ETV Bharat / state

ಲೈಂಗಿಕ ಕಿರುಕುಳ: ವಕೀಲನ ವಿರುದ್ಧ ವಿದ್ಯಾರ್ಥಿನಿ ಆರೋಪ - ರಾಜೇಶ್​ ಭಟ್

ಲೈಂಗಿಕ ಕಿರುಕುಳ ಪ್ರಕರಣ ಸಂಬಂಧ ವಕೀಲರ ವಿರುದ್ಧ ಇಂಟರ್ನ್​ಶಿಪ್​​​ ವಿದ್ಯಾರ್ಥಿನಿಗೆ ಆಕ್ರೋಶ ಹೊರಹಾಕಿದ್ದಾರೆ.

ವಿದ್ಯಾರ್ಥಿನಿ
ವಿದ್ಯಾರ್ಥಿನಿ
author img

By

Published : Oct 24, 2021, 6:36 PM IST

ಮಂಗಳೂರು: ಮಂಗಳೂರಿನ ಲೋಕಾಯುಕ್ತ ಮತ್ತು ಎಸಿಬಿ ವಿಶೇಷ ವಕೀಲರಾಗಿದ್ದ ಕೆ.ಎಸ್​.ಎನ್​. ರಾಜೇಶ್ ಭಟ್​ ವಿರುದ್ಧ ವಿದ್ಯಾರ್ಥಿನಿ ಗಂಭೀರ ಆರೋಪ ಮಾಡಿದ್ದಾಳೆ. ಈಗಾಗಲೇ ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇದೀಗ ಈ ಬಗ್ಗೆ ಮಾತನಾಡಿರುವ ಸಂತ್ರಸ್ತೆ, ರಾಜೇಶ್ ಭಟ್​ ರಾತ್ರಿ ಎಂಟು ಗಂಟೆಯವರೆಗೂ ಕಚೇರಿಯಲ್ಲೇ ಕೆಲಸ ಮಾಡಲು ಹೇಳಿದ್ದರು. ರಾತ್ರಿ ಅಶ್ಲೀಲ ಮೆಸೇಜ್​ಗಳನ್ನು ಕಳುಹಿಸುತ್ತಿದ್ದರು. ಆದರೆ, ತಾನು ಆ ಮೆಸೇಜ್​ಗಳಿಗೆ ಪ್ರತಿಕ್ರಿಯಿಸುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ, ಕಚೇರಿಯಲ್ಲಿ ಯಾರೂ ಇಲ್ಲದ ವೇಳೆ ಒಂದು ದಿನ ರಾತ್ರಿ ಎಂಟು ಗಂಟೆಯ ತನಕ ಕೆಲಸ ಮಾಡಿಸಿದ್ದರು. ನನ್ನನ್ನು ಛೇಂಬರ್​ಗೆ ಕರೆದು ಲೈಂಗಿಕ ಕಿರುಕುಳ ನೀಡಿ, ಬಳಿಕ ಯಾರಿಗೂ ಹೇಳದಂತೆ ಕೊಲೆ ಬೆದರಿಕೆ ಹಾಕಿದ್ದರು ಎಂದು ಸಂತ್ರಸ್ತೆ ದೂರು ನೀಡಿದ್ದಾರೆ.

ಘಟನೆಯ ಬಳಿಕ ಸಂತ್ರಸ್ತೆಗೆ ಕರೆ ಮಾಡಿದ ರಾಜೇಶ್​, ಕೆಲಸಕ್ಕೆ ಬರುವಂತೆ ಸಂತ್ರಸ್ತೆಯನ್ನು ಪರಿಪರಿಯಾಗಿ ಬೇಡಿಕೊಂಡಿರುವ ಆಡಿಯೋ ವೈರಲ್ ಆಗಿದೆ. ಗೊತ್ತಿಲ್ಲದೆ ತನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಆ ರೀತಿ ಆಗದಂತೆ ನೋಡಿಕೊಳ್ಳುತ್ತೇನೆ, ದಯವಿಟ್ಟು ಕಚೇರಿಗೆ ಬಾ ಎಂದು ಗೋಗರೆದಿದ್ದಾನೆ.

ಸಂತ್ರಸ್ತೆಯು "ನಿಮಗೆ ಪತ್ನಿ ಇಲ್ಲವೇ, ನಿಮಗೆ ವಯಸ್ಸಾಗಿದೆ. ನಿಮ್ಮ ಮಗಳನ್ನು ಇದೇ ಭಾವನೆಯಿಂದ ನೋಡುತ್ತೀರ?. ಇಲ್ಲಿ ತನಗೆ ಯಾರೂ ಇಲ್ಲ ಎಂದುಕೊಂಡು ದುರ್ಬಳಕೆ ಮಾಡಿಕೊಳ್ಳಲು ಯತ್ನಿಸಿದ್ದೀರಿ. ನೀವು ಶ್ರೀಮಂತರು ಏನು ಬೇಕಾದರೂ ಮಾಡುತ್ತೀರಿ. ಅದನ್ನೆಲ್ಲ ನೋಡಿಕೊಂಡ ಸುಮ್ಮನಿರಲು ಸಾಧ್ಯವಾಗುವುದಿಲ್ಲ. ಇನ್ನು ಮುಂದೆ ನನ್ನ ನಂಬರ್​ಗೆ ಕರೆ ಮಾಡಬೇಡಿ" ಎಂದು ಯುವತಿ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಕುಷ್ಟಗಿ: ಮಳೆಗೆ ತುಂಬಿದ ಹಳ್ಳ... ದಾಟಲು ಯತ್ನಿಸಿ ಕೊಚ್ಚಿ ಹೋದ ವೃದ್ಧ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.