ETV Bharat / state

ಮತಾಂತರ ನಿಷೇಧ ಕಾಯ್ದೆ ರದ್ಧತಿ ವಿರುದ್ಧ ಪ್ರತಿಭಟನೆ ಅನಿವಾರ್ಯ: ಡಾ.ಕಲ್ಲಡ್ಕ ಪ್ರಭಾಕರ ಭಟ್

ಹಿಂದಿನ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ಸರಿಯಾದ ನಿರ್ಧಾರವಾಗಿತ್ತು ಎಂದು ಡಾ.ಕಲ್ಲಡ್ಕ ಪ್ರಭಾಕರ ಭಟ್ ಹೇಳಿದರು.

ಡಾ. ಕಲ್ಲಡ್ಕ ಪ್ರಭಾಕರ ಭಟ್
ಡಾ. ಕಲ್ಲಡ್ಕ ಪ್ರಭಾಕರ ಭಟ್
author img

By

Published : Jun 16, 2023, 9:31 PM IST

Updated : Jun 16, 2023, 10:48 PM IST

ಮತಾಂತರ ನಿಷೇಧ ಕಾಯಿದೆ ರದ್ಧತಿ ಕುರಿತು ಡಾ. ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ

ಬಂಟ್ವಾಳ (ದಕ್ಷಿಣ ಕನ್ನಡ) : ಮತಾಂತರ ನಿಷೇಧ ಕಾಯಿದೆ ರದ್ಧತಿ ಕುರಿತು ಬಂಟ್ವಾಳದಲ್ಲಿ ಹಿರಿಯ ಆರ್​ಎಸ್​ಎಸ್​ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್ ಪ್ರತಿಕ್ರಿಯೆ ನೀಡಿದ್ದಾರೆ. ‘‘ಅವರೇನು ಬಲವಂತದ ಮತಾಂತರಕ್ಕೆ ಒಪ್ಪಿಗೆ ಕೊಡ್ತಾರಾ?, ಕಳ್ಳತನದಿಂದ ಮತಾಂತರಕ್ಕೆ ಒಪ್ಪಿಗೆ ಕೊಡ್ತಾರಾ?’’ ಎಂದು ಪ್ರಶ್ನಿಸಿರುವ ಭಟ್, ಈ ಕುರಿತು ಹೋರಾಟ ಅನಿವಾರ್ಯ ಎಂದರು.

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಮತಾಂತರ ನಿಷೇಧ ಕಾಯ್ದೆಯನ್ನು ಜಾರಿ ಮಾಡಿದ್ದು ಸರಿಯಾದ ನಿರ್ಧಾರವಾಗಿತ್ತು. ಇದನ್ನು ಈ ಬಾರಿ ಅಧಿಕಾರಕ್ಕೆ ಬಂದಿರುವ ಸರ್ಕಾರ ವಾಪಸ್ ತೆಗೆದುಕೊಂಡಿರುವುದು ತಪ್ಪು. ನಮಗೆ ಯಾವುದೇ ಒಪ್ಪಿಗೆ ಇಲ್ಲ ಎನ್ನುವ ರೀತಿಯಲ್ಲಿ ಎಲ್ಲವನ್ನೂ ಹೊಡೆದು ಹಾಕಿ ಬೇರೊಂದು ದಾರಿಯಲ್ಲಿ ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಉದಾಹರಣೆ ಮತಾಂತರ ನಿಷೇಧ ಕಾಯ್ದೆಯ ವಾಪಸಾತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದಿಂದ ರಾಜ್ಯದಲ್ಲಿ ಟಿಪ್ಪು ಯುಗ ಆರಂಭ: ಆರ್.ಅಶೋಕ್ ಆರೋಪ

