ಮಂಗಳೂರು: ಮಾಸ್ಕ್ ಹಾಕದ ವಿಚಾರದಲ್ಲಿ ರಿಲಯನ್ಸ್ ಮಾರ್ಟ್ ಮಳಿಗೆ ಸಿಬ್ಬಂದಿ ಹಾಗೂ ಗ್ರಾಹಕರ ನಡುವೆ ಹೊಡೆದಾಟ ನಡೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ದರ್ಬೆಯಲ್ಲಿ ನಡೆದಿದೆ.
ಪುತ್ತೂರಿನಲ್ಲಿರುವ ರಿಲಯನ್ಸ್ ಮಾರ್ಟ್ ಮಳಿಗೆಗೆ ಖರೀದಿಗೆ ಆಗಮಿಸಿದ್ದ ಗ್ರಾಹಕರೊಬ್ಬರು ಮಾಸ್ಕ್ ಹಾಕದೆ ಸರತಿ ಸಾಲಿನಲ್ಲಿ ನಿಂತಿದ್ದರು. ಇದಕ್ಕೆ ಸರದಿಯಲ್ಲಿದ್ದ ಇತರ ಗ್ರಾಹಕರು ಮಳಿಗೆಯ ಸಿಬ್ಬಂದಿ ಬಳಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಆಗ ಮಳಿಗೆ ಸಿಬ್ಬಂದಿ ಮತ್ತು ಮಾಸ್ಕ್ ಧರಿಸದ ವ್ಯಕ್ತಿ ನಡುವೆ ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು, ವ್ಯಕ್ತಿ ತನ್ನ ಗೆಳೆಯರನ್ನು ಕರೆಸಿ ಸಿಬ್ಬಂದಿ ಜೊತೆ ಗಲಾಟೆಗೆ ಮುಂದಾಗಿದ್ದಾನೆ. ಈ ವೇಳೆ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿದೆ ಎನ್ನಲಾಗುತ್ತಿದೆ.
ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.