ETV Bharat / state

ಬೆಳ್ತಂಗಡಿ ತಾಲೂಕನ್ನು ಕೊರೊನಾ ಮುಕ್ತಗೊಳಿಸಲು ಜನತೆ ಸಹಕರಿಸಬೇಕು: ಹರೀಶ್ ಪೂಂಜ - ಬೆಳ್ತಂಗಡಿ ಕೊರೊನಾ ಸುದ್ದಿ

ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾದರೆ ಉಜಿರೆ ಟಿಬಿ ಆಸ್ಪತ್ರೆ ಮತ್ತು ಎಲ್ಲಾ ಸರ್ಕಾರಿ ವಸತಿ ನಿಲಯಗಳಲ್ಲಿ ಚಿಕಿತ್ಸೆ ನೀಡಲು ಕ್ರಮ ಕೈಗೊಳ್ಳುವ ಬಗ್ಗೆ ಚಿಂತಿಸಲಾಗುತ್ತಿದೆ. ಅಲ್ಲಿ ಯಾರಿಗಾದರೂ ಹೆಚ್ಚಿನ ಚಿಕಿತ್ಸೆಯ ಅಗತ್ಯತೆ ಕಂಡುಬಂದಲ್ಲಿ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಶಾಸಕ ಹರೀಶ್ ಪೂಂಜಾ ತಿಳಿಸಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆ
ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆ
author img

By

Published : Jul 9, 2020, 12:44 PM IST

ಬೆಳ್ತಂಗಡಿ : ದ.ಕ ಜಿಲ್ಲೆಯಲ್ಲಿ ಕೊರೊನಾ ಸೋಂಕು ಸಮುದಾಯಕ್ಕೆ ಹರಡಲು ಶುರುವಾಗಿರುವುದರಿಂದ ಜನಸಾಮಾನ್ಯರಿಗೆ ಅರಿವು ಮೂಡಿಸುವ ಮೂಲಕ ಸೋಂಕು ನಿಯಂತ್ರಿಸಬೇಕಿದೆ. ಬೆಳ್ತಂಗಡಿ ತಾಲೂಕಿನಲ್ಲಿ 57 ಪ್ರಕರಣಗಳು ಬೆಳಕಿಗೆ ಬಂದಿದ್ದು, ಇದರಲ್ಲಿ 13 ಪ್ರಕರಣಗಳು ಚಿಕಿತ್ಸಾ ಹಂತದಲ್ಲಿವೆ. ಇದನ್ನು ಇಲ್ಲಿಗೆ ತಡೆ ಹಿಡಿಯಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಶಾಸಕ ಹರೀಶ್ ಪೂಂಜಾ ಹೇಳಿದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಕೊರೊನಾ ಮುಕ್ತ ತಾಲೂಕನ್ನಾಗಿಸುವ ದೃಷ್ಟಿಯಲ್ಲಿ ಅಧಿಕಾರಿಗಳಿಂದ ಮತ್ತು ಮಾಧ್ಯಮದವರಿಂದ ಮಾಹಿತಿ ಪಡೆಯಲು ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು.

ರಾಜ್ಯ ಸರ್ಕಾರ ಭಾನುವಾರ ಸ್ವಯಂಪ್ರೇರಿತ ಲಾಕ್‍ಡೌನ್‍ಗೆ ಕರೆ ನೀಡಿದ್ದು ಮೂಡುಬಿದಿರೆಯಂತಹ ಕೆಲವೊಂದು ತಾಲೂಕುಗಳಲ್ಲಿ ಮಧ್ಯಾಹ್ನದ ನಂತರ ಬಂದ್‍ಗೆ ಕರೆ ನೀಡುತ್ತಿರುವುದನ್ನು ಕಾಣಬಹುದು. ಇತ್ತೀಚಿನ ದಿನಗಳಲ್ಲಿ ಕೊರೊನಾ ಪಾಸಿಟಿವ್ ಬಂದ ಪ್ರಕರಣಗಳಿಗೂ ಮನೆಯಲ್ಲೇ ಚಿಕಿತ್ಸೆ ನೀಡುವ ವ್ಯವಸ್ಥೆ ನಡೆಯುವ ಬಗ್ಗೆ ಚಿಂತನೆ ಬರುತ್ತಿದೆ ಎಂದರೆ ಕೊರೊನಾ ಎಷ್ಟರ ಮಟ್ಟಿಗೆ ವಿಸ್ತರಿಸಿದೆ ಎಂಬುದನ್ನು ಚಿಂತಿಸುವ ಅಗತ್ಯವಿದೆ ಎಂದರು.

ತಾಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ಸಭೆ

ತಾಲೂಕಿನಲ್ಲಿ ಯಾವುದೇ ಒತ್ತಡವಿಲ್ಲದೆ ಸ್ವಯಂಪ್ರೇರಿತ ಲಾಕ್‍ಡೌನ್ ಮಾಡಲು ಜನರು ಮುಂದಾಗಬೇಕು. ಈ ಬಗ್ಗೆ ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ ಅಧಿಕಾರಿಗಳು ಅಲ್ಲಿನ ವರ್ತಕರ, ಆಟೋ ಚಾಲಕರ, ಸಂಘ ಸಂಸ್ಥೆಗಳ ಸಭೆ ಕರೆದು ಮಾಹಿತಿ ನೀಡಬೇಕು. ಈ ಸಭೆಯನ್ನು ಗುರುವಾರ ಮತ್ತು ಶುಕ್ರವಾರ ನಡೆಸಬೇಕು. ಬಳಿಕ ಶನಿವಾರ ಮಧ್ಯಾಹ್ನ ನಂತರ ಬೆಳ್ತಂಗಡಿ ಮಂಜುನಾಥ ಕಲಾಭವನದಲ್ಲಿ ಮತ್ತೊಮ್ಮೆ ಪೂರ್ವಭಾವಿ ಸಭೆಯನ್ನು ಕರೆಯಲಿದ್ದು ಇದಕ್ಕೆ ಪ್ರತೀ ಗ್ರಾಮದಿಂದ ಇಬ್ಬರು ಪ್ರಮುಖರನ್ನು ಸಭೆಗೆ ಬಂದು ಸಲಹೆ ಸೂಚನೆ ನೀಡುವಂತೆ ಮಾಡಬೇಕು ಎಂದರು.

ಸಭೆಯಲ್ಲಿ ತಾ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಯರಾಮ್, ನ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಧಾಕರ್, ತಾಲೂಕು ವೈದ್ಯಾಧಿಕಾರಿ ಡಾ. ಕಲಾಮಧು, ಪತ್ರಕರ್ತರಾದ ದೇವಿ ಪ್ರಸಾದ್, ಪುಷ್ಪರಾಜ ಶೆಟ್ಟಿ ಭುವನೇಶ್ ಗೇರುಕಟ್ಟೆ, ಮನೋಹರ್ ಬಳಂಜ, ಚೈತ್ರೇಶ್ ಇಳಂತಿಲ, ಹರೀಶ್ ಬಂಟ್ವಾಳ್ ಮುಂತಾದವರು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.