ETV Bharat / state

ಬೆಳ್ತಂಗಡಿ: ಭಾರೀ ಮಳೆಗೆ ಕೊಚ್ಚಿಹೋದ ತಾತ್ಕಾಲಿಕ ಸೇತುವೆ

ತೌಕ್ತೆ ಚಂಡಮಾರುತದ ಪರಿಣಾಮ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದ್ದು, ಬೆಳ್ತಂಗಡಿ ಬಳಿ ಹಳ್ಳಕ್ಕೆ ನಿರ್ಮಿಸಿದ್ದ ಸೇತುವೆ ಕೊಚ್ಚಿ ಹೋಗಿದೆ.

Bridge washed out
ಕೊಚ್ಚಿ ಹೋದ ಮಣ್ಣಿನ ಸೇತುವೆ
author img

By

Published : May 17, 2021, 7:48 AM IST

ಬೆಳ್ತಂಗಡಿ : ಚಂಡಮಾರುತ ಪರಿಣಾಮವಾಗಿ ಸುರಿಯುತ್ತಿರುವ ಮಳೆಯಿಂದ ತಾಲೂಕಿನ ಲಾಯಿಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಹಳ್ಳಕ್ಕೆ ನಿರ್ಮಿಸಿದ್ದ ತಾತ್ಕಾಲಿಕ ಮಣ್ಣಿನ ಸೇತುವೆ ಕೊಚ್ಚಿ ಹೋಗಿದೆ.

ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಲಾಯಿಲ-ಕನ್ನಾಜೆ-ಕರ್ನೋಡಿ-ಮುಂಡೂರು ಸಂಪರ್ಕ ರಸ್ತೆಯ ಕಾಮಗಾರಿ ನಡೆಯುತ್ತಿದೆ. ಈ ರಸ್ತೆಗೆ ಲಾಯಿಲ ಗ್ರಾಮ ಪಂಚಾಯತ್​ ವ್ಯಾಪ್ತಿಯ ಬಜೆಕ್ರೆಸಾಲು ಎಂಬಲ್ಲಿ ಸೇತುವೆ ನಿರ್ಮಾಣ ಮಾಡಲಾಗ್ತಿದೆ. ಈ ಹಿಂದೆ ಇದ್ದ ಹಳೆಯ ಕಿಂಡಿ ಅಣೆಕಟ್ಟನ್ನು ಕೆಡವಿ, ಜನರ ಬೇಡಿಕೆಯಂತೆ ಹೊಸದಾಗಿ ಸೇತುವೆ ನಿರ್ಮಾಣ ಮಾಡಲಾಗುತ್ತಿದೆ. ಹಾಗಾಗಿ, ಜನರ ಸಂಚಾರಕ್ಕೆಂದು ತಾತ್ಕಾಲಿಕ ಮಣ್ಣಿನ ಸೇತುವೆ ಮಾಡಲಾಗಿತ್ತು. ಸೇತುವೆ ಕೊಚ್ಚಿ ಹೋದರೂ, ಕನ್ನಾಜೆ ಸೇರಿದಂತೆ ಈ ಭಾಗದ ಜನರಿಗೆ ಪರ್ಯಾಯ ರಸ್ತೆ ಇರುವ ಕಾರಣ ಸದ್ಯ ಯಾವುದೇ ಸಮಸ್ಯೆ ಆಗಿಲ್ಲ. ಆದರೆ, ಬೆಳ್ತಂಗಡಿ ಪಟ್ಟಣಕ್ಕೆ ಬರಬೇಕಾದರೆ ಸಮಸ್ಯೆ ಎದುರಿಸಬೇಕಾಗಿದೆ.

ಕೊಚ್ಚಿ ಹೋದ ಮಣ್ಣಿನ ಸೇತುವೆ

ಇದನ್ನೂ ಓದಿ: ದ. ಕ. ಜಿಲ್ಲೆಯಲ್ಲಿ ಎನ್‌ಡಿಆರ್‌ಎಫ್ ತಂಡ 3 ತಿಂಗಳು ಮೊಕ್ಕಾಂ.. 24 ಗಂಟೆಯೂ ಸೇವೆಗೆ ಸನ್ನದ್ಧ

ಗುರುವಾಯನಕರೆಯಲ್ಲಿ ಟ್ರಾಫಿಕ್ ಜಾಮ್ ಆದರೆ ವೇಣೂರು, ನಾರಾವಿ ಭಾಗದ ಜನರಿಗೆ ಸಮಸ್ಯೆ ಆಗುತ್ತಿತ್ತು. ಹಾಗಾಗಿ, ಬದಲಿ ರಸ್ತೆಯ ವ್ಯವಸ್ಥೆ ಮಾಡಲು ಶಾಸಕ ಹರೀಶ್ ಪೂಂಜ ವಿಶೇಷ ಮುತುವರ್ಜಿಯಲ್ಲಿ ಈ ಯೋಜನೆಗೆ ಅನುದಾನ ಬಿಡುಗಡೆಗೊಳಿಸಿದ್ದರು. ಬಹುತೇಕ ರಸ್ತೆ ಕಾಮಗಾರಿ ಪೂರ್ಣಗೊಂಡಿದ್ದು, ಸೇತುವೆ ಕಾಮಗಾರಿ ಇತ್ತೀಚೆಗೆ ಆರಂಭಗೊಂಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.