ETV Bharat / state

ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ತಮಿಳುನಾಡಿನ ‌ದೋಣಿ ರಕ್ಷಣೆ

ಸಿ- 448 ಹಾಗೂ ಸಿ- 446 ಇಂಟರ್‌ಸೆಪ್ಟರ್‌ ನೌಕೆಗಳನ್ನು ಕಳುಹಿಸಿ, ಅಪಾಯದಲ್ಲಿದ್ದ ತಮಿಳುನಾಡಿನ ದೋಣಿಯನ್ನು ರಕ್ಷಣೆ ಮಾಡಲಾಗಿದೆ.

Rescue of Tamil Nadu boat
ಅರಬ್ಬಿ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ತಮಿಳುನಾಡಿನ ‌ದೋಣಿ ರಕ್ಷಣೆ
author img

By ETV Bharat Karnataka Team

Published : Sep 29, 2023, 3:48 PM IST

ಮಂಗಳೂರು: ಅರಬ್ಬಿ ಸಮುದ್ರದಲ್ಲಿ ಇಂಜಿನ್​ ವೈಫಲ್ಯದಿಂದ ಅಪಾಯಕ್ಕೆ ಸಿಲುಕಿದ್ದ ತಮಿಳುನಾಡಿನ ಮೀನುಗಾರಿಕಾ ದೋಣಿಯನ್ನು ಕರಾವಳಿಯ ರಕ್ಷಣಾ ಪಡೆ ರಕ್ಷಿಸಿದೆ. ಅರಬ್ಬಿ ಸಮುದ್ರದಲ್ಲಿ ನವ ಮಂಗಳೂರು ಬಂದರಿನ ತೀರದಿಂದ 36 ನಾಟಿಕಲ್ ಮೈಲ್ ದೂರದಲ್ಲಿ 'ತಿರುಚೆಂಡೂ‌ ಮುರುಗನ್' ಎಂಬ ಮೀನುಗಾರಿಕಾ ದೋಣಿ ಸೆ. 24ರಂದು ಅಪಾಯಕ್ಕೆ ಸಿಲುಕಿ ಕೊಂಡಿತ್ತು. ಈ ಬಗ್ಗೆ ಮುಂಬೈನ ಸಾಗರ ರಕ್ಷಣೆ ಸಮನ್ವಯ ಕೇಂದ್ರಕ್ಕೆ (ಎಂಆರ್‌ಸಿಸಿ) ಮಾಹಿತಿ ಬಂದಿತ್ತು.

ಕರಾವಳಿ ರಕ್ಷಣಾ ಪಡೆಯ ಕರ್ನಾಟಕ ಕೇಂದ್ರ ಕಚೇರಿಗೆ ಎಂಆರ್‌ಸಿಸಿಯು ಮಂಗಳವಾರ ಮಾಹಿತಿ ರವಾನಿಸಿದೆ. ಪರಿಸ್ಥಿತಿಯ ಗಂಭೀರತೆ ಅರಿತ ಕರಾವಳಿ ರಕ್ಷಣಾ ಪಡೆ ತಕ್ಷಣವೇ, ದೋಣಿಯನ್ನು ಎಳೆದು ತರುವ ಅಗತ್ಯ ಸಲಕರಣೆಗಳಿಂದ ಸನ್ನದ್ಧವಾಗಿದ್ದ ಸಿ- 448 ಹಾಗೂ ಸಿ- 446 ಇಂಟರ್‌ಸೆಪ್ಟರ್‌ ನೌಕೆಗಳನ್ನು ನೆರವಿಗೆ ಕಳುಹಿಸಿಕೊಟ್ಟಿದೆ.

'ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ ದೋಣಿಯನ್ನು ತೀರಕ್ಕೆ ಎಳೆದು ತರಲಾಗಿದೆ. ಮೀನುಗಾರಿಕಾ ಇಲಾಖೆ ಹಾಗೂ ಅಪಾಯಕ್ಕೆ ಸಿಲುಕಿದ್ದ ದೋಣಿಯ ಮಾಲೀಕರನ್ನು ಸಂಪರ್ಕಿಸಿ ಮಾಹಿತಿ ಪಡೆದು ಪರಸ್ಪರ ಸಮನ್ವಯ ಸಾಧಿಸುವ ಮೂಲಕ ದೋಣಿಯಲ್ಲಿದ್ದ ಮೀನುಗಾರರ ರಕ್ಷಣೆ ಮಾಡಲಾಗಿದೆ. ಸಮುದ್ರವು ಪ್ರಕ್ಷುಬ್ಧಗೊಂಡು ಪ್ರತಿಕೂಲ ವಾತಾವರಣ ನಿರ್ಮಾಣವಾಗಿದ್ದರಿಂದ ದೋಣಿಯನ್ನು ತೀರಕ್ಕೆ ಎಳೆದು ತರಲು ಸಮಸ್ಯೆ ಎದುರಾಗಿತ್ತು. ಸಿ- 448 ಹಾಗೂ ಸಿ- 446 ಇಂಟರ್‌ಸೆಪ್ಟರ್‌ ನೌಕೆಗಳು ದೋಣಿಯನ್ನು ಯಶಸ್ವಿಯಾಗಿ ರಕ್ಷಣೆ ಮಾಡಿ ತೀರಕ್ಕೆ ತಂದಿದೆ. ಗುರುವಾರ ಮುಂಜಾನೆ 1.50ಕ್ಕೆ ದೋಣಿಯು ನವಮಂಗಳೂರು ಬಂದರು ತಲುಪಿದೆ.

ಇದನ್ನೂ ಓದಿ : ಸಮುದ್ರದಲ್ಲಿ ದುರಂತಕ್ಕೀಡಾದ ದೋಣಿ.. 60ಕ್ಕೂ ಹೆಚ್ಚು ಜನ ನೀರುಪಾಲು ಶಂಕೆ, ಏಳು ಶವಗಳು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.