ಸುಳ್ಯ: ಗಲ್ವಾನ್ ಕಣಿವೆಯಲ್ಲಿ ಹುತಾತ್ಮರಾದ 20 ಭಾರತೀಯ ಸೈನಿಕರಿಗೆ ಕಡಬ ತಾಲೂಕಿನ ಚಾರ್ವಾಕ ಗ್ರಾಮದ ನಮ್ಮ ಜವನೆರ್ ಬಳಗದ ವತಿಯಿಂದ ವಿಶಿಷ್ಟವಾಗಿ ಶ್ರದ್ಧಾಂಜಲಿ ಅರ್ಪಿಸಲಾಯಿತು.
![Shraddhanjali](https://etvbharatimages.akamaized.net/etvbharat/prod-images/kn-dk-01-socialwork-av-pho-kac10008_29062020204813_2906f_1593443893_836.jpg)
ನಮ್ಮ ಜವನೆರ್ ಬಳಗದ ವನಸಮೃದ್ದಿ ಯೋಜನೆಗೆ ಚಾರ್ವಾಕ ಕಪಿಲೇಶ್ವರ ದೇವಸ್ಥಾನದ ಬಳಿಯಲ್ಲಿ ಚಾಲನೆ ನೀಡಲಾಯಿತು. ಚಾರ್ವಾಕ ಗ್ರಾಮದಲ್ಲಿ ಸುಮಾರು ಒಂದು ಸಾವಿರಕ್ಕೂ ಹೆಚ್ಚು ಸಸಿ ನೆಟ್ಟು ಹುತಾತ್ಮರಾದ ಯೋಧರ ಬಲಿದಾನಕ್ಕೆ ವಿಶೇಷ ರೀತಿಯಲ್ಲಿ ಶ್ರದ್ದಾಂಜಲಿ ಅರ್ಪಿಸಲಾಯಿತು.
ಹುತಾತ್ಮರಾದ 20 ವೀರ ಯೋಧರ ಹೆಸರಿನಲ್ಲಿ 20 ಹಲಸಿನ ಸಸಿಗಳನ್ನು ಚಾರ್ವಾಕ ಉಳ್ಳಾಕುಲು ದೈವಸ್ಥಾನದ ಆವರಣದಲ್ಲಿ ನೆಡಲಾಯಿತು.