ಬಲವಂತದ ಮತಾಂತರ ಮಾಡಬಾರದು ಎನ್ನುವುದು ಕಾಯಿದೆ ತಿರುಳು. ಎರಡನೇಯದು ಮೋಸ, ವಂಚನೆಯ ಆಧಾರದ ಮೇಲೆ ಮತಾಂತರ ಆಗಬಾರದು ಅನ್ನೋದು. ಮತಾಂತರವನ್ನು ಸ್ವಇಚ್ಛೆಯಿಂದ ಯಾರು ಬೇಕಾದರೂ ಆಗಬಹುದು. ಆದರೆ ಮತಾಂತರ ಆಗುವವನು ಜಿಲ್ಲಾಧಿಕಾರಿಗಳಿಗೆ ಎರಡು ತಿಂಗಳು ಮುಂಚೆ ಯಾವ ಉದ್ದೇಶಕ್ಕಾಗಿ ಮತಾಂತರವಾಗುತ್ತಿದ್ದೇನೆ ಎಂದು ಮನವಿಯೊಂದಿಗೆ ಒಂದು ವರದಿ ನೀಡಬೇಕು. ಮತಾಂತರವನ್ನು ಯಾಕೆ ಆಗುತ್ತಿದ್ದೇನೆ ಎಂದು ಸ್ವತಂತ್ರವಾಗಿ ಎಲ್ಲರ ಮುಂದೆ ಹೇಳುವ ಹಕ್ಕನ್ನು ಸಂವಿಧಾನ ಕೊಟ್ಟಿದೆ. ಹೀಗಾಗಿ ಗುಟ್ಟಾಗಿ ಮತಾಂತರ ಆಗುವಂತಿಲ್ಲ. ಇದಕ್ಕಾಗಿ ಹಿಂದಿನ ಸರ್ಕಾರ ಕಾಯ್ದೆಯನ್ನು ತಂದಿತ್ತು ಎಂದು ಪ್ರಭಾಕರ ಭಟ್ ತಿಳಿಸಿದರು.

ಇದನ್ನೂ ಓದಿ : Anti-Conversion Law: ಮತಾಂತರ ನಿಷೇಧ ತಿದ್ದುಪಡಿ ಕಾಯ್ದೆ ರದ್ದು.. ಎಪಿಎಂಸಿ ಕಾಯ್ದೆಗೂ ಬ್ರೇಕ್ ಹಾಕಿದ ಸರ್ಕಾರ

ತನ್ನ ಮತಗಳ ಸಂಖ್ಯೆ ಹೆಚ್ಚಾಗಬೇಕು. ವಿದೇಶಿ ಚಿಂತನೆಯನ್ನು ಹೇರಬೇಕು ಎಂಬ ರೀತಿಯಲ್ಲಿ ಮತಾಂತರವನ್ನು ಬಲವಂತದ ರೀತಿಯಲ್ಲಿ ಮಾಡುವುದರ ವಿರುದ್ಧ ಕಾಯ್ದೆ ತರಲಾಗಿತ್ತು. ಈ ರೀತಿ ಮನೆ ಮನೆಗಳನ್ನು ಒಡೆಯುವ, ಮನ ಮನಗಳನ್ನು ಒಡೆಯುವ ಕೆಲಸಗಳನ್ನು ನೂರಾರು ವರ್ಷಗಳಿಂದ ಮಾಡಲಾಗುತ್ತಿತ್ತು. ಅದಕ್ಕೆ ತಡೆ ಹಾಕಲು ಕಾನೂನು ತರಲಾಗಿತ್ತು. ಆದರೆ ರದ್ದು ಮಾಡುವುದರಿಂದ ಮೋಸದಲ್ಲಿ ಮತಾಂತರ ನಡೆಯುವ ಆತಂಕವನ್ನು ಭಟ್ ವ್ಯಕ್ತಪಡಿಸಿದರು.

ಇದನ್ನೂ ಓದಿ : ಸಂಪುಟ ಸಭೆಯ ಎಲ್ಲ ನಿರ್ಧಾರಗಳೂ ಜನ ವಿರೋಧಿ, ಜನರಿಂದಲೇ ತಕ್ಕ ಪಾಠ: ಅಶ್ವತ್ಥನಾರಾಯಣ ಗರಂ

Last Updated : Jun 16, 2023, 10:48 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.