ಮಂಗಳೂರು : ಭಾನುವಾರ ದ.ಕ ಜಿಲ್ಲೆಯಲ್ಲಿ 96 ಮಂದಿಯ ಗಂಟಲು ದ್ರವ ಪರೀಕ್ಷೆಗೆ ರವಾನಿಸಲಾಗಿದೆ.
ಈ ಹಿಂದೆ ಪರೀಕ್ಷೆ ಕಳುಹಿಸಿದ್ದ 49 ಮಂದಿಯ ಸ್ಯಾಂಪಲ್ಸ್ ವರದಿ ಬಂದಿದೆ. ಅದರಲ್ಲಿ 47 ಮಂದಿಯದ್ದು ನೆಗೆಟಿವ್ ಬಂದಿದ್ದು, ಇಬ್ಬರದ್ದು ಪಾಸಿಟಿವ್ ಬಂದಿದೆ. ಇನ್ನು ಒಟ್ಟು 112 ಮಂದಿಯ ವರದಿ ಬರಲು ಬಾಕಿಯಿದ್ದು, ಒಟ್ಟು 25 ಮಂದಿಯ ಮೇಲೆ ನಿಗಾ ಇರಿಸಲಾಗಿದೆ. 9 ಮಂದಿಯನ್ನು ನಗರದ ಇಎಸ್ಐ ಆಸ್ಪತ್ರೆಯಲ್ಲಿ ಮತ್ತು 33 ಮಂದಿಯನ್ನು ಸುರತ್ಕಲ್ನ ಎನ್ಐಟಿಕೆಯಲ್ಲಿ ಕ್ವಾರಂಟೈನ್ ಮಾಡಲಾಗಿದೆ. ಸದ್ಯಕ್ಕೆ ವೆನ್ಲಾಕ್ ಆಸ್ಪತ್ರೆಯಲ್ಲಿ ಯಾರನ್ನೂ ಕ್ವಾರೆಂಟೈನ್ ಮಾಡಲಾಗಿಲ್ಲ.
ಒಟ್ಟು 6,073 ಮಂದಿ 28 ದಿನಗಳ ಹೋಂ ಕ್ವಾರಂಟೈನ್ ಮುಗಿಸಿದ್ದಾರೆ. ಭಾನುವಾರ 49 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದ್ದು, ಈವರೆಗೆ ಜಿಲ್ಲೆಯಲ್ಲಿ 41,296 ಜನರನ್ನು ಸ್ಕ್ರೀನಿಂಗ್ ಮಾಡಲಾಗಿದೆ. ಈವರೆಗೆ ಒಟ್ಟು 5,053 ಮಂದಿಯ ಸ್ಯಾಂಪಲ್ಸ್ ಪಡೆಯಲಾಗಿದ್ದು, ಈ ಪೈಕಿ 4,941 ಮಂದಿಯ ವರದಿ ಬಂದಿದೆ. ಅದರಲ್ಲಿ 4,889 ಮಂದಿಯದ್ದು ನೆಗೆಟಿವ್ ಬಂದಿದ್ದು, 52 ಜನರಿಗೆ ಸೋಂಕು ದೃಢಪಟ್ಟಿದೆ.
ಇದುವರೆಗೆ 16 ಗುಣಮುಖರಾಗಿ ಮನೆಗೆ ತೆರಳಿದ್ದಾರೆ. 31 ಮಂದಿ ವೆನ್ಲಾಕ್ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 5 ಮಂದಿ ಮೃತಪಟ್ಟಿದ್ದಾರೆ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.