ಮಂಗಳೂರು: ದೇಶದಲ್ಲಿ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದ್ದು, ಜಿಡಿಪಿ ಇಷ್ಟು ಕಡಿಮೆ ಯಾವತ್ತೂ ಬಂದಿಲ್ಲ .ಇದಕ್ಕೆ ಮೋದಿ ಸರ್ಕಾರದ ಆರ್ಥಿಕ ನೀತಿಯೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಕೇಂದ್ರ ಸರ್ಕಾರವು ಬ್ಯಾಂಕ್ಗಳ ವಿಲೀನ ಮಾಡಿರುವ ಬಗ್ಗೆ ಪ್ರತಿಕ್ರಿಯಿಸಿ ಮಂಗಳೂರಿನಲ್ಲಿ ಮಾತನಾಡಿದ ಅವರು, ಬ್ಯಾಂಕುಗಳ ವಿಲೀನದಿಂದ ಬ್ಯಾಂಕುಗಳ ಬಲವರ್ಧನೆ ಆಗುವುದಿಲ್ಲ. ಕ್ರೆಡಿಟ್ ಕೆಪಾಸಿಟಿ ಜಾಸ್ತಿ ಆಗುವುದಿಲ್ಲ. ಬ್ಯಾಂಕುಗಳು ಈಗ ಸಂಕಷ್ಟದಲ್ಲಿವೆ. ಕೇಂದ್ರ ಬಿಜೆಪಿ ಸರ್ಕಾರದ ಹಸ್ತಕ್ಷೇಪ ಜಾಸ್ತಿಯಾಗಿದೆ. ಇಡೀ ಆರ್ಥಿಕ ವ್ಯವಸ್ಥೆ ದೇಶದಲ್ಲಿ ದುರ್ಬಲ ಆಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇಶದ ಜಿಡಿಪಿ ಶೇ. 5ಕ್ಕೆ ಬಂದು ನಿಂತಿದೆ. ಆದರೆ ಅದು ಸರಿಯಾದ ಲೆಕ್ಕಾಚಾರ ಅಲ್ಲ. 3.5 ಅಥವಾ 4ಕ್ಕೆ ಇರಬಹುದು. ದೇಶದ ಆರ್ಥಿಕ ಪರಿಸ್ಥಿತಿ ಅಧೋಗತಿಗೆ ತಲುಪಿದೆ ಎಂದರು.