ್ನಾಭರಣದೊಂದಿಗೆ ವಧು ಪರಾರಿ
author img

By

Published : Jan 4, 2021, 10:54 PM IST

ಮಂಗಳೂರು (ದ.ಕ): ಮದುವೆಯಾದ ಮೂರೇ ದಿನದಲ್ಲಿ ಯುವತಿಯೊಬ್ಬಳು ಪರಾರಿಯಾದ ಘಟನೆ ಮೂಲ್ಕಿಯಲ್ಲಿ ನಡೆದಿದೆ. ಯುವತಿ ಮೂಲ್ಕಿ ಒಡೆಯರಬೆಟ್ಟು ಯುವಕನನ್ನು ಪ್ರೀತಿಸುತ್ತಿದ್ದು ಮನೆಯವರಿಗೂ ತಿಳಿದಿತ್ತು. ಆದರೆ ಅದನ್ನು ‌ಮುಚ್ಚಿಟ್ಟು ಶಿಕ್ಷಕನಾಗಿದ್ದ ವರನೊಂದಿಗೆ ಡಿಸೆಂಬರ್ 28ರಂದು ವಿವಾಹ ಮಾಡಿಕೊಡಲಾಗಿತ್ತು.

ವಧುವಿನ ಕುಟುಂಬದ ಸಂಪ್ರದಾಯದಂತೆ ಮದುವೆಯ ಮೂರು ದಿನದ ಬಳಿಕ ವರನ ಮನೆಗೆ ವಧು ಹೋಗಬೇಕಿತ್ತು. ಅದರಂತೆ ವಿವಾಹಿತ ಯುವತಿಯನ್ನು ಜನವರಿ 2ರಂದು ವರನ ಮನೆ ಸೇರಿಬೇಕಿತ್ತು. ಆದರೆ ಅದರ ಮೊದಲ ದಿನವೇ ಯುವತಿ ಪ್ರಿಯಕರನೊಂದಿಗೆ ಚಿನ್ನಾಭರಣದೊಂದಿಗೆ ಪರಾರಿಯಾಗಿದ್ದಾಳೆ. ಪ್ರಿಯಕರ ಮನೆಯ ಗೇಟಿನ ಬಳಿಗೆ ಬೈಕ್​​ನಲ್ಲಿ ಬಂದಿದ್ದು, ಆತನೊಂದಿಗೆ ಪರಾರಿಯಾಗಿದ್ದಾಳೆ.

ಘಟನೆಯಿಂದ ಮನನೊಂದ ವರನ ತಂದೆ ಅಸ್ವಸ್ಥರಾಗಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಯುವತಿ ನಾಪತ್ತೆಯಾದ ಬಗ್ಗೆ ಆಕೆಯ ತಂದೆ ಮೂಲ್ಕಿ ಠಾಣೆಯಲ್ಲಿ ನಾಪತ್ತೆ ದೂರು ನೀಡಿದ್ದಾರೆ.

ಇದನ್ನೂ ಓದಿ: ಕಲ್ಯಾಣ ಮಂಟಪಕ್ಕೆ ಪೊಲೀಸರ ಎಂಟ್ರಿ: ಮದುವೆಗೆ ಬಂದಿದ್ದ ಯುವತಿಯೇ ಆದಳು ಮದುಮಗಳು!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.