ETV Bharat / state

ಬೆಳ್ತಂಗಡಿಯ ಕರಾಯದಲ್ಲಿ ಸರಣಿ ಕಳ್ಳತನ: ನಾಲ್ವರು ಆರೋಪಿಗಳ ಬಂಧನ - ಸರಣಿ ಕಳ್ಳತನ ಪ್ರಕರಣ

ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.

four accused arrested
ಬಂಧಿತರು
author img

By

Published : May 30, 2021, 10:06 AM IST

ಬೆಳ್ತಂಗಡಿ: ಉಪ್ಪಿನಂಗಡಿ ಠಾಣಾ ವ್ಯಾಪ್ತಿಯ ಕರಾಯ ಪರಿಸರದಲ್ಲಿ ನಡೆದ ಮನೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಉರುವಾಲು, ಮುರಿಯಾಳ ನಿವಾಸಿ ಸಂಶುದ್ದೀನ್ (30), ಮೂಲತಃ ಹಿರೆಬಂಡಾಡಿ ಮುರ ನಿವಾಸಿಯಾಗಿದ್ದ ಸದ್ಯ ಕರಾಯದಲ್ಲಿ ನೆಲೆಸಿರುವ ನವಾಜ್ ಮಹಮ್ಮದ್ (25), ಕರಾಯ, ಜನತಾ ಕ್ವಾಟ್ರಸ್ ನಿವಾಸಿ ಸೈಯದ್ ನಿಜಾಂ ತಂಗಳ್ (21), ಮೂಲತಃ ಇಳಂತಿಲ ಕಡವಿನ ಬಾಗಿಲು ‌ನಿವಾಸಿ ಸದ್ಯ ಕರಾಯ ಬಳಿ ಬಾಡಿಗೆ ಮನೆ ನಿವಾಸಿ ಸಪ್ರರಾಜ್ (24) ಬಂಧಿತ ಆರೋಪಿಗಳು.

ಈ ಪೈಕಿ‌ ಪ್ರಕರಣದ ಪ್ರಮುಖ ಸಂಶುದ್ದೀನ್‌ ವಿರುದ್ಧ ಬೆಂಗಳೂರು ನಗರ ಉಪ್ಪಾರ ಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ ದಾಖಲಾಗಿದ್ದು, ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಆದರೆ ನ್ಯಾಯಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿರುವುದು ತಿಳಿದು ಬಂದಿದೆ.

2021ರ ಜ. 14ರಂದು ಕರಾಯದ ಕಡಾಯ ನಿವಾಸಿ ಜೆ.ಎನ್.ಶರತ್ ಕುಮಾರ್ ಹಾಗೂ‌ ಮೇ 14ರಂದು ಸಂಬಂಧಿಕರ ಮನೆಗೆ ತೆರಳಿದ್ದ ಉರುವಾಲಿನ ಮುರಿಯಾಳ ನಿವಾಸಿ ಶಾಹೀದಾ ಎಂಬುವರ ಮನೆಯಲ್ಲಿ‌ ಕಳ್ಳತನವಾಗಿತ್ತು. ಈ ಕುರಿತು ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಒಂದೇ ಪರಿಸರದಲ್ಲಿ ಈ ಎರಡು ಕಳ್ಳತನ ಪ್ರಕರಣ ದಾಖಲಾಗಿದ್ದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸ್ ಇಲಾಖೆ, ಪ್ರಕರಣವನ್ನು ಭೇದಿಸಲು ಪೊಲೀಸ್ ಅಧೀಕ್ಷಕ ಸೋನಾವಣಿ ರಿಷಿಕೇಶ್ ಆದೇಶದಂತೆ, ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ನೇತೃತ್ವದಲ್ಲಿ ವಿಶೇಷ ಪತ್ತೆ ತಂಡ‌ ರಚಿಸಲಾಗಿತ್ತು.‌

ಪ್ರಕರಣಕ್ಕೆ ನಿಯೋಜನೆಗೊಂಡಿದ್ದ ವಿಶೇಷ ತಂಡ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಭಾಸ್ಕರ ಒಕ್ಕಲಿಗ ಮತ್ತು ಪೊಲೀಸ್ ಉಪಾಧೀಕ್ಷಕ ಪುತ್ತೂರು ಉಪ ವಿಭಾಗದ ಗಾನ ಪಿ. ಕುಮಾರ್ ಅವರ ಮಾರ್ಗದರ್ಶನದಲ್ಲಿ‌‌ ಕಾರ್ಯಾಚರಣೆ ನಡೆಸಿತ್ತು. ಸದ್ಯ ಆರೋಪಿಗಳಿಂದ ಸುಮಾರು ರೂ. 5.5 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ಸುಮಾರು 1 ಲಕ್ಷ ಮೌಲ್ಯದ 3 ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.