ETV Bharat / state

ಎಸ್​ಸಿಡಿಸಿಸಿ ಬ್ಯಾಂಕ್​ನಿಂದ ಪೊಲೀಸ್ ಸಿಬ್ಬಂದಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ - ಸ್ಯಾನಿಟೈಸರ್ ವಿತರಣೆ

ಎಸ್ ಸಿಡಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಅವರ ಮೂಲಕ ಪೊಲೀಸ್ ಸಿಬ್ಬಂದಿಗೆ 5 ಸಾವಿರ ಮಾಸ್ಕ್ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪ್ರತಿ ಪೊಲೀಸ್ ಠಾಣೆಗೆ ತಲಾ ಒಂದು ಕ್ಯಾನ್ ಸ್ಯಾನಿಟೈಸರ್ ವಿತರಣೆ ಮಾಡಿದರು‌.

ಸ್ಯಾನಿಟೈಸರ್ ವಿತರಣೆ
ಸ್ಯಾನಿಟೈಸರ್ ವಿತರಣೆ
author img

By

Published : May 12, 2021, 4:24 AM IST

ಮಂಗಳೂರು: ಎಸ್​​ಸಿಡಿಸಿಸಿ ಬ್ಯಾಂಕ್ ವತಿಯಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪೊಲೀಸ್ ಇಲಾಖೆ ಪೊಲೀಸರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಕಾರ್ಯಕ್ರಮವು ಕೆ.ಎಸ್.ರೋಡ್​ನಲ್ಲಿರುವ ಎಸ್​ಸಿಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಿತು.

ಎಸ್ ಸಿಡಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್.ರಾಜೇಂದ್ರ ಕುಮಾರ್ ಅವರು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ಎನ್ ಅವರ ಮೂಲಕ ಪೊಲೀಸ್ ಸಿಬ್ಬಂದಿಗೆ 5 ಸಾವಿರ ಮಾಸ್ಕ್ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪ್ರತಿ ಪೊಲೀಸ್ ಠಾಣೆಗೆ ತಲಾ ಒಂದು ಕ್ಯಾನ್ ಸ್ಯಾನಿಟೈಸರ್ ವಿತರಣೆ ಮಾಡಿದರು‌.

ಮಾಸ್ಕ್, ಸ್ಯಾನಿಟೈಸರ್ ವಿತರಣೆಯಲ್ಲಿ ಮಾತಾಡಿದ ಬ್ಯಾಂಕ್​ ಹಾಗೂ ಪೊಲೀಸ್ ಅಧಿಕಾರಿಗಳು

ಎಸ್​ಸಿಡಿಸಿ ಬ್ಯಾಂಕ್​ನ ನಿರ್ದೇಶಕ ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು ಮಾತನಾಡಿ, ಮೊದಲ ಹಂತದ ಕೊರಯ ಸೋಂಕಿನ ಕಾಲಘಟ್ಟದಲ್ಲಿ ಕೂಡಾ ಉಭಯ ಜಿಲ್ಲೆಗಳ ಜನರಿಗೆ, ಸಹಕಾರಿ ಸಂಘಗಳ ಸದಸ್ಯರಿಗೆ ಮಾಸ್ಕ್, ಸ್ಯಾನಿಟೈಸರ್ ವಿತರಣೆ ಮಾಡಿ ಸ್ಪಂದನೆ ನೀಡಲಾಗಿತ್ತು. ಸರಕಾರಕ್ಕೂ ಬ್ಯಾಂಕ್ ಹಾಗೂ ಎಸ್​ಸಿಡಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ವತಿಯಿಂದಲೂ ಸಹಕಾರ ಒದಗಿಸಲಾಗಿತ್ತು. ಇಂದು ಕೊರೊನಾ ವಾರಿಯರ್ಸ್ ಗಳಾಗಿ ದುಡಿಯುತ್ತಿರುವ ಪೊಲೀಸರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ವಿತರಣೆ ಕಾರ್ಯವನ್ನು ಎಸ್ ಸಿಡಿಸಿ ಬ್ಯಾಂಕ್ ವತಿಯಿಂದ ಮಾಡಲಾಗುತ್ತಿದೆ ಎಂದು ಹೇಳಿದರು.

ಪೊಲೀಸ್ ಆಯುಕ್ತ ಶಶಿಕುಮಾರ್ ಎನ್ ‌ಮಾತನಾಡಿ, ಎಸ್​ಸಿಡಿಸಿಸಿ ಬ್ಯಾಂಕ್​ನಿಂದ ಪೊಲೀಸ್ ಇಲಾಖೆಗೆ ಮಾಸ್ಕ್ ಹಾಗೂ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಪ್ರತೀ ಪೊಲೀಸ್ ಠಾಣೆಗೆ ಸ್ಯಾನಿಟೈಸರ್ ವಿತರಣೆಯಾಗಿದ್ದು ಉಪಯುಕ್ತ. ಇದು ಪೊಲೀಸ್ ಸಿಬ್ಬಂದಿಗೆ ಅನುಕೂಲವಾಗಲಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